ಬಂಟ್ವಾಳ: ಕರಾವಳಿಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕಾರಿಂಜೇಶ್ವರನ ಸನ್ನಿಧಿಯಿಂದ ಬೃಹತ್ ಗಾತ್ರದ ಬಂಡೆ ಇಂದು ಕುಸಿದು ರಸ್ತೆಗೆ ಉರುಳಿದೆ.WhatsApp Image 2022-05-17 at 3.55.18 PM (1)

ಬೃಹತ್ ಗಾತ್ರದ ಕಲ್ಲುಗಳ ಬುಡ ಸಂದಿಗಳು ಸಡಿಲಗೊಂಡಿದ್ದರಿಂದ ಅನಾಹುತ ನಡೆದಿದೆ. ಇದೇ ರೀತಿ ದೇಗುಲಕ್ಕೆ ಆಧಾರಸ್ಥಂಭವಾಗಿ ನಿಂತಿರುವ ಬಂಡೆಗಳು ಕುಸಿದರೆ ಅನ್ನೋ ಆತಂಕ ಭಕ್ತರನ್ನು ಕಾಡುತ್ತಿದೆ.WhatsApp Image 2022-05-17 at 3.55.18 PM

ಕಾರಿಂಜೇಶ್ವರ ಕ್ಷೇತ್ರದ ಸುತ್ತಮುತ್ತ ಈ ಹಿಂದೆ ನಡೆಯುತ್ತಿದ್ದ ಗಣಿಕಾರಿಕೆಯ ಸ್ಫೋಟದ ಪರಿಣಾಮದಿಂದ ಈ ರೀತಿ ಬಂಡೆ ಕುಸಿದಿರಬಹುದು ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ.

ಕಾರಿಂಜ ಸುತ್ತಮುತ್ತಲಿನ ಗಣಿಗಾರಿಕೆಯನ್ನು ನಿಲ್ಲಿಸಲು ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ ನಡೆಸಿದ್ದು, ಈ ಹಿಂದೆ ನಡೆಯುತ್ತಿದ್ದ ಗಣಿಗಾರಿಕೆಯ ಸ್ಫೋಟದ ಪರಿಣಾಮದಿಂದಾಗಿ ಈ ರೀತಿ ಅನಾಹುತ ಸಂಭವಿಸಿದೆ. ಇನ್ನಾದರೂ ಜನಪ್ರತಿನಿಧಿಗಳು ಎಚ್ಚೆತ್ತು, ಗಣಿಗಾರಿಕೆ ಪೂರ್ಣ ಪ್ರಮಾಣದ ಕಡಿವಾಣ ಹಾಕುವ ಮೂಲಕ, ಇತಿಹಾಸ ಪ್ರಸಿದ್ಧ ದೇವಾಲಯ ಪಾವಿತ್ರ್ಯತೆಯನ್ನು ಕಾಪಾಡಬೇಕಾಗಿದೆ. ಇಲ್ಲವಾದರೆ ಮತ್ತೊಮ್ಮೆ ಹೋರಾಟಕ್ಕೆ ಹಿಂದೂ ಜಾಗರಣ ವೇದಿಕೆ ಮುಂದಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

By Suddi9

Leave a Reply

Your email address will not be published. Required fields are marked *