ಬಂಟ್ವಾಳ: ಭಾರೀ ಮಳೆ, ಹಲವೆಡೆ ಹಾನಿ
ಬಂಟ್ವಾಳ : ತಾಲ್ಲೂಕಿನ ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಆ.05ರಂದು ಶುಕ್ರವಾರ ನೀರಿನ ಮಟ್ಟ ಏರಿಕೆ ಕಂಡು ಬಂದಿದೆ. ಬಂಟ್ವಾಳ ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಹಲವು ಮನೆಗಳಿಗೆ ಹಾನಿ ಉಂಟು ಮಾಡಿದೆ.

ಇಲ್ಲಿನ ಕಸ್ಬಾ ಗ್ರಾಮದ ಅಣ್ಣು ಪರವ ಎಂಬವರ ಮನೆ ಬಳಿ ತಡೆಗೋಡೆ ಇಲ್ಲದೆ ಶೌಚಾಲಯ ಗೋಡೆ ಹಾನಿಗೀಡಾಗಿದೆ. ಕರಿಯಂಗಳ ಗ್ರಾಮದ ರೇವತಿ ಚೆನ್ನಯ ಪೂಜಾರಿ ಮನೆಗೆ ಭಾಗಶಃ ಹಾನಿಯಾಗಿದ್ದು, ಪುದು ಗ್ರಾಮದ ಸುಜೀರು ನಿವಾಸಿ ಹೇಮಾವತಿ ಎಂಬವರ ಮನೆ ಹಾನಿಗೀಡಾಗಿದೆ. ಇಲ್ಲಿನ ನೇತ್ರಾವತಿ ನದಿಯಲ್ಲಿ ಕಳೆದ ಕೆಲವು ದಿನಗಳ ಬಳಿಕ ನೀರಿನ ಮಟ್ಟ ಏರಿಕೆಯಾಗಿರುವುದು ಕಂಡು ಬಂದಿದೆ.