ಕಲ್ಲಡ್ಕ: ಶ್ರೀ ರಾಮ ಪ್ರೌಢಶಾಲೆಯ ನಿವೃತ್ತ ಅಧ್ಯಾಪಕರಾದ ರಾಧಾಕೃಷ್ಣ ಅಡ್ಯಂತಾಯ ಇವರು ದೀಪ ಬೆಳಗಿಸಿ ಶಿವಾಜಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಬಳಿಕ ಮಾತನಾಡಿದ ಇವರು ಶಿವಾಜಿ ಮಹಾರಾಜರ ಪಟ್ಟಾಭಿಷೇಕದಿಂದ ಮತಾಂಧತೆ ತೊಡೆದು ಹಿಂದವೀಸ್ವರಾಜ್ಯ ಸ್ಥಾಪಿತವಾಯಿತು.
ಅದಕ್ಕಾಗಿಯೇ ಇಂದು ಈ ಕಾರ್ಯಕ್ರಮದಲ್ಲಿ ನಾವೆಲ್ಲರೂ ಸಂಭ್ರಮಿಸಬೇಕಾದರೆ ಅವರ ಸಾಧನೆಯನ್ನು ಕುರಿತು ಹೆಚ್ಚು ಹೆಚ್ಚು ಅಧ್ಯಯನ ಮಾಡಬೇಕು. ದೇಶವಿಡೀ ಮೊಘಲರು ಮತ್ತು ಸುಲ್ತಾನರ ದಾಳಿಗೆ ತುತ್ತಾಗಿದಾಸ್ಯದಲ್ಲಿ ಮುಳುಗಿತ್ತು. ಅದನ್ನು ಸಂಪೂರ್ಣ ನಿವಾರಿಸಿ ಹಿಂದೂಧರ್ಮ ಸಂಸ್ಕೃತಿ ಪರಂಪರೆ ಮತ್ತೆ ತಲೆಯೆತ್ತುವಂತೆ ಮಾಡಿ, ಆದರ್ಶ ಪುರುಷನಾಗಿ ರಾಷ್ಟ್ರಕ್ಕೋಸ್ಕರ ಬದುಕಿ ಬಾಳಿದವರು ಶಿವಾಜಿ ಇವರ ತಂದೆ -ತಾಯಿ ಗುರು ಹಿರಿಯರ ಮಾರ್ಗದರ್ಶನದಂತೆ ಗುಡ್ಡಗಾಡಿನ ಮಾವಳಿ ಜನಾಂಗದ ಸ್ನೇಹದೊಂದಿಗೆ ಚಾಣಾಕ್ಷತನದ ರಾಜನೀತಿಯನ್ನು ಪರಿಪಾಲಿಸಿ ಚಕ್ರವರ್ತಿಯಾಗಿ ಮೆರೆದರು ಎಂದು ಕುತೂಹಲ ಮೂಡಿಸುತ್ತಾ ವಿದ್ಯಾರ್ಥಿಗಳಿಂದ ಘೋಷಣೆ ಕೂಗಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಹಿರಿಯ ಶಿಕ್ಷಕರಾದ ಗೋಪಾಲ್ ಶ್ರೀಮಾನ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳೇ ಪ್ರೇರಣಾಗೀತೆ ಹಾಡಿಆಕಾಶ್ ನಿರೂಪಿಸಿ.ಭೂಷಣ್ ಸ್ವಾಗತಿಸಿ ಜಯಶ್ರೀ ಧನ್ಯವಾಗಳನ್ನು ತಿಳಿಸಿದಳು.
