Published On: Wed, Jun 15th, 2022

ದೆಹಲಿ ದ್ವಾರಕ ಸೆಕ್ಟರ್‌ನಲ್ಲಿ ೧೦೮ಪ್ರಾಗ್ಯ ಸಾಗರ ಮುನಿ ಮಹಾರಾಜರ ದೀಕ್ಷಾ ವರ್ಧ೦ತಿ

ಮುಂಬಯಿ: ಪರಮ ಪೂಜ್ಯ ಆಚಾರ್ಯ ೧೦೮ಪ್ರಾಗ್ಯ ಸಾಗರ ಮುನಿ ಮಹಾ ರಾಜರ ೨೦ನೇ ದೀಕ್ಷಾ ವರ್ಧ೦ತಿ ಉತ್ಸವ ದೆಹಲಿ ದ್ವಾರಕ ಸೆಕ್ಟರ್ ೧೦ರಲ್ಲಿ ಜರುಗಿತು ಇಂದಿಲ್ಲಿ ಸಾಂಪ್ರದಾಯಿಕವಾಗಿ ನಡೆಸಲ್ಪಟ್ಟಿತು.Jaina Moodabidre Dehli 2 Jaina Moodabidre Dehli 3

ಈ ಸಂಧರ್ಭ ಆಶೀರ್ವಾದ ನೀಡಿದ ಆಚಾರ್ಯ ಪ್ರಾಗ್ಯಸಾಗರ ಮುನಿವರ್ಯರು ಪ್ರಾಕೃತ ಸಂಶೋಧನೆ ಕೇಂದ್ರ ಕುಂದ ಭಾರತಿಯ ಆಚಾರ್ಯ ವಿದ್ಯಾನಂದರ ಶಿಷ್ಯರಾಗಿ ನಿರಂತರ ಸ್ವಾಧ್ಯಯ ಸನ್ಯಾಸದ ಸಂಯಮ ಧರ್ಮದ ಪಾಠ ನಿರಂತರ ಸಿಕ್ಕಿದ್ದು ಅವರು ಚಲಿಸುವ ವಿಶ್ವಕೋಶವಾಗಿದ್ದರು. ಅವರ ಜೀವನ ಶೈಲಿ ನಮಗೆ ಪ್ರೇರಣೆದಾಯಕವಾಗಿತ್ತು ಅವರೊಡನೆ ಕಳೆದ ಸಸ್ಸಂಗ ಮರೆಯಲಾರದ ದಿನ. ಅವರು ನಮಗೆ ಗುರುವಾಗಿ ಸಿಕ್ಕಿರುದು ನಮ್ಮ ಪರಮ ಸೌಭಾಗ್ಯ ಆಚಾರ ಹಾಗೂ ಧರ್ಮದ ಪ್ರಚಾರದಿಂದ ಅಜ್ಞಾನದ ಕೊಳೆ ಅಳಿದು ಲೋಕದಲ್ಲಿ ಶಾಂತಿ ನೆಮ್ಮದಿಯಾಗಿ ಮುಕ್ತಿಸಾಧ್ಯ ಎಂದು ಶುಭನುಡಿ ಗೈದರು.Jaina Moodabidre Dehli 4 Jaina Moodabidre Dehli 5

ಶ್ರೀ ದಿಗಂಬರ ಜೈನ ಮಠ, ಜೈನಕಾಶಿ ಮೂಡಬಿದಿರೆ ಮಹಾಕ್ಷೇತ್ರದ ಜೈನ ಮಹಾಸಂಸ್ಥಾನದ ಪೀಠಾಧ್ಯಕ್ಷ ಭಾರತ ಭೂಷಣ ಜಗದ್ಗುರು ಸ್ವಸ್ತಿಶ್ರೀ ಜಗದ್ಗುರು ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಪಾವನ ಉಪಸ್ಥಿತಿ ನೀಡಿದ್ದು, ತಮ್ಮ ಮಂಗಲ ಪ್ರವಚನದಲ್ಲಿ ಸುಮಾರು ೧೬ವರ್ಷ ದಿಂದ ಮುನಿವರ್ಯರ ಸಂಪರ್ಕದಲ್ಲಿದ್ದು ಅನೇಕ ಗ್ರಂಥಗಳ ಅಧ್ಯಯನ ಪಾಠ ಪ್ರವಚನ ಜತೆಜತೆಗೆ ಆಚಾರ್ಯ ವಿದ್ಯಾನಂದ ಮುನಿರಾಜರ ಮಾರ್ಗದರ್ಶನದಲ್ಲಿ ಸಿಕ್ಕಿದೆ ನಿರಂತರ ತಪ ಸ್ವಾಧ್ಯಯ ವ್ರತಗಳ ಪಾಲನೆ ಸಾಧುಸಂತರಿಗೆ ಭೂಷಣ ಎಂದು ನುಡಿದು ಸದಾ ಗುರುವರ್ಯರ ಆಶೀರ್ವಾದ ಸರ್ವರಿಗೂ ಸಿಗುತ್ತಿರಲಿ ಎಂದು ಶುಭಹಾರೈಸಿ ಮುನಿವರ್ಯರಿಗೆ ವಿನಾಯಾಂಜಲಿ ಪೂರ್ವಕ ಭಕ್ತಿಕಾಣಿಕೆ ಸಮರ್ಪಿಸಿದರು.Jaina Moodabidre Dehli 6

ದೆಹಲಿ, ಮುಂಬಯಿ, ರಾಜಸ್ಥಾನ, ಗುಜರಾತ್ ಮಧ್ಯಪ್ರದೇಶ ಮೊದಲಾದ ಕಡೆಗಳಿಂದ ಬಂದ ಮುನಿ ವರ್ಯರ ಭಕ್ತಾದಿಗಳು ಗುರುಗಳ ಪಾದಪೂಜೆ ನೆರವೇರಿಸಿ ಆರತಿ ಬೆಳಗಿ ಪಿಂಚಿ, ಕಮಂಡಲ, ಶಾಸ್ತç ದಾನ ಮಾಡಿ ಭಕ್ತಿ ಕಾಣಿಕೆ ಸಮಾರ್ಪಿಸಿದರು.Jaina Moodabidre Dehli 7

ಕಾರ್ಯಕ್ರಮದಲ್ಲಿ ೧೦೮ ವಿಹಷ್೯ ಸಾಗರ ಮುನಿ ಸಂಘ ಸೌರಭ ಸಾಗರ ಭಟ್ಟಾರಕ, ಪಂಜಾಬ್ ಕೇಸರಿ ಪತ್ರಿಕಾ ಸಂಪಾದಕ ಸ್ವದೇಶ್ ಭೂಷಣ ಚಕ್ರೆಶ್ ಜೈನ್, ತ್ರಿಲೋಕ್ ಜೈನ್, ಸುಧೀರ್ ಜೈನ್ ಮೊದಲದವರು ಉಪಸ್ಥಿತರಿದ್ದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter