Published On: Tue, Jun 28th, 2022

ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಋಣ ಸಂದಾಯದಕ್ಕೆ ಹಣಕ್ಕಿಂತ ಸದ್ಗುಣ ಮುಖ್ಯ : ಡಾ| ಶಿವರಾಮ ಭಂಡಾರಿ

ಮುಂಬಯಿ: ಹೆತ್ತ ತಾಯಿ, ಬೋಧಿಸಿದ ಗುರುಗಳು, ಕಲಿತ ಶಾಲೆ, ಹುಟ್ಟೂರ ಋಣ ಪೂರೈಸುವುದು ಬುದ್ಧಿಜೀವಿಗಳಾದ ಮಾನವ ಧರ್ಮವಾಗಿದೆ. ಗಳಿಕೆಯ ಒಂದಿಷ್ಟು ಭಾಗ ಇಂತಹ ಅವಕಾಶಗಳಿಗೆ ಬಳಸಿದಾಗ ನಮ್ಮ ಋಣ ಸಂದಾಯವಾಗುವುದು. ಋಣ ಸಂದಾಯದಕ್ಕೆ ಹಣಕ್ಕಿಂತ ಸದ್ಗುಣಗಳು ಮುಖ್ಯವಾದುದು ಎಂದು ಶಿವಾಸ್ ಹೇರ್ ಡಿಸೈನರ್ ಪ್ರೈವೇಟ್ ಲಿಮಿಟೆಡ್ ಆಡಳಿತ ನಿರ್ದೇಶಕ ಹಾಗೂ ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್  ನ ಸಂಸ್ಥಾಪಕ ಡಾ| ಶಿವರಾಮ ಕೆ. ಭಂಡಾರಿ ತಿಳಿಸಿದರು.St. Lawrence School Atturu Karkala C2

ಕಳೆದ ಶುಕ್ರವಾರ ತಾನು ಕಲಿತ ಅತ್ತೂರು ಸಂತ ಲೋರೆನ್ಸ್ ಶಿಕ್ಷಣ ಸಂಸ್ಥೆಯ ವಿದ್ಯಾಥಿsð ಪಾಲಕ ಶಿಕ್ಷಕರ ಸಭೆಯಲ್ಲಿ ಮುಖ್ಯ ಅತಿಥಿಯಾಗಿದ್ದು ತಾನು ಕಲಿತ ಶಾಲಾ ದಿನಗಳ ಮೆಲುಕು ಹಾಕುತ್ತ ಈ ವಿದ್ಯಾ ಸಂಸ್ಥೆ ತನಗೆ ನೀಡಿದ ಬಾಲ್ಯದ ಸಂಸ್ಕಾರವನ್ನು ಸ್ಮರಿಸಿಕೊಂಡ ಶಿವರಾಮ ಭಂಡಾರಿ, ಶಾಲಾ ಅಭಿವೃದ್ಧಿಯಲ್ಲಿ ಹಳೆ ವಿದ್ಯಾರ್ಥಿಗಳ ಪಾತ್ರ ಮಹತ್ವವಾದದ್ದು ಎಂದರು.St. Lawrence School Atturu Karkala C2

ಶಾಲಾ ಸಂಚಾಲಕ, ಪವಿತ್ರ ಅತ್ತೂರು ಧರ್ಮ ಕೇಂದ್ರದ ಧರ್ಮಗುರು ವಂ| ಫಾ| ಆಲ್ಬನ್ ಡಿಸೋಜ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಶಾಲಾ ಮಕ್ಕಳ ಶಿಕ್ಷಣಕ್ಕೆ ನೀಡುವ ಸಹಕಾರ ದೇವರಿಗೆ ಅರ್ಪಿತವಾದಂತೆ ಎಂದೇಳಿ ಶಿವರಾಮ ಭಂಡಾರಿ ಮತ್ತು ಮಂಜುನಾಥ ನಾಯಕ್ ಜೋಡುರಸ್ತೆ ಇವರನ್ನು ಸನ್ಮಾನಿಸಿ ದಾನಿಗಳನ್ನು ಆಶೀರ್ವದಿಸಿದರು.St. Lawrence School Atturu Karkala C1

ಇದೇ ಸಂದರ್ಭದಲ್ಲಿ ಗುಲಾಬಿ ಕೃಷ್ಣ ಭಂಡಾರಿ ಟ್ರಸ್ಟ್ ನೀಡಿದ ಸಮವಸ್ತ್ರ ಮಂಜುನಾಥ ನಾಯಕ್ ಜೋಡುರಸ್ತೆ ಇವರು ನೀಡಿರುವ ಬರವಣಿಗೆ ಪುಸ್ತಕ ಹಾಗೂ ಶಾಲಾ ಹಳೆ ವಿದ್ಯಾಥಿsðನಿ ಸುಷ್ಮಾ ಹೆಗ್ಡೆ ಒದಗಿಸಿದ ಐಡಿ ಕಾರ್ಡುಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.St. Lawrence School Atturu Karkala A3

ಕಾರ್ಯಕ್ರಮದಲ್ಲಿ ಅತಿಥಿ ಅಭ್ಯಾಗತರುಗಳಾಗಿ ಸಂತ ಲೋರೆನ್ಸ್ ಹಿ.ಪ್ರಾ.ಶಾಲೆಯ ನಿವೃತ್ತಿ ಶಿಕ್ಷಕಿ ಲೋನಾ ನೊರೋನ್ಹಾ, ಗುಲಾಬಿ ಕೃಷ್ಣ ಟ್ರಸ್ಟ್ನ ಟ್ರಸ್ಟೀ ಅನುಶ್ರೀ ಎಸ್.ಭಂಡಾರಿ, ಶಾಲಾ ಹಳೆ ವಿದ್ಯಾಥಿsð ಗುರುರಾಜ್ ಭಟ್ ವೇದಿಕೆಯಲ್ಲಿ ಆಸೀನರಾಗಿದ್ದರು.St. Lawrence School Atturu Karkala C2

ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪ್ರದೀಪ್ ನಾಯಕ್ ಸ್ವಾಗತಿಸಿ ಪ್ರಸ್ತಾವನೆಗೈದರು. ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಸಿ| ಪ್ರೆಸಿಲ್ಲಾ ಮಿನೇಜಸ್ ಶಾಲಾ ಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು. ಕನ್ನಡ ಅಧ್ಯಾಪಕ ಸುಬ್ರಹ್ಮಣ್ಯ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು. ವಿಜ್ಞಾನ ಶಿಕ್ಷಕಿ ಎಸ್.ದಿವ್ಯಾ ಧನ್ಯವಾದವಿತ್ತರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter