ಬಂಟ್ವಾಳ :ತುಂಬೆ, ಪುದು, ಕೊಡ್ಮಾಣ್, ಮೆರಮಜಲು, ಅಡ್ಯಾರ್ ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡಿರುವ ಕುಲಾಲ ಸುಧಾರಕ ಸಂಘ (ರಿ)ಫರಂಗಿಪೇಟೆ ಇದರ 29ನೇ ವಾರ್ಷಿಕ ಮಹಾಸಭೆ ಮತ್ತು ವಾರ್ಷಿಕೋತ್ಸವವು ಮೇ 22ರಂದು ಆದಿತ್ಯವಾರ ಮಾರಿಪಳ್ಳ,ನಾಣ್ಯ.ಕುಲಾಲ ಸಮುದಾಯ ಭವನದಲ್ಲಿ ವಿಜೃಂಭಣೆಯಿಂದ ನಡೆಯಿತು.WhatsApp Image 2022-05-23 at 3.59.05 PM

ಬೆಳಿಗ್ಗೆ 8ಗಂಟೆಗೆ ಗಣಹೋಮ ನಡೆದು,10ರಿಂದ ವಾರ್ಷಿಕ ಕ್ರೀಡಾಕೂಟಕ್ಕೆ ಸುಂದರ ಕುಲಾಲ್ ನಾಣ್ಯ ಇವರು ಚಾಲನೆ ನೀಡಿದರು .ಮದ್ಯಾಹ್ನ 12ರಿಂದ ವಾರ್ಷಿಕ ಮಹಾ ಸಭೆ ನಡೆದು ಬಳಿಕ ಸಹ ಭೋಜನ ನಡೆಯಿತು. ನಂತರ ಸಂಗೀತ ಸ್ಪರ್ಧೆ ನಡೆಯಿತು.WhatsApp Image 2022-05-23 at 3.59.05 PM (1)

ಸಂಜೆ 5 ಗಂಟೆಗೆ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಬಿ. ನಾರಾಯಣ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಕುಲಾಲ ಸಂಘದ ಜಿಲ್ಲಾಧ್ಯಕ್ಷ ಮಯೂರ್ ಉಳ್ಳಾಲ್,ತಾಲೂಕು ಅಧ್ಯಕ್ಷ ನಾರಾಯಣ ಸಿ ಪೆರ್ನೆ ಹಾಗೂ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಕುಲಾಲ್ ವೇದಿಕೆಯಲ್ಲಿಇದ್ದರು.

ಪ್ರಮುಖರಾದ ಲಕ್ಷ್ಮಣ್ ಅಗ್ರಬೈಲು, ಜಲಜಾಕ್ಷಿ ಕುಲಾಲ್ ಬಂಟ್ವಾಳ,ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೆ.ಆರ್ ದೇವದಾಸ್ ಸ್ವಾಗತಿಸಿ,ಕಮಲ ರಮೇಶ್ ಧನ್ಯವಾದವಿತ್ತರು.ನವೀನ್ ಕೊಡ್ಮನ್ ಮತ್ತು ರೇಷ್ಮಾ ವಿನಯ್ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಪ್ರಗತಿಪರ ಕೃಷಿಕ ನಾರಾಯಣ ಬಂಗೇರ ನಾಣ್ಯ, ರಂಗ ಕಲಾವಿದರಾದ ಅರುಣ್ ಚಂದ್ರ ಬಿ ಸಿ ರೋಡ್, ನಿತಿನ್ ತುಂಬೆ ಇವರನ್ನು ಸನ್ಮಾನಿಸಲಾಯಿತು ,ಪುದು ಗ್ರಾ ಪಂ ಸದಸ್ಯೆ ವೀಣಾ ಪದ್ಮನಾಭ ಗೋವಿಂದೊಟ ಹಾಗೂ ಚಿತ್ರ ಕಲಾವಿದ ಜೀವನ್ ಕುಲಾಲ್ ಕೋಡಿ ಇವರನ್ನು ಅಭಿನಂದಿಸಲಾಯಿತು.

ಎಸ್ ಎಸ್ ಎಲ್ ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಪತ್ರಕರ್ತ ಸಂತೋಷ್ ಕುಲಾಲ್ ನೆತ್ತರಕೆರೆ ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳಿಗೆ ,ವಿದ್ಯಾ ಪ್ರೋತ್ಸಾಹ ಧನ, ಪ್ರತಿಭಾ ಪುರಸ್ಕಾರವನ್ನು ಈ ಸಂದರ್ಭದಲ್ಲಿ ನೀಡಲಾಯಿತು.

ಸಭಾ ಕಾರ್ಯಕ್ರಮದ ನಂತರ ಕುಲಾಲ ಸಂಘದ ಸದಸ್ಯೆಯರಿಂದ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ವೈವಿದ್ಯಮಯ ಕಾರ್ಯಕ್ರಮ ನಡೆದು ಜನ ಮನ ಸೆಳೆಯಿತು.

By Suddi9

Leave a Reply

Your email address will not be published. Required fields are marked *