Published On: Tue, Jun 28th, 2022

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಪ್ರವೇಶೋತ್ಸವ

ಕಲ್ಲಡ್ಕ: ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸಧ್ಯಾನಮಂದಿರದಲ್ಲಿ ೨೦೨೨-೨೩ ನೇ ಶೈಕ್ಷಣಿಕ ವರ್ಷದಲ್ಲಿ ನೂತನವಾಗಿ ಸೇರಿದ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ ನಡೆಯಿತು.WhatsApp Image 2022-06-23 at 12.57.50 AM  WhatsApp Image 2022-06-23 at 5.21.15 AM

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ  ಅಧ್ಯಕ್ಷರಾದಡಾ| ಪ್ರಭಾಕರ್ ಭಟ್‌ ಕಲ್ಲಡ್ಕ ತಮ್ಮ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ಶಾಲೆಯಸ್ಥಾಪನೆ, ಬೆಳವಣಿಗೆಯ ಬಗ್ಗೆ ತಿಳಿಸುತ್ತಾ, “೪೨ ವರ್ಷಗಳ ಹಿಂದೆ ಬಿತ್ತಿದ ಶಿಕ್ಷಣದ ಬೀಜಇಂದು ಬೃಹದಾಕಾರವಾಗಿ ಬೆಳೆದು ನಿಂತ ಶ್ರೀರಾಮ ವಿದ್ಯಾಕೇಂದ್ರದಲ್ಲಿ ೩೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡು ಈ ಮಟ್ಟಕ್ಕೆ ಬೆಳೆದು ನಿಂತಿದೆ. ಮಾತೃಭಾಷೆಯಲ್ಲಿ ಶಿಕ್ಷಣ ದೊರೆತಾಗ ವಿದ್ಯಾರ್ಥಿಗಳು ಹೆಚ್ಚು ಅರ್ಥೈಸಿಕೊಳ್ಳುವ ಜೊತೆಗೆ, ನಮ್ಮ ಸಂಸ್ಕೃತಿ, ಧರ್ಮ, ಜೀವನ ಮೌಲ್ಯಗಳನ್ನು ಬಲು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ.ನಾನು ಎಂಬ ಅಹಂನ್ನುತೊಡೆದು ಹಾಕಿ ನಾವು, ನಾವೆಲ್ಲರೂ ಎಂಬ ಭಾವನೆಯನ್ನು ಬೆಳೆಸುವ ಕಾರ್ಯವನ್ನು ಈ ಸಂಸ್ಥೆ ಮಾಡುತ್ತಿದೆ.ವಿದ್ಯಾರ್ಥಿಗಳು ಸಂಸ್ಕಾರ, ಆಧ್ಯಾತ್ಮಚಿಂತನೆಯಜೊತೆಜೊತೆಗೆಜಗತ್ತಿನಆಧುನಿಕ ಸವಾಲುಗಳನ್ನುಎದುರಿಸಲು ಪೂರಕವಾದ ವಿಜ್ಞಾನ ಪ್ರಾಯೋಗಿಕತರಗತಿ ಮತ್ತುಕಂಪ್ಯೂಟರ್ ಲ್ಯಾಬ್‌ನ್ನು ಹೊಂದಿದೆ.ಶ್ರೀರಾಮ ಶಾಲೆಯುರಾಜ್ಯದಲ್ಲಿಕನ್ನಡ ಮಾಧ್ಯಮದಲ್ಲಿಯೇಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಏಕೈಕ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.”ಎಂದು ಹೇಳಿದರು.WhatsApp Image 2022-06-23 at 5.21.14 AM  WhatsApp Image 2022-06-23 at 4.53.23 AM

ಕಾರ್ಯಕ್ರಮದ ಮೊದಲಿಗೆ ಅತಿಥಿಗಳು ದೀಪಪ್ರಜ್ವಲನೆ ಮತ್ತು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಕಾರ್ಯನಿರ್ವಹಣಾಧಿಕಾರಿ ಡಾ| ಕುಮಾರ್ ಮಾತನಾಡುತ್ತಾ, “ಇಂದಿನ ಪೀಳಿಗೆಗೆ ನೈತಿಕ ಹಾಗೂ ಮೌಲ್ಯಧಾರಿತ ಶಿಕ್ಷಣದ ಅಗತ್ಯವಿದೆ. ಇಂತಹ ಶಿಕ್ಷಣ ನೀಡಿ ಮಕ್ಕಳನ್ನು ಸತ್ಪ್ರಜೆಯಾಗಿ ಬೆಳೆಸುವ ಕಾರ್ಯದಲ್ಲಿತೊಡಗಿರುವುದು ಸಂತಸ ತಂದಿದೆ. ಅಂಕಪಟ್ಟಿಯ ಅಂಕಗಳಿಗಿಂತ ಜೀವನದ ಅಂಕ ಉತ್ತಮವಾಗಿರಬೇಕು. ಜೀವನ ಎನ್ನುವುದು ಸ್ಪರ್ಧೆ, ಆ ಸ್ಪರ್ಧೆಯಲ್ಲಿ ನಮ್ಮಜೀವನ ಹೇಗೆ ಕಟ್ಟಿಕೊಳ್ಳುತ್ತೇವೆ ಹಾಗೂ ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಿ ಕಲಿಸಿಕೊಡುವುದೇ ಶಿಕ್ಷಣ. ಮಕ್ಕಳಲ್ಲಿ ಭಕ್ತಿ, ಶ್ರದ್ಧೆ, ವಿನಯತೆ, ರಾಷ್ಟ್ರದ ಬಗ್ಗೆ ಒಳ್ಳೆಯ ಭಾವನೆ ಇವೆಲ್ಲವೂ ತುಂಬಾ ಮುಖ್ಯ. ನಂಬಿಕೆ ಶಿಕ್ಷಣದ ಒಂದು ಭಾಗವಾಗಬೇಕು. ನಂಬಿಕೆ ಇಲ್ಲದ ಶಿಕ್ಷಣ, ಶಿಕ್ಷಣವೇ ಅಲ್ಲ. ವ್ಯಕ್ತಿಯೊಬ್ಬ ಎತ್ತರವನಾಗುವುದು ಮುಖ್ಯವಲ್ಲ, ಸಮಾಜಕ್ಕೆ ಮತ್ತು ಆತನ ಕುಟುಂಬಕ್ಕೆ ಹತ್ತಿರದವನಾಗಬೇಕು. ಅವನು ನಿಜವಾಗಿ ಸತ್ಪ್ರಜೆಯಾಗಲು ಸಾಧ್ಯ. ದಾನದಲ್ಲಿ ಶ್ರೇಷ್ಟದಾನ ವಿದ್ಯಾದಾನ. ವಿದ್ಯಾದಾನದಿಂದ ಬದುಕಿನ ಹಸಿವನ್ನು ನೀಗಿಸಬಹುದು.ದೇಶದ ಹಿತವನ್ನುಕಾಪಾಡುವ, ದೇಶಭಕ್ತಿಯನ್ನು ಹೆಚ್ಚಿಸುವ, ಆರೋಗ್ಯಕರ ಸಮಾಜ ನಿರ್ಮಿಸುವ ಮೌಲ್ಯಧಾರಿತ ಶಿಕ್ಷಣ ನೀಡುತ್ತಿರುವ ಶ್ರೀರಾಮ ವಿದ್ಯಾಸಂಸ್ಥೆಯ ಬಗ್ಗೆ ಹೆಮ್ಮೆಯಿದೆ.”ಎಂದರು.WhatsApp Image 2022-06-23 at 4.51.37 AM

ನಂತರ ಭವಿಷ್ಯದ ದಿಟ್ಟ ಭರವಸೆಯೊಂದಿಗೆ ಪುಟ್ಟ ಹೆಜ್ಜೆಗಳನ್ನಿಟ್ಟು ಶಾಲೆಯತ್ತ ಬಂದ ೧ನೇ ತರಗತಿಯ ಪುಟಾಣಿಗಳನ್ನು ಅಧ್ಯಾಪಕ ವೃಂದದವರು ಪೂರ್ಣಕುಂಭ ಸ್ವಾಗತದೊಂದಿಗೆ ಕರೆತಂದರು. ನಂತರ ನೂತನವಾಗಿ ಸೇರಿದ ವಿದ್ಯಾರ್ಥಿಗಳಿಗೆ ಅಧ್ಯಾಪಕ ವೃಂದದವರುಆರತಿ ಬೆಳಗಿ, ಅಕ್ಷತೆ ಹಾಕಿ, ತಿಲಕವನ್ನಿಟ್ಟು, ಮಧುವ ತಿನ್ನಿಸಿ ಬಾಳು ಬೆಳಕಾಗಲಿ ಎಂದು ಆಶೀರ್ವದಿಸಿದರು.WhatsApp Image 2022-06-23 at 4.03.58 AM (1) WhatsApp Image 2022-06-23 at 2.43.56 AM

ಕಾರ್ಯಕ್ರಮದ ಮುಂದಕ್ಕೆ ಅತಿಥಿ ಗಣ್ಯರು ಅಗ್ನಿ ಪ್ರಜ್ವಲನೆ ಮಾಡಿ ಘೃತಾಹುತಿ ಮಾಡಿದರು. ನಂತರ ಹೊಸದಾಗಿ ಸೇರಿದ ವಿದ್ಯಾರ್ಥಿಗಳಿಂದ ಘೃತಾಹುತಿ ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಅಕ್ಷತಾಲಕ್ಷ್ಮಿ, ಚಿನ್ಮಯಿ, ತ್ರಿಶಾ, ಪ್ರೇರಣಾ, ಶ್ರಮಿಕಾ, ಗೌತಮ್ ಮತ್ತು ಆದಿತ್ಯ ವೇದಮಂತ್ರ ಪಠಿಸಿದರು.WhatsApp Image 2022-06-23 at 2.43.56 AM (1)

ವೇದಿಕೆಯಲ್ಲಿ ಉಪ್ಪಿನಂಗಡಿ ಶ್ರೀರಾಮ ಮತ್ತು ಇಂದ್ರಪ್ರಸ್ಥ ವಿದ್ಯಾಸಂಸ್ಥೆಯ ಸಂಚಾಲಕ ಯು.ಜಿ.ರಾಧ, ಹೈದರಾಬಾದ್ ಮೆಡಿಹಾಕ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕಗಿರೀಶ್ ಭಟ್, ನಿದೇರ್ಶಕ ಮನೋಹರ್, ಪುತ್ತೂರು ಸಹಾಯಕ ಆಯುಕ್ತರಾದ ಗಿರೀಶ್ ನಂದನ್, ಉಪ್ಪಿನಂಗಡಿ ಶ್ರೀರಾಮ ಶಾಲೆಯ ಆಡಳಿತ ಮಂಡಳಿಯ ಸದಸ್ಯ ಸುಧೀರ್‌ಟಿ.ಎಸ್, ಶ್ರೀರಾಜ್ ಗೋಪಾಲ್‌ಉಡುಪಿ, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಸಹಸಂಚಾಲಕರಾದರಮೇಶ್‌ಎನ್, ರಾಷ್ಟ್ರ ಸೇವಿಕಾ ಸಮಿತಿಯಕಾರ್ಯಕಾರಿಣಿ ಸದಸ್ಯೆಡಾ| ಕಮಲಾ ಪ್ರಭಾಕರ್ ಭಟ್ ಹಾಗೂ ಮುಖ್ಯೋಪಾಧ್ಯಾಯರಾದರವಿರಾಜ್‌ಕಣಂತೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಅಂಕಿತ ಸ್ವಾಗತಿಸಿ, ರಮ್ಯ ಭಟ್ ನಿರೂಪಿಸಿ, ಆಕಾಶ್ ಕೆ ವಂದಿಸಿದನುWhatsApp Image 2022-06-23 at 2.43.55 AM WhatsApp Image 2022-06-23 at 2.43.54 AM

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter