ಬಂಟ್ವಾಳ ಪುರಸಭೆ: ಬೀದಿ ವ್ಯಾಪಾರಿಗಳಿಗೆ ತರಬೇತಿ ಕಾರ್ಯಾಗಾರ
ಬಂಟ್ವಾಳ: ಪುರಸಭೆಯಲ್ಲಿ ದೀನದಯಾಳ್ ಅಂತ್ಯೋದಯ ಯೋಜನೆ ಮತ್ತು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಬೀದಿ ವ್ಯಾಪಾರಿಗಳಿಗಾಗಿ ಗುರುವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರವನ್ನು ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಉದ್ಘಾಟಿಸಿದರು. ಉಪಾಧ್ಯಕ್ಷೆ ಜೆಸಿಂತಾ ಡಿಸೋಜ ಇದ್ದಾರೆ.
ಇಲ್ಲಿನ ಪುರಸಭೆಯಲ್ಲಿ ದೀನದಯಾಳ್ ಅಂತ್ಯೋದಯ ಯೋಜನೆ ಮತ್ತು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಬೀದಿ ವ್ಯಾಪಾರಿಗಳಿಗಾಗಿ ಗುರುವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರವನ್ನು ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಉದ್ಘಾಟಿಸಿದರು.
ಬೀದಿ ಬದಿ ವ್ಯಾಪಾರಿಗಳ ಅಧಿ ನಿಯಮದ ನಿಯಮಾವಳಿಯಂತೆ ವ್ಯಾಪಾರ ವಹಿವಾಟು ನಿರ್ವಹಿಸಬೇಕು ಎಂದು ಅವರು ಹೇಳಿದರು. ಪುರಸಭಾ ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಒಕ್ಕೂಟ ಅಧ್ಯಕ್ಷೆ ವಸಂತಿ ಗಂಗಾಧರ್, ಕಛೇರಿ ವ್ಯವಸ್ಥಾಪಕಿ ಲೀಲಾವತಿ, ಜಿಲಾ ್ಲಕೌಶಲ್ಯಾಭಿವೃದ್ಧಿ ಇಲಾಖೆ ವ್ಯವಸ್ಥಾಪಕಿ ಐರಿನ್ ರೆಬೆಲ್ಲೋ, ವಕೀಲ ಶಿವಪ್ರಕಾಶ್ ಜೈನ್, ಮಂಗಳ, ಗೀತಾ, ಉಮಾವತಿ ಮತ್ತಿತರರು ಇದ್ದರು.