ಬಂಟ್ವಾಳ: ತಾಲ್ಲೂಕಿನ ಪಾಣೆಮಂಗಳೂರು ನೇತ್ರಾವತಿ ನದಿ ಸೇರಿದಂತೆ ವಿವಿಧೆಡೆ ತ್ಯಾಜ್ಯ ಎಸೆಯದಂತೆ ಟೌನ್ ರೋಟರಿ ಕ್ಲಬ್ ವತಿಯಿಂದ ಗುರುವಾರ ನಾಮಫಲಕ ಅನಾವರಣಗೊಳಿಸಿದರು.9btl-Rotary

ಟೌನ್ ರೋಟರಿ ಕ್ಲಬ್ ವತಿಯಿಂದ ಬಿ.ಮೂಡ ಶಾಲೆ ಅಕ್ಷರ ದಾಸೋಹ ಕೊಠಡಿಗೆ ನೆಲಹಾಸು ಅಳವಡಿಕೆ ಸಹಿತ ವಿವಿಧ ಜನಪರ ಕೊಡುಗೆ ಹಸ್ತಾಂತರ ಕಾರ್ಯಕ್ರಮ ಗುರುವಾರ ನಡೆಯಿತು.

ರೋಟರಿ ಜಿಲ್ಲಾ ಗವರ್ನರ್ ಎ.ಆರ್.ರವೀಂದ್ರ ಭಟ್ ಅವರು ಗುರುವಾರ ಭೇಟಿ ನೀಡಿ, ನೇತ್ರಾವತಿ ನದಿ ಸೇರಿದಂತೆ ವಿವಿಧೆಡೆ ತ್ಯಾಜ್ಯ ಎಸೆಯದಂತೆ ಜಾಗೃತಿ ನಾಮಫಲಕ ಅನಾವರಣಗೊಳಿಸಿದರು.

ರೋಟರಿ ನಿಯೋಜಿತ ಗವರ್ನರ್ ಪ್ರಕಾಶ್ ಕಾರಂತ, ಟೌನ್ ಅಧ್ಯಕ್ಷ ಶನ್ಫತ್ ಶರೀಫ್, ಕಾರ್ಯದರ್ಶಿ ಬೊಂಡಾಲ ಚಿತ್ತರಂಜನ್ ಶೆಟ್ಟಿ, ಉಪಾಧ್ಯಕ್ಷ ಕಿಶೋರ್, ಕೋಶಾಧಿಕಾರಿ ಸುರೇಶ್ ಸಾಲಿಯಾನ್, ಆನ್ಸ್ ಅಧ್ಯಕ್ಷೆ ವಿದ್ಯಾ ಉಮೇಶ್, ಹಂಝ ಬಸ್ತಿಕೋಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್ ಮಾಂಬಾಡಿ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *