ಬಂಟ್ವಾಳ: ರೋಟರಿ ಟೌನ್ ಬಂಟ್ವಾಳ ದಿಂದ ಅಧ್ಯಕ್ಷ ಶನ್ಫತ್ ಶರೀಫ್ ಅವರ ಪ್ರಾಯೋಜಕತ್ವದಲ್ಲಿ ಬಿ.ಸಿ.ರೋಡಿನ ಅಜ್ಜಿಬೆಟ್ಟುವಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೆಲಹಾಸು ಹಾಗೂ ಗೋಡೆಗೆ ಪೈಂಟಿಂಗ್ ಮಾಡುವ ಮೂಲಕ ಹೊಸ ಸ್ವರೂಪ ನೀಡಲಾಯಿತು.WhatsApp Image 2022-06-10 at 10.21.57 AM

ರೋಟರಿ ಜಿಲ್ಲಾ ಗವರ್ನರ್ ಎ.ಆರ್.ರವೀಂದ್ರ ಭಟ್ ಗುರುವಾರ ತನ್ನ ಭೇಟಿಯ ಸಂದರ್ಭ ನವೀಕೃತ ಅಕ್ಷರ ದಾಸೋಹ ಕೊಠಡಿಯನ್ನು ಉಪಯೋಗಕ್ಕೆ ಚಾಲನೆ ನೀಡಿದರು. ಈ ಸಂದರ್ಭ ರೋಟರಿ ನಿಯೋಜಿತ ಗವರ್ನರ್ ಪ್ರಕಾಶ್ ಕಾರಂತ, ಟೌನ್ ಅಧ್ಯಕ್ಷ ಶನ್ಫತ್ ಶರೀಫ್, ಕಾರ್ಯದರ್ಶಿ ಬೊಂಡಾಲ ಚಿತ್ತರಂಜನ್ ಶೆಟ್ಟಿ, ಉಪಾಧ್ಯಕ್ಷ ಕಿಶೋರ್, ಕೋಶಾಧಿಕಾರಿ ಸುರೇಶ್ ಸಾಲಿಯಾನ್, ಆನ್ಸ್ ಅಧ್ಯಕ್ಷೆ ವಿದ್ಯಾ ಉಮೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್ ಮಾಂಬಾಡಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *