ಬಂಟ್ವಾಳ: ತಾಲ್ಲೂಕಿನ ಪಂಜಿಕಲ್ಲು ಗ್ರಾಮದ ಮುಕ್ಕುಡದಲ್ಲಿ ಭೂ ಕುಸಿತದಿಂದ ಸಾವನ್ನಪ್ಪಿದ ಕೇರಳ ಮೂಲದ ಮೂರು ಕುಟುಂಬಗಳಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಂಗಳವಾರ ಸಂಜೆ ಬಂಟ್ವಾಳದಲ್ಲಿ ತಲಾ ರೂ ೫ಲಕ್ಷ ಮೊತ್ತದ ಚೆಕ್ ವಿತರಿಸಿದರು. ಸಚಿವ ವಿ.ಸುನಿಲ್ ಕುಮಾರ್, ಶಾಸಕ ರಾಜೇಶ ನಾಯ್ಕ್ ಇದ್ದಾರೆ.

ಪಂಜಿಕಲ್ಲು ಗ್ರಾಮದ ಮುಕ್ಕುಡದಲ್ಲಿ ಜು. ೬ ರಂದು ಭೂ ಕುಸಿತದಿಂದ ಸಾವನ್ನಪ್ಪಿದ ಕೇರಳದ ಮೂವರು ಕಾರ್ಮಿಕರ ಕುಟುಂಬಗಳಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಂಗಳವಾರ ಸಂಜೆ ಬಂಟ್ವಾಳ ನಿರೀಕ್ಷಣಾ ಮಂದಿರದಲ್ಲಿ ತಲಾ ರೂ ೫ ಲಕ್ಷದಂತೆ ಪರಿಹಾರಧನ ಚೆಕ್ ನೀಡಿ ಸಂತ್ವನ ವ್ಯಕ್ತಪಡಿಸಿದರು.

ಮೃತರಾದ ಬಿಜು ಪಾಲಕ್ಕಡ್, ಸಂತೋಷ್ ಅಲಪುರ, ಬಾಬು ಕೊಟ್ಟಾಯಂ ಇವರ ಕುಟುಂಬ ಸದಸ್ಯರು ಚೆಕ್ ಸ್ವೀಕರಿಸಿದರು. ಇದೇ ವೇಳೆ ಪಂಜಿಕಲ್ಲು ಸಹಿತ ತಾಲ್ಲೂಕಿನ ವಿವಿಧೆಡೆ ಉಂಟಾದ ಭೂಕುಸಿತ ಮತ್ತು ಮಳೆಹಾನಿ ದೃಶ್ಯಗಳನ್ನು ಲ್ಯಾಪ್ಟಾಪ್ ಮೂಲಕ ಮುಖ್ಯಮಂತ್ರಿ ವೀಕ್ಷಿಸಿ ಹೆಚ್ಚಿನ ಪರಿಹಾರಧನ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.

ಸಂಸದ ನಳಿನ್ ಕುಮಾರ್ ಕಟೀಲು, ಕಂದಾಯ ಸಚಿವ ಆರ್.ಆಶೋಕ್, ಸಚಿರಾದ ಎಸ್.ಆಂಗಾರ, ವಿ.ಸುನಿಲ್ ಕುಮಾರ್, ಸಿ.ಸಿ.ಪಾಟೀಲ್, ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಸಂಜೀವ ಮಠಂದೂರು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಸಹಾಯಕ ಕಮಿಷನರ್ ಮದನ್ ಮೋಹನ್, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಕುಮಾರ್, ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ, ಅಲೆಮಾರಿ ನಿಗಮ ಅಧ್ಯಕ್ಷ ರವೀಂದ್ರ ಶೆಟ್ಟಿ, ಮೈಸೂರು ಎಲೆಕ್ಟ್ರಿಕಲ್ ನಿಗಮ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರು, ನಗರ ನೀರು ಸರಬರಾಜು ಮತ್ತು ಒಳಚರಂಡಿ ನಿಗಮ ಸದಸ್ಯೆ ಸುಲೋಚನ ಜಿ.ಕೆ.ಭಟ್, ಬೂಡ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ , ತಹಶೀಲ್ದಾರ್ ಡಾ.ಸ್ಮಿತಾ ರಾಮು, ಪಿಡಿಒ ವಿದ್ಯಾ, ಗ್ರಾಮಕರಣಿಕ ಕುಮಾರ್, ಪಂಜಿಕಲ್ಲು ಗ್ರಾ.ಪಂ.ಅಧ್ಯಕ್ಷ ಸಂಜೀವ ಪೂಜಾರಿ, ಡಿವೈಎಸ್ಪಿ ಪ್ರತಾಪ್ ಥೋರಾಟ್ ಮತ್ತಿತರರು ಇದ್ದರು.

By Suddi9

Leave a Reply

Your email address will not be published. Required fields are marked *