ಬಂಟ್ವಾಳ: ಸಿಎ ಪರೀಕ್ಷೆಯಲ್ಲಿ ತೇರ್ಗಡೆ
ಬಂಟ್ವಾಳ: ಮಾವಿನಕಟ್ಟೆ ನಿವಾಸಿ ವಸುಧಾ ಎನ್. ಇವರು ಸಿಎ ಅಂತಿಮ ಪರೀಕ್ಷೆಯಲ್ಲಿ ೭ನೇ ರ‍್ಯಾಂಕ್ ಗಳಿಸಿ ತೇರ್ಗಡೆಯಾಗಿ ಗಮನ ಸೆಳೆದಿದ್ದಾರೆ. ಬಂಟ್ವಾಳ ಸಿಎ. ದಿನೇಶ್ ಪೈ ಮತ್ತು ಸಿಎ ಸತ್ಯನಾರಾಯಣ ರಾವ್ ಮೈಸೂರು ಇವರಲ್ಲಿ ತರಬೇತಿ ಪಡೆದಿರುವ ಈಕೆ ಮಾವಿನಕಟ್ಟೆ ನಿವಾಸಿ ಎ. ನಾಗೇಂದ್ರ ರಾವ್ ಮತ್ತು ಕವಿತಾ ರಾವ್ ಇವರ ಪುತ್ರಿ.