ಬಂಟ್ವಾಳ : ದೀನ್ ದಯಾಳ್ ಅಂತ್ಯೋದಯ ಯೋಜನೆ , ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ನಗರದ ಬೀದಿ ಬದಿ ವ್ಯಾಪಾರಿಗಳ ಬೆಂಬಲ ಉಪ ಘಟಕದಡಿ – ಬೀದಿ ಬದಿ ವ್ಯಾಪಾರಿಗಳಿಗೆ –ಅಧಿ ನಿಯಮ ಮತ್ತು ಯೋಜನೆಗಳ ಕುರಿತು ತರಬೇತಿ ಕಾರ್ಯಾಗಾರವು ಪುರಸಭಾ ಸಭಾಂಗಣದಲ್ಲಿ ಜರಗಿತು.DSC_1567

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಬೀದಿ ಬದಿ ವ್ಯಾಪಾರಿಗಳ ಅಧಿನಿಯಮದ ನಿಯಮಾವಳಿಯಂತೆ ತಾವು ವ್ಯಾಪಾರ ವಹಿವಾಟು ನಿರ್ವಹಿಸಬೇಕು. ಬೀದಿ ಬದಿ ವ್ಯಾಪಾರಿಗಳು ಈ ನಿಟ್ಟಿನಲ್ಲಿ ಪುರಸಭೆಯೊಂದಿಗೆ ಸಹಕರಿಸಬೇಕೆಂದುಕರೆ ನೀಡಿದರು.DSC_1563

ಕಾರ್ಯಕ್ರಮದಲ್ಲಿ ಪುರಸಭಾ ಉಪಾಧ್ಯಕ್ಷೆ ಜೆಸಿಂತಾ ಡಿಸೋಜ ,ಒಕ್ಕೂಟದ ಅಧ್ಯಕ್ಷೆ ವಸಂತಿ, ಪುರಸಭಾಕಛೇರಿ ವ್ಯವಸ್ಥಾಪಕಿ ಲೀಲಾವತಿ ಉಪಸ್ಥಿತರಿದ್ದರು. ಜಿಲ್ಲಾಕೌಶಲ್ಯಾಭಿವೃದ್ಧಿ ಇಲಾಖೆಯ ಅಭಿಯಾನ ವ್ಯವಸ್ಥಾಪಕರಾದ ಐರಿನ್‌ ರೆ ಬೆಲ್ಲೋ ಡೇ-ನಲ್ಮ್ ಯೋಜನೆಯಡಿ ಇರುವ ವಿವಿಧ ಉಪಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ನ್ಯಾಯವಾದಿ ಶಿವಪ್ರಕಾಶ್ ಜೈನ್‌ಬೀದಿ ಬದಿ ವ್ಯಾಪಾರಿಗಳ ಅಧಿನಿಯಮದ ಬಗ್ಗೆ ಮಾಹಿತಿ ನೀಡಿದರು. ಕರ್ನಾಟಕ ಬ್ಯಾಂಕಿನ ಆರ್ಥಿಕ ಸಂಪನ್ಮೂಲ ಕೇಂದ್ರದ ಅನುಷಾ ಸರಕಾರದ ವಿವಿಧ ಯೋಜನೆಗಳ  ಬಗ್ಗೆ ಮಾಹಿತಿ ನೀಡಿದರು. ಸಿಆರ್ ಪಿ ಮಂಗಳ ಸ್ವಾಗತಿಸಿದರು.ಸಿಆರ್ ಪಿ ಗೀತಾ ವಂದಿಸಿ ಪ್ರಭಾರ ಸಮುದಾಯ ವ್ಯವಹಾರ ಅಧಿಕಾರಿ ಉಮಾವತಿ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *