ಬಿಸಿರೋಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಶುದ್ದ ನೀರಿನ ರೆಪ್ರಿಜರೇಶನ್ ಕೊಡುಗೆ
ಬಂಟ್ವಾಳ: ಬಿಸಿರೋಡು ಯೂನಿಯನ್ ಬ್ಯಾಂಕ್ ವತಿಯಿಂದ ಬಿಸಿರೋಡಿನ ಪೋಲೀಸ್ ಲೈನ್ ನಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಶುದ್ದ ಕುಡಿಯುವ ನೀರಿನ ರೆಪ್ರಿಜರೇಶನ್ ಕೊಡುಗೆ ನೀಡಿದರು.
ಬಂಟ್ವಾಳ ಯೂನಿಯನ್ ಬ್ಯಾಂಕ್ ನ ಮುಖ್ಯ ಪ್ರಬಂಧಕ ದೇವಿಪ್ರಸಾದ್, ಬಿಸಿರೋಡು ಶಾಖಾ ಪ್ರಬಂಧಕ ಜಗದೀಶ್ ಪ್ರಸಾದ್ ಎಂ.ಆರ್. ಶಾಖಾ ಅಧಿಕಾರಿ ಯಶವಂತ, ಸಿಬ್ಬಂದಿ ಮಿಥುನ್ ಪೈ, ಉಪತಹಶೀಲ್ದಾರ್ ದಿವಾಕರ ಮುಗುಳಿಯ, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಕಾರ್ಯದರ್ಶಿ ಜಗನ್ನಾಥ ಶೆಟ್ಟಿ, ಸದಸ್ಯರಾದ ಪದ್ಮನಾಭ ಗೌಡ, ಸದಾಶಿವ ಬಂಗೇರ, ಉಮೇಶ್ ಕುಮಾರ್ ವೈ, ದೇವಸ್ಥಾನ ದ ಪ್ರಧಾನ ಅರ್ಚಕ ಈಶ್ವರ್ ಭಟ್ ಮತ್ತಿತರರು ಉಪಸ್ಥಿತರಿದ್ದರು.