ಕಳ್ಳಿಗೆ ಗ್ರಾಮದ ಜಾರಂದಗುಡ್ಡೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರ ಜನುಮ ದಿನ ಆಚರಣೆ
ಕಳ್ಳಿಗೆ: ಗ್ರಾಮದ ಜಾರಂದಗುಡ್ಡೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಜನುಮ ದಿನ ಆಚರಿಸಲಾಯಿತು. ಶಾಸಕರ ಪರವಾಗಿ ಕು. ನಿಶಾನ್ ಕಂಜತ್ತೂರು ಕೇಕ್ ಕತ್ತರಿಸಿ ಸಂಭ್ರಮಿಸಿದರು. ಅಪಘಾತದಲ್ಲಿ ತನ್ನ ಹೆತ್ತವರು ಹಾಗೂ ತನ್ನ ಒಂದು ಕಾಲನ್ನು ಕಳೆದುಕೊಂಡ ಬಳಿಕ ಬಂಟ್ವಾಳ ಶಾಸಕ ರಾಜೇಶಣ್ಣ ತನ್ನ ಜೀವಕ್ಕೆ, ಜೀವನಕ್ಕೆ ಆಸರೆಯಾಗಿ ಕತ್ತಲೆ ತುಂಬಿದ ಬಾಳಲ್ಲಿ ಬೆಳಕು ತಂದಿದ್ದಾರೆ. ಅವರಿಗೆ ದೇವರು ದೀರ್ಘಾಯುಷ್ಯವನ್ನು ಕರುಣಿಸಿ, ಇನ್ನಷ್ಟು ಒಳಿತನ್ನು ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ನಿಶಾಂತ್ ನುಡಿದರು.
ವೀಡಿಯೋ ಕಾಲ್ ಮೂಲಕ ಬೆಂಗಳೂರಿನ ಕಚೇರಿಯಿಂದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ ಶಾಸಕ ರಾಜೇಶ್ ನಾಯ್ಕ್ ಹಾಗೂ ಬೂಡಾ ಅಧ್ಯಕ್ಷ ಶ್ರೀ ದೇವದಾಸ್ ಶೆಟ್ಟಿ ಯವರು ಮಾ. ನಿಶಾನ್ ಯೋಗಕ್ಷೇಮ ವಿಚಾರಿಸಿ ಕುಟುಂಬಸ್ಥರಿಗೆ ಧನ್ಯವಾದ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿಕಾಸ್ ಪುತ್ತೂರು, ಮಂಡಲ ಕಾರ್ಯದರ್ಶಿ ರಮಾನಾಥ ರಾಯಿ, ಜಿಪಂ ಸದಸ್ಯ ರವೀಂದ್ತ ಕಂಬಳಿ, ಕಳ್ಳಿಗೆ ಗ್ರಾಪಂ ಅಧ್ಯಕ್ಷೆ ಶ್ರೀಮತಿ ಯಶೋದಾ ಜಾರಂದಗುಡ್ಡೆ, ಸದಸ್ಯ ಮನೋಜ್ ವಳವೂರು, ಪ್ರಮುಖರಾದ ಮಾಧವ ವಳವೂರು, ಪ್ರಣಾಮ್ ರಾಜ್ ಅಜ್ಜಿಬೆಟ್ಟು, ಯಶವಂತ ನಗ್ರಿ, ಮಹೇಶ್ ಶೆಟ್ಟಿ ಜುಮಾದಿಗುಡ್ಡೆ, ದೇವಿಪ್ರಸಾದ್ ಎಂ, ಪ್ರಶಾಂತ್, ಅಭಿ, ಕಿಶೋರ್ ಜಾರಂದಗುಡ್ಡೆ, ದಿವಾಕರ ದೇರ್ಲಕ್ಕೆ, ಉಮಾಶಂಕರ ಅಮೀನ್, ಪೂಜೇಶ್ ಜಾರಂದಗುಡ್ಡೆ, ರಕ್ಷಣ್ ದೇವಂದಬೆಟ್ಟು, ರತ್ನಾಕರ ಕಂಜತ್ತೂರು, ಸುಧೀರ್ ಕಂಜತ್ತೂರು ಮತ್ತಿತರರು ಉಪಸ್ಥಿತರಿದ್ದರು.