ಆದಿವಾಸಿ ಕುಟುಂಬ : ಸಂವಾದ, ಕೌಶಲ್ಯತರಬೇತಿ
ಕಲ್ಲಡ್ಕ: ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸಧ್ಯಾನಮಂದಿರದಲ್ಲಿ ಆದಿವಾಸಿ ಕುಟುಂಬದ ಜೊತೆ ಸಂವಾದ ಹಾಗೂ ಕೌಶಲ್ಯ ತರಬೇತಿ ಕಾರ್ಯಕ್ರಮ ನಡೆಯಿತು. ಕೊರಗ ಸಮುದಾಯದ ಮುಖಂಡೆ ಅಂಗಾರೆ ಮಾತನಾಡಿ, “ಕಾಂಡಂಚಿನಲ್ಲಿರುವ ಅನಕ್ಷರಸ್ಥರಾದ ನಮ್ಮನ್ನು ಗುರುತಿಸಿ, ಶಾಲೆಗೆ ಬಂದು ವಿದ್ಯಾರ್ಥಿಗಳ ಜೊತೆಯಿದ್ದು, ನಮಗೆ ತಿಳಿದಿರುವ ಕೌಶಲ್ಯವನ್ನು ಹೇಳಿಕೊಟ್ಟಿರುವುದು ನಮ್ಮ ಜೀವನದ ಅಮೂಲ್ಯ ಕ್ಷಣ” ಎಂದರು
ಸಾಂಪ್ರದಾಯಿಕ ಬುಟ್ಟಿ ಹೆಣೆಯುವ ಕುಲ ಕಸುಬು ಮತ್ತು ಕುಟುಂಬ, ನೇಪಥ್ಯಕ್ಕೆ ಸರಿಯುವ ಈ ದಿನಗಳಲ್ಲಿ ಶ್ರೀರಾಮ ಶಾಲೆಯುವಿಶಿಷ್ಟ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ವಿವಿಧ ಬಳ್ಳಿ ಬಳಸಿ ಬುಟ್ಟಿತಯಾರಿಸುವ ಆದಿವಾಸಿ ಕೊರಗ ಸಮುದಾಯವು ವೃತ್ತಿಯಿಂದ ಹಿಂದೆ ಸರಿಯುತ್ತಿರುವುದು ಇವರನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಕೊರಗ ಸಮುದಾಯದೊಂದಿಗೆ ಸಂವಹನ ಏರ್ಪಡಿಸಲಾಯಿತು.
ಕೊರಗರಜೀವನ ಶೈಲಿ,ಅವರುಎದುರಿಸುತ್ತಿರುವ ಸವಾಲು, ವೃತ್ತಿ, ಅವರ ಬದುಕುಇದರ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ಏರ್ಪಡಿಸಲಾಯಿತು. ಸಂವಾದದಲ್ಲಿ ಬೋಳಂತೂರು ನಾರಂಕೋಡಿಯ ಮೈರೆ, ಬಲ್ಲುಅಂಗಾರೆ ಪಾಲ್ಗೊಂಡು ಅವರುಗಳಿಂದ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ನಂತರಕೊರಗ ಮುಖಂಡೆ ಅಂಗಾರೆ ಇವರಿಂದ ವಿದ್ಯಾರ್ಥಿಗಳಿಗೆ ಬುಟ್ಟಿ, ಕಾಂಟ್ಯ, ಕುಡುಪು, ತೊಟ್ಟೆ, ಕುತ್ತರಿ ಹೆಣೆಯುವ ತರಬೇತಿಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು. ಮೈರೆಯವರು ಬುಟ್ಟಿಗೆ ಬಳಸುವ ವಿವಿಧಜಾತಿಯ ಬಳ್ಳಿಗಳಾದ ಎಂಜಿರ್, ಮಾದೇರ್, ಪೇರ್ ಬಳ್ಳಿಗಳ ಪರಿಚಯ ಮಾಡಿಕೊಟ್ಟರು.
ವಿದ್ಯಾರ್ಥಿ ನಾಯಕನಾದ ಆಕಾಶ್ ಕೆ, “ಇಂತಹ ಕೌಶಲ್ಯ ತರಬೇತಿ ಹಾಗೂ ಸಂವಾದ ಏರ್ಪಡಿಸಿರುವುದು ಸಂತಸದ ಸಂಗತಿ. ಮಗೆ ಎಲ್ಲಿಯೂ ಸಿಗಲಿಲ್ಲ. ಶಾಲೆಯಲ್ಲಿ ಇಂತಹ ಬಳ್ಳಿಗಳ ಮೂಲಕ ಬುಟ್ಟಿ ಹೆಣೆಯುವಕೌಶಲ್ಯ ಹೇಳಿಕೊಟ್ಟಿರುವುದು ಸಂತಸತಂದಿದೆ.”
ಈ ಕಾರ್ಯಕ್ರಮದ ಸಂಯೋಜಕರಾದ ಸುಮಂತ್ ಆಳ್ವ, “ನೇಪಥ್ಯಕ್ಕೆ ಸರಿಯುತ್ತಿರುವಇಂಥ ವೃತ್ತಿ ಮತ್ತುಕೊರಗರ ಬದುಕನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸುವುದು ಪ್ರತಿಯೊಬ್ಬರ ಆದ್ಯಕರ್ತವ್ಯ. ಇದರಿಂದ ವಿದ್ಯಾರ್ಥಿಗಳಿಗೆ ಸಂವೇದನೆ ಶೀಲತೆಯೊಂದಿಗೆ ಸಾಮಾಜಿಕ ಸ್ಪಂದನೆ ಹೆಚ್ಚುವುದು” ಎಂದರು.
ವೇದಿಕೆಯಲ್ಲಿ ಆದಿವಾಸಿ ಕೊರಗ ಸಮುದಾಯದ ಬಲ್ಲು, ಅಂಗಾರೆ ಮತ್ತು ಮೈರೆ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಯರಾದ ರವಿರಾಜ್ ಕಣಂತೂರು ಗೌರವ ಸಮರ್ಪಿಸಿದರು. ಸಂಯೋಜಕರಾದ ಬಾಲಕೃಷ್ಣ ಕಾರ್ಯಕ್ರಮವನ್ನುನಿರ್ವಹಿಸಿದರು.