ಜಿ. ಕೃಷ್ಣಪ್ಪ ಮೂಲ್ಯ ನಿಧನ
ಬಂಟ್ವಾಳ: ಬಿ.ಮೂಡ ಗ್ರಾಮ ಬೈಪಾಸ್ ಗಿರಿಮನೆ ನಿವಾಸಿ, ಬಡ್ಡಕಟ್ಟೆ ರಾಯರಚಾವಡಿ ದೈವಸ್ಥಾನದ ಉಪಾಧ್ಯಕ್ಷ, ಜಿ.ಕೃಷ್ಣಪ್ಪ ಮೂಲ್ಯ(೮೦) ಇವರು ಸ್ವಗೃಹದಲ್ಲಿ ಜು.25ರಂದು ಸೋಮವಾರ ನಿಧನರಾದರು. ಮೃತರಿಗೆ ಪತ್ನಿ, ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ.
ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕಿನ ಸಲಹಾ ಸಮಿತಿ ಸದಸ್ಯರಾಗಿ, ಮಂಗಳೂರು ಗಣೇಶ ಬೀಡಿ ವರ್ಕ್ಸ್ನ ನಿವೃತ್ತ ಸಿಬ್ಬಂದಿಯಾಗಿ, ಉದ್ದಮನೆ ಕುಲಾಲ ಬಂಗೇರ ಕುಟುಂಬದ ಅಧ್ಯಕ್ಷರಾಗಿ ಗುರುತಿಸಿಕೊಂಡಿದ್ದರು.