Published On: Tue, Jul 12th, 2022

ಮಳೆರಾಯನ ಆರ್ಭಟಕ್ಕೆ ತಾಲೂಕಿನಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ, ಕೃಷಿಗೆ ಅಪಾರವಾದ ನಷ್ಟ

ಬಂಟ್ವಾಳ: ಮಳೆರಾಯನ ಆರ್ಭಟಕ್ಕೆ ತಾಲೂಕಿನಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ, ಕೃಷಿಗೆ ಅಪಾರವಾದ ನಷ್ಡವುಂಟಾಗಿದ್ದು, ಸರಕಾರದಿಂದ ಗರಿಷ್ಠ ಪ್ರಮಾಣದ ಪರಿಹಾರವನ್ನು ನೀಡುವ ವ್ಯವಸ್ಥೆ ಮಾಡುತ್ತೇನೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಿಳಿಸಿದ್ದಾರೆ.WhatsApp Image 2022-07-12 at 2.58.41 PM

ಪಾಕೃತಿಕ ವಿಕೋಪದಲ್ಲಿ ಅತೀ ಹೆಚ್ಚು ಹಾನಿಯಾದ ಬಂಟ್ವಾಳ ತಾಲೂಕಿನ ಕಾವಳಪಡೂರು,ಅರಳ, ಸಂಗಬೆಟ್ಟು ,ಕಾಡಬೆಟ್ಟು ಗ್ರಾಮಗಳಿಗೆ ತೆರಳಿ ಅಲ್ಲಿನ ಸ್ಥಿತಿ ಗತಿಯನ್ನು ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು.WhatsApp Image 2022-07-12 at 2.58.40 PM

ಅತೀ ಹೆಚ್ಚು ಹಾನಿಯಾದ ಅರಳ ಗ್ರಾಮದ ಪೊರ್ಕಳ ಬಂಡಶಾಲೆ ರಸ್ತೆ, ನವಗ್ರಾಮದ ಮನೋಹರ ಕುಲಾಲ್ ಅವರ ಗುಡ್ಡ ಕುಸಿತ, ತಿಮ್ಮಪ್ಪ ನಾಯ್ಕ್ ಹಾಗೂ ರಾಮ ಶೆಟ್ಟಿಗಾರ್ ಮನೆಗೆ ಹಾನಿ, ರೊಡಾಲ್ಪೋ ಅವರ ಮನೆಗೆ ಹಾನಿ, ರಿಯಾಜ್ ಮನೆಗೆ ಹಾನಿ, ರೊನಾಲ್ಡ್ ಮನೆಗೆ ಹಾನಿ, ಅಪ್ಪು ನಾಯ್ಕ್ ಕಂಪೌಂಡ್, ಸಂಗಬೆಟ್ಟು ಗ್ರಾಮದ ಗಾಡಿಪಲ್ಕೆ ನೋಣಯ್ಯ ಮೂಲ್ಯ ಅವರ ಮನೆಗೆ ಹಾನಿ, ಕಾಡಬೆಟ್ಟು ಗ್ರಾಮದ ಬೊಗ್ರುಕುಮೇರು ಗಣೇಶ್ ಎಂಬವರ ಮನೆಗೆ ಹಾನಿ, ಬೋಗ್ರುಕುಮೇರು ಗೋಪಾಲ ಎಂಬವರ ಮನೆಗೆ ಹಾನಿ, ಕಾವಳಪಡೂರು ಗ್ರಾಮದ ಕುಳಿಂಜಿಲಕೋಡಿ ರಘು ಮೊಗರ ಅವರ ಮನೆಗೆ ಹಾನಿ, ಕುಲಿಂಜಿಲಕೋಡಿ ರಾಜೇಶ್ವರಿ ಎಂಬವರ ಮನೆಗೆ ಹಾನಿಯಾನಿ, ಪದ್ಮಾವತಿ ವಸಂತ ಅವರ ಮನೆಗೆ ಹಾನಿಯಾಗಿದ್ದು ಇವರ ಮನೆಗೆ ಶಾಸಕರು ಅಧಿಕಾರಿಗಳ ಜೊತೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.WhatsApp Image 2022-07-12 at 2.58.40 PM (2)

ಈ ಹಿಂದೆ ಕನಿಷ್ಠ ಪ್ರಮಾಣದಲ್ಲಿ ಪರಿಹಾರವನ್ನು ನೀಡುತ್ತಿದ್ದು, ಅದು ಸಾಕಾಗುವುದಿಲ್ಲ ಎಂಬ ಕಾರಣದಿಂದ ಸಿ.ಎಂ.ಬೊಮ್ಮಾಯಿ ನೇತ್ರತ್ವದ ಸರಕಾರ ಅಧಿಕಾರಿಗಳ ಮೂಲಕ ನಷ್ಟದ ಸಂಪೂರ್ಣ ಮಾಹಿತಿ ಪಡೆದ ಬಳಿಕ ಗರಿಷ್ಠ ಪ್ರಮಾಣದ ಪರಿಹಾರವನ್ನು ನೀಡಲು ಮುಂದಾಗಿದೆ. ಪ್ರತಿ ಗ್ರಾಮದಲ್ಲಿ ಹಾನಿಯಾದ ವಿವರಗಳನ್ನು ಅಧಿಕಾರಿಗಳು ವರದಿ ನೀಡಲು ಸೂಚಿಸಿದ್ದೇನೆ.WhatsApp Image 2022-07-12 at 2.58.40 PM (1)

ಜೊತೆಗೆ ಹಾನಿಯಾದ ಸಂದರ್ಭದಲ್ಲಿ ಸ್ಥಳದಲ್ಲಿಯೇ 10 ಸಾವಿರ ಹಣವನ್ನು ನೀಡುವಂತೆ ಸರಕಾರ ಅದೇಶ ಮಾಡಿದೆ. ಮುಂಜಾಗ್ರತಾ ಕ್ರಮವಾಗಿ ಸಕಲ ವ್ಯವಸ್ಥೆಗಳನ್ನು ಕೈಗೊಳ್ಳಲು ತಾಲೂಕಿನ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದರು.WhatsApp Image 2022-07-12 at 2.58.39 PM

ಕಾವಳಮೂಡೂರು ಗ್ರಾಮಪಂಚಾಯತ್ ಅಜಿತ್ ಕುಮಾರ್, ಸದಸ್ಯ ಶರ್ಮಿತ್ ಜೈನ್, ಕಾಡಬೆಟ್ಟು ಗ್ರಾ.ಪಂ.ಸದಸ್ಯ ಪ್ರಮೋದ್ ಕುಮಾರ್ ರೈ, ದಿನೇಶ್ ಕಾಡಬೆಟ್ಟು, ಜಿನೇಂದ್ರ ಜೈನ್, ಪಿ.ಡಿ.ಒ.ಪಂಕಜಾ ಶೆಟ್ಟಿ, ಗ್ರಾಮ ಕರಣೀಕೆ ಆಶಾ ಮೆಹಂದಲೆ, ನಗರ ಒಳಚರಂಡಿ ಮತ್ತು ನೀರು ಸರಬರಾಜು ನಿಗಮದ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್, ಪಿ.ಎಲ್ ಡಿ ಬ್ಯಾಂಕ್ ನಾಮ ನಿರ್ದೇಶಕ ಸುದರ್ಶನ್ ಬಜ , ಅರಳ ಗ್ರಾಮ ಪಂಚಾಯತ್ ಅಧ್ಯಕ್ಷ ಲಕ್ಮೀಧರ ಶೆಟ್ಟಿ, ಸದಸ್ಯರಾದ ಜಗದೀಶ್ ಅಳ್ವ, ಉಮೇಶ್ ಅರಳ, ಪ್ರಸನ್ನ ಶೆಟ್ಟಿ, ಅರಳ ಗ್ರಾಮ ಪಂಚಾಯತ್ ಕಂದಾಯ ನಿರೀಕ್ಷಕ ಸಂತೋಷ್, ಗ್ರಾಮ ಕರಣೀಕ ಅಮೃತ್ ವಂಶು, ಪಿ.ಡಿ.ಒ.ಧರ್ಮರಾಜ್, ಸಂಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ, ಉಪಾಧ್ಯಕ್ಷೆ ವಿಮಲಮೋಹನ್, ಗ್ರಾಮ ಕರಣೀಕ ಪರೀಕ್ಷಿತ್ ಶೆಟ್ಟಿ, ಪ್ರಮುಖರಾದ ರತ್ನಕುಮಾರ್ ಚೌಟ, ವಸಂತ ಅಣ್ಣಳಿಕೆ ಮತ್ತಿತರರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter