ಸುದ್ದಿ9 ಕೈಕಂಬ: ಶ್ರಿ ಮುಖ್ಯಪ್ರಾಣ ದೇವಸ್ಥಾನ, ಅಗ್ರಹಾರ ಕೋಡಿಬೆಟ್ಟುವಿನಲ್ಲಿ ಶ್ರೀ ಧೂಮಾವತಿ ಬಂಟ ದೈವಗಳ ನೇಮೋತ್ಸವವು ಮಾಚರ್್ 1ರಂದು ನಡೆಯಲಿದೆ. ಅದೇ ದಿನ ಬೆಳಿಗ್ಗೆ ಅಡ್ಡೂರು ಹಿಂದೂ ಜಾಗರಣ ವೇದಿಕೆ ವತಿಯಿಂದ ಶ್ರೀ ಶನೀಶ್ವರ ಪೂಜೆ ನಡೆಯಲಿದೆ. ಕೋಡಿಮಜಲು ವೇದಮೂತರ್ಿ ಶ್ರೀ ಅನಂತ ಪದ್ಮನಾಭ ಉಪಾಧ್ಯಾಯ ಅವರು ಪೂಜೆಯ ನೇತೃತ್ವ ವಹಿಸಲಿದ್ದಾರೆ.
ಬೆಳಿಗ್ಗೆ 8.30ಕ್ಕೆ ಪವಮಾನ ಅಭಿಷೇಕ, 9 ಗಂಟೆಗೆ ಗಣಹೋಮ, 9.30ಕ್ಕೆ ಶನಿಪೂಜೆ ಆರಂಭ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, 1 ಗಂಟೆಗೆ ಅನ್ನಸಂತಪಣೆ ನಡೆಯಲಿರುವುದು.
ಸಂಜೆ 5.30ರಿಂದ ಭಜನಾ ಕಾರ್ಯಕ್ರಮ, 6.30ರಿಂದ ಆಶ್ಲೇಷಾ ಬಲಿಪೂಜೆ, 7 ಗಂಟೆಯಿಂದ ರಂಗಪೂಜೆ, 7.30ಕ್ಕೆ ಅನ್ನಸಂತರ್ಪಣೆ ಹಾಗೂ ರಾತ್ರಿ 8ರಿಂದ ಧೂಮಾವತಿ ಬಂಟ ದೈವಗಳ ನೇಮೋತ್ಸವ ಜರುಗಲಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. .

By suddi9

Leave a Reply

Your email address will not be published. Required fields are marked *