ಬೆಂಜನಪದವು: ವೃದ್ಧೆ ತಾಯಿಯನ್ನು ಶೌಚಾಲಯದಲ್ಲಿ ಕೂಡಿ ಹಾಕಿದ ದಂಪತಿ ವಿರುದ್ಧ ದೂರು
ಬಂಟ್ವಾಳ: ಇಲ್ಲಿನ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬೆಂಜನಪದವು ಕರಾವಳಿ ಸೈಟ್ ಎಂಬಲ್ಲಿ ವೃದ್ಧೆ ತಾಯಿಯನ್ನು ಶೌಚಾಲಯದಲ್ಲಿ ಕೂಡಿ ಹಾಕಿದ ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ. ಇಲ್ಲಿನ ನಿವಾಸಿ ಹರಿರಾಮ್ ಪೂಜಾರಿ ಎಂಬವರ ಮನೆ ಜಗುಲಿಯಲ್ಲಿ ಕಳೆದ ೨ ವರ್ಷಗಳ ಹಿಂದೆ ಕಾಲು ಜಾರಿ ಬಿದ್ದು ಗಾಯಗೊಂಡಿದ್ದು, ಇವರಿಗೆ ಸೂಕ್ತ ಚಿಕಿತ್ಸೆ ನೀಡದ ಪರಿಣಾಮ ಅವರು ಹಾಸಿಗೆ ಹಿಡಿದಿದ್ದರು.
ಇವರ ಪುತ್ರ ಹರಿರಾಮ್ ಪೂಜಾರಿ ಮತ್ತು ಸೊಸೆ ಪೂಜಾ ಇವರನ್ನು ಮನೆಯ ಶೌಚಾಲಯದಲ್ಲಿ ಕೂಡಿ ಹಾಕಿ ಒಂದು ಹೊತ್ತು ಮಾತ್ರ ಊಟ ಮತ್ತು ಚಹಾ ನೀಡುತ್ತಿದ್ದರು. ಉಳಿದಂತೆ ಸೊಸೆ ಪೂಜಾ ಪದೇ ಪದೇ ಅವರನ್ನು ಬೈದು ಹೀಯಾಳಿಸುತ್ತಿರುವ ಬಗ್ಗೆ ಬುಧವಾರ ಮಧ್ಯಾಹ್ನ ಹಿರಿಯ ನಾಗರಿಕ ಸಮಿತಿಗೆ ಮಾಹಿತಿ ತಿಳಿದು ಅವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆರೋಪಿ ದಂಪತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.