ಇರಾಕ್ : ಐ.ಎಸ್.ಐ.ಎಸ್ ಉಗ್ರ ಸಂಘಟನೆಯನ್ನ ಸೆದೆಬಡಿಯಲು ಅಮೆರಿಕ ಸನ್ನದ್ಧವಾಗಿದೆ. ಇರಾಕ್ ಜೊತೆಗೂಡಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಅಮೆರಿಕ, ಐಸಿಸ್ ಮುಖ್ಯಸ್ಥ ಅಬು ಬಕಾರ್ ಅಲ್ ಬಾಗ್ದಾದಿಯನ್ನ ಹತ್ಯೆ ಮಾಡಿದೆ ಎನ್ನಲಾಗುತ್ತಿದೆ.
ಕೆಲ ದಿನಗಳ ಹಿಂದೆ ಅಮೆರಿಕಾದ ನಡೆಸಿದ ವಾಯುದಾಳಿಯಲ್ಲಿ ಬಾಗ್ದಾದಿ ಗಂಭೀರವಾಗಿ ಗಾಯಗೊಂಡಿದ್ದ. ಈಗ ಆತ ಸಾವನ್ನಪ್ಪಿದ್ದಾನೆ ಅಂತಾ ಹೇಳಲಾಗಿದೆ. ಈ ಸಂಬಂಧ ಇರಾಕ್ ಸರ್ಕಾರ ತನಿಖೆಗೆ ಆದೇಶಿಸಿದೆ. ಒಂದೇ ವೇಳೆ ಬಾಗ್ದಾದಿ ಸಾವನ್ನಪ್ಪಿರುವುದು ಖಚಿತವಾದರೆ ಅಮೆರಿಕ ಮತ್ತು ಇರಾಕ್ ಜಂಟಿ ಕಾರ್ಯಾಚರಣೆಗೆ ಬಹುದೊಡ್ಡ ಜಯ ಸಿಕ್ಕಂತಾಗುತ್ತದೆ.

