ಬಂಟ್ವಾಳ: ಜಿಲ್ಲಾ ಸಮ್ಮೇಳನ ಲಾಂಛನ ಬಿಡುಗಡೆ ಭಾರತೀಯರ ಸ್ವಾತಂತ್ರ್ಯ ಉಳಿಸಿ: ವಿ.ಕುಕ್ಯಾನ್
ಬಂಟ್ವಾಳ: ಎ.ಶಾಂತಾರಾಮ್ ಪೈ ಸ್ಮಾರಕ ಭವನದಲ್ಲಿ ಜು.18ರಂದು ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸಿಪಿಐ ೨೪ನೇ ಜಿಲ್ಲಾ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಲಾಯಿತು.
ಬಂಟ್ವಾಳ ದೇಶದಲ್ಲಿ ಸ್ವಾತಂತ್ರ್ಯ ದೊರೆತು ೭೫ ವರ್ಷ ಕಳೆದರೂ ಜನಸಾಮಾನ್ಯರು ಮಾತ್ರ ಬದುಕುವ ಹಕ್ಕಿಗಾಗಿ ಹೋರಾಡುತ್ತಲೇ ಇದ್ದಾರೆ. ದೇಶದ ಸಂಪತ್ತು ಖಾಸಗಿ ಬಂಡವಾಳಶಾಹಿಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಕಮ್ಯೂನಿಸ್ಟ್ ಪಕ್ಷ(ಸಿಪಿಐ) ಜಿಲ್ಲಾ ಕಾರ‍್ಯದರ್ಶಿ ವಿ.ಕುಕ್ಯಾನ್ ಹೇಳಿದ್ದಾರೆ.
ಇಲ್ಲಿನ ಎ.ಶಾಂತಾರಾಮ್ ಪೈ ಸ್ಮಾರಕ ಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸಿಪಿಐ ೨೪ನೇ ಜಿಲ್ಲಾ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕೇವಲ ರಾಜಕೀಯ ಲಾಭಕ್ಕೋಸ್ಕರ ನೈಜ ಸ್ವಾತಂತ್ರ್ಯ ಹೋರಾಟಗಾರರನ್ನು ಕಡೆಗಣಿಸಿ, ಬ್ರಿಟೀಷರ ಪರವಾಗಿದ್ದವರನ್ನೇ ಹೋರಾಟಗಾರರು ಎಂದು ಬಿಂಬಿಲಾಗುತ್ತಿದೆ.ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯ ತೆಗೆದು ಕೋಮು ಭಾವನೆ ಎಳೆಯ ಮಕ್ಕಳಿಗೆ ಬಿತ್ತಲಾಗುತ್ತಿದೆ ಎಂದು ಆರೋಪಿಸಿದರು.
ಎಐಟಿಯುಸಿ ಜಿಲ್ಲಾ ಕಾರ‍್ಯದರ್ಶಿ ವಿ.ಎಸ್.ಬೆರಿಂಜ, ಸಮ್ಮೇಳನದ ಸಿದ್ಧತಾ ಸಮಿತಿ ಪ್ರಧಾನ ಕರ‍್ಯದರ್ಶಿ ಬಿ.ಶೇಖರ್, ಸಂಚಾಲಕ ಬಾಬು ಭಂಡಾರಿ, ಪ್ರಮುಖರಾದ ಕರುಣಾಕರ ಮಾರಿಪಳ್ಳ, ಶ್ರೀನಿವಾಸ ಭಂಡಾರಿ, ಪ್ರೇಮನಾಥ, ಸರೋಜಿನಿ ಕುರಿಯಾಳ , ಹರ್ಷಿತ್ ಬಂಟ್ವಾಳ, ಕೇಶವತಿ ಕುರಿಯಾಳ, ಶಮಿತಾ ಕಲ್ಲಡ್ಕ, ಮೋಹನ ಅರಳ, ಎಂ.ಬಿ. ಭಾಸ್ಕರ, ಚಂದಪ್ಪ ನಾವೂರು, ಸುರೇಶ್ ಕುಮಾರ್ ಬಂಟ್ವಾಳ ಇದ್ದರು.