ಮಾರ್ನಬೈಲು: ಸಜಿಪಮುನ್ನೂರು ಮೂರ್ತೆದಾರರ ೮ನೇ ಶಾಖೆ ಉದ್ಘಾಟನೆ
ಬಂಟ್ವಾಳ: ತಾಲ್ಲೂಕಿನ ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ವತಿಯಿಂದ ಶುಕ್ರವಾರ ಆರಂಭಗೊoಡ ಮಾರ್ನಬೈಲು ೮ನೇ ಶಾಖೆ ಕಚೇರಿಯನ್ನು ನಂದಾವರ ಕ್ಷೇತ್ರದ ಪ್ರಧಾನ ಅರ್ಚಕ ವೇದಮೂರ್ತಿ ಮಹೇಶ್ ಭಟ್ ಉದ್ಘಾಟಿಸಿದರು.
ರೈತರು ಮತ್ತು ಬಡ ಮೂರ್ತೆದಾರರು ಹಾಗೂ ಕೂಲಿ ಕಾರ್ಮಿಕರಿಗೆ ಸ್ವ ಉದ್ಯೋಗ ಕೈಗೊಳ್ಳಲು ನೆರವು ನೀಡುವುದರ ಜೊತೆಗೆ ಮಹಿಳೆಯರಲ್ಲಿ ಸ್ವಾವಲಂಬನೆ ಮೂಡಿಸುವಲ್ಲಿ ಮೂರ್ತೆದಾರರ ಸೇವಾ ಸಹಕಾರಿ ಸಂಘ ಸಹಕಾರಿಯಾಗಲಿದೆ ಎಂದು ಸಜಿಪಮುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಬೀನಾ ಹೇಳಿದರು.

ಇಲ್ಲಿನ ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ವತಿಯಿಂದ ಶುಕ್ರವಾರ ಆರಂಭಗೊAಡ ಮಾರ್ನಬೈಲು ೮ನೇ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.
ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ರಹಶ್ರೀ ನಾರಾಯಣ ಗುರುಗಳ ತತ್ವ ಸಿದ್ದಾಂತ ಪಾಲನೆ ಜೊತೆಗೆ ಎಲ್ಲಾ ಶಾಖೆಯಲ್ಲಿ ಮಹಿಳಾ ಸಿಬ್ಬಂದಿ ನೇಮಕಗೊಳಿಸಲಾಗಿದೆ ಎಂದರು.
ನoದಾವರ ಕ್ಷೇತ್ರದ ಪ್ರಧಾನ ಅರ್ಚಕ ವೇದಮೂರ್ತಿ ಮಹೇಶ್ ಭಟ್ ಕಚೇರಿ ಉದ್ಘಾಟಿಸಿ ಶುಭ ಹಾರೈಸಿದರು. ಮಾಜಿ ಸೈನಿಕ ಅಲೆಗ್ಸಾಂಡರ್ ಲೋಬೋ ಭದ್ರತಾ ಕೊಠಡಿ ಮತ್ತು ಏರಮಲೆ ಕಾಡೆದಿ ಭದ್ರಕಾಳಿ ದೇವಸ್ಥಾನದ ಪ್ರಧಾನ ಅರ್ಚಕ ಕೇಶವ ಶಾಂತಿ ಗಣಕ ಯಂತ್ರ ಉದ್ಘಾಟಿಸಿದರು.
ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ ಬೀಡಿನ ಪಾಲು, ಸಿಇಒ ಮಮತಾ ಜಿ., ಪ್ರಮುಖರಾದ ಗೋಪಾಲೃಷ್ಣ, ವಿಠಲ ಬೆಳ್ಚಡ, ಅಶೋಕ್ ಪೂಜಾರಿ ಕೋಮಾಲಿ, ಕೆ. ಸುಜಾತ ಮೋಹನದಾಸ, ವಾಣಿ ವಸಂತ, ಶಾಖಾ ವ್ಯವಸ್ಥಾಪಕಿ ನಿಶ್ಮಿತಾ ಇದ್ದರು. ನಿರ್ದೆಶಕ ರಮೇಶ್ ಅನ್ನಪ್ಪಾಡಿ ಸ್ವಾಗತಿಸಿ, ಜಯಶಂಕರ್ ಕಾನ್ಸಲೆ ವಂದಿಸಿದರು. ಗಿರೀಶ್ ಕುಮಾರ್ ಪೆರ್ವ ಕಾರ್ಯಕ್ರಮ ನಿರೂಪಿಸಿದರು.