ಬಂಟ್ವಾಳ: ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ
ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಶಾಸಕರ ಕಚೇರಿಯಲ್ಲಿ ಅರ್ಹ ಫಲಾನುಭವಿಗಳಿಗೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಜು.09ರಂದು ಶನಿವಾರ ಹಕ್ಕುಪತ್ರ ವಿತರಿಸಿದರು. ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ೨೦೬೦ ಮನೆ ಮಂಜೂರಾಗಿದ್ದು, ಸಾವಿರಕ್ಕೂ ಅಧಿಕ ಮಂದಿ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಿಸಲಾಗಿದೆ. ಇದೀಗ ಬಾಕಿ ಉಳಿದ ಫಲಾನುಭವಿಗಳಿಗೆ ೯೪ಸಿ ಹಕ್ಕುಪತ್ರ ವಿತರಣೆಯಾಗುತ್ತಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಇಲ್ಲಿನ ಬಿ.ಸಿ.ರೋಡು ಶಾಸಕರ ಕಚೇರಿಯಲ್ಲಿ ಅರ್ಹ ಫಲಾನುಭವಿಗಳಿಗೆ ಶನಿವಾರ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು. ಸಂಗಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಪೂಜಾರಿ, ಪ್ರಮುಖರಾದ ಸುಲೋಚನ ಜಿ.ಕೆ.ಭಟ್, ರಮನಾಥ ರಾಯಿ, ಗಣೇಶ್ ರೈ ಮಾಣಿ, ಮಚ್ಚೇಂದ್ರ ಸಾಲ್ಯಾನ್, ಯಶವಂತ ನಾಯ್ಕ್, ಸದಾನಂದ ನಾವೂರು, ವಿಶ್ವನಾಥ ಚಂಡ್ತಿಮಾರ್, ಸಾಂತಪ್ಪ ಪೂಜಾರಿ, ದಯಾನಂದ ಸುಳ್ಯ, ಮನೋಜ್ ವಳವೂರು, ಪಿಡಿಒ ರಾಜಶೇಖರ ರೈ, ತಾಲ್ಲೂಕು ಪಂಚಾಯಿತಿ ಇಒ ರಾಜಣ್ಣ, ಸಿಬ್ಬಂದಿ ಗಣೇಶ್ ಶೆಟ್ಟಿಗಾರ್, ಕಂದಾಯ ನಿರೀಕ್ಷಕ ಸಂತೋಷ್, ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ್, ಸ್ವಾತಿ ಕೊಟ್ಟಾರಿ, ನಿಶ್ಮಿತಾ, ಅಶ್ವಿನಿ ಇದ್ದರು.