ಬಂಟ್ವಾಳ: ನೇತ್ರಾವತಿ ನದಿಯಲ್ಲಿ ನೆರೆ ಇಳಿಕೆ ಅಜಿಲಮೊಗರು ಎಂಬಲ್ಲಿ ಕಾಣಿಸಿಕೊಂಡ ಮೊಸಳೆ
ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಭಾನುವಾರ ೮.೬ ಮೀಟರ್ ಏರಿಕೆಯಾಗಿದ್ದ ನೀರಿನ ಮಟ್ಟ ೭.೩ ಮೀಟರಿಗೆ ಇಳಿಯುವ ಮೂಲಕ ಸೋಮವಾರ ಸಹಜ ಸ್ಥಿತಿಗೆ ಮರಳಿದೆ. ಮಳೆಯೂ ಕಡಿಮೆಯಾಗಿದ್ದು, ವಿವಿಧೆಡೆ ಭೂಕುಸಿತ ಮತ್ತು ಮಳೆಹಾನಿ ಘಟನೆ ಮಾತ್ರ ಮುಂದುವರಿದಿದೆ.
ಈಚೆಗಷ್ಟೇ ಇಲ್ಲಿನ ನೇತ್ರಾವತಿ ನದಿಯಲ್ಲಿ ಮೊಸಳೆ ಮರಿಯೊಂದು ಕಾಣಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿತ್ತು. ಇದೀಗ ಮತ್ತೆ ಅಜಿಲಮೊಗರು ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಮೊಸಳೆಯೊಂದು ಸೋಮವಾರ ಕಾಣಿಸಿಕೊಂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆ ಸಂದೇಶ ರವಾನೆಯಾಗುತ್ತಿದೆ.