ಮುಂಬಯಿ: ನಾನು ಸಯಾನ್ ತಲುಪುತ್ತಿದ್ದಂ ತೆಯೇ ಗೋಕುಲದಲ್ಲಿ ಶ್ರೀಗೋಪಾಲಕೃಷ್ಣನ ದರ್ಶನ ಪಡೆದೆ. ಮುಖದ್ವಾರದ ಆರಂಭದಿಂದ ನಿರ್ಗಮನದವರೆಗೂ ಮಂದಿರದೊಳಗಿನ ಶಾಸ್ತ್ರಾಭವ್ಯತೆ ಅನುಭವಿಸಿ ದನ್ಯನೆಣಿಸಿದೆ. ಶ್ರೀಕೃಷ್ಣ ವಿವಿಧ ಲೀಲೆ, ರೂಪಗಳನ್ನು ಇಲ್ಲಿ ಕೆತ್ತನೆಯ ಮೂಲಕ ಸೃಷ್ಠಿಸಿ ಪ್ರತಿಷ್ಠಾಪಿಸಲ್ಪಟ್ಟಿವೆ. ಅಜಂತಾ, ಎಲ್ಲೋರಾ ಗುಹೆಗಳಲ್ಲಿನ ಕೆತ್ತನೆಕ್ಕಿಂತಲೂ ಮಿಗಿಲಾದ ವರ್ಣನೆ ಇಲ್ಲಿ ರೂಪಿಸಲ್ಪಟ್ಟಿವೆ. ಮಥುರಾ ಉತ್ತರ ಪ್ರದೇಶದಲ್ಲಿದೆ ಆದರೆ ಈ ಗೋಕುಲ ಮಹಾರಾಷ್ಟ್ರದ ಮಥುರಾವಾಗಿದೆ.Gokula Brama Kalashitasava Samaropa 1
Gokula Brama Kalashitasava Samaropa 2 Gokula Brama Kalashitasava Samaropa 3

ಜನರ ಒಳ್ಳೆಯ ಭಾವನೆಗಳಿಂದ ಬದುಕು ಪಾವನಗೊಂಡಂತೆ ಇಂತಹ ದೇವಾಲಯಗಳಿಂದಲೂ ರಾಷ್ಟ್ರವು ವಿಕಾಸಗೊಳ್ಳುತ್ತದೆ. ಎಲ್ಲಾ ಹಿಂದು ಜನತೆ ಭಗವಂತನನ್ನು ನಂಬುವ, ಪೂಜಿಸುವ ಜನರಾಗಿದ್ದು, ನಮ್ಮಲ್ಲಿ ಸಕಲ ಐಶ್ವರ್ಯ ಶ್ರೇಷ್ಠರೇ ಇದ್ದಾರೆ. ಇವೆಲ್ಲರಿಗೂ ಶಾಂತಿ ನೆಮ್ಮದಿ ಸಿಗುವಂತಿದ್ದರೆ ಅದು ಮಠ ಮಂದಿರಗಳಲ್ಲಿ ಮಾತ್ರ. ಆದುದರಿಂದ ಭಗವಂತನ ರೂಪ ಕಾಣಲು ದೇಗುಲಗಳು ಶ್ರದ್ಧಾ ಕೇಂದ್ರಗಳಾಗಿವೆ. ಜನ್ಮ ಭೂಮಿಯಲ್ಲಿ ರುಗ್ಣಾಲಯ, ಕರ್ಮಭೂಮಿಯಲ್ಲಿ ದೇವಾಲಯ ನಿರ್ಮಿಸಿ ಭಗದ್ಭಕ್ತನಾದ ಡಾ| ಸುರೇಶ್ ರಾವ್ ಅವರ ಸಾಧನೆ ಶ್ರೇಷ್ಠವಾಗಿದೆ ಎಂದು ಕೇಂದ್ರ ಸರಕಾರದ ರಾಜ್ಯ ವಿತ್ತ ಸಚಿವ ಡಾ| ಭಗತ್‌ಕೃಷ್ಣ ರಾವ್ ಕರಾಡ್ ತಿಳಿಸಿದರು.Gokula Brama Kalashitasava Samaropa 4   Gokula Brama Kalashitasava Samaropa 5 Gokula Brama Kalashitasava Samaropa 6

ಇಂದಿಲ್ಲಿ ಭಾನುವಾರ ಸಂಜೆ ಸಾಯನ್ ಪೂರ್ವದ ಕಿಂಗ್‌ಸರ್ಕಲ್‌ನ ಶ್ರೀ ಷಣ್ಮುಖಾನಂದ ಚಂದ್ರಶೇಖರೇಂದ್ರ ಸರಸ್ವತಿ ಸಭಾಗೃಹದಲ್ಲಿ ಬಿಎಸ್‌ಕೆಬಿ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಸಾರಥ್ಯದಲ್ಲಿ ಜರುಗಿದ ಗೋಕುಲ ಬ್ರಹ್ಮಕಲಶೋತ್ಸವದ ಸಮಾರೋಪ ಸಮಾರಂಭ ಉದ್ಘಾಟಿಸಿ, ಗೋಕುಲ ಬ್ರಹ್ಮಕಲಶೋತ್ಸವ ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಿ ಸಚಿವ ಡಾ| ಭಗತ್‌ಕೃಷ್ಣ ಮಾತನಾಡಿದರು.Gokula Brama Kalashitasava Samaropa 7Gokula Brama Kalashitasava Samaropa 9   Gokula Brama Kalashitasava Samaropa 8

ದಿ| ಹೆಚ್.ಬಿ ಎಲ್ ರಾವ್ ಪರಿಕಲ್ಪನೆಯಲ್ಲಿ ಅರಳಿ ಕೆ.ಎಲ್ ಕುಂಡಂತಾಯ ಪ್ರಧಾನ ಸಂಪಾದಕತ್ವದಲ್ಲಿ ಪ್ರಸಾಶಿತ ‘ಶ್ರೀ ಕೃಷ್ಣ ದರ್ಶನ’ ಬೃಹತ್ ಗ್ರಂಥವನ್ನು ಉಡುಪಿ ಶ್ರೀ ಪಲಿಮಾರು ಮಠಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಅನಾವರಣ ಗೊಳಿಸಿ ಅನುಗ್ರಹಿಸಿ ಇದೊಂದು ವೈಭವದ ಧರ್ಮ ಕಲಾಭಿಷೇಕ. ಕೃಷ್ಣ ಅಂದರೆನೇ ಅದು ಆಕಾರ್ಷಣೀಯವಾದುದು. ಕೃಷ್ಣ ಉತ್ತರಪ್ರದೇಶದವನು. ಆದರೆ ಇರ‍್ರು ದಕ್ಷಿಣದ ತನಕ ಎಲ್ಲರನ್ನೂ ತನ್ನ ಬುಟ್ಟಿಯಲ್ಲಿ ಹಾಕಿಕೊಂಡ ಶ್ರೇಷ್ಠ ದೇವರು. ಮಹಾರಾಷ್ಟ್ರವನ್ನು ಕೂಡಾ ಎಳೆದಿದೆ ಅಂದರೆ ತನ್ನ ಬುಟ್ಟಿಗೆ ಅಂತಾದರೆ ಇದೊಂದು ಕೊಂಡಿ ದೇವರು ಗೋಪಾಲಕೃಷ್ಣ. ಇಲ್ಲಿ ದೇವಸ್ಥಾನ ಎಲ್ಲಾ ಹೊಸತು ಆದರೆ ದೇವರು ಮಾತ್ರ ಹಳತು. ಸಾಮಾನ್ಯವಾಗಿ ದೇವರು ಹೊಸತಾಗುತ್ತಾನೆ ಇದು ಸಲ್ಲದು. ಬದಲಾಗಿ ಹಳೆ ದೇವರು ಗುಡಿಮಾತ್ರ ಹೊಸತಾಗಿರಬೇಕು. ನಾವು ಹಳಬರಾಗಬೇಕು ನಮ್ಮ ಉಡುಪು ಹಳೆಯದಾಗಿರಬೇಕು. ಹಾಗೆಯೇ ನಮ್ಮ ಭಗವಂತ ಹಳತ್ತಾಗಿ ಬಿಟ್ಟರೆ ಆ ದೇವಸ್ಥಾನಕ್ಕೊಂದು ಕಳೆ, ಊರಿಗೊಂದು ತಾಕತ್ತುನಮ್ಮ ರಾಷ್ಟçಕ್ಕೆನೇ ಒಂದು ದೊಡ್ಡ ಸಂಪತ್ತು ಈ ಗೋಪಾಲಕೃಷ್ಣ ಎಂದರು.Gokula Brama Kalashitasava Samaropa 10 Gokula Brama Kalashitasava Samaropa 11 Gokula Brama Kalashitasava Samaropa 12

ಶ್ರೀ ಕ್ಷೇತ್ರ ಕಟೀಲು ಇದರ ಅನುವಂಶಿಕ ಅರ್ಚಕ ಶ್ರೀ ವೇದಮೂರ್ತಿ ಅನಂತ ಪದ್ಮನಾಭ ಆಸ್ರಣ್ಣ ಅನುಗ್ರಹಿಸಿ ಭಗವಂತ ಪರ್ವತವನ್ನು ಹೇಗೆ ಎತ್ತಿದ್ದಾನೆ ಎಂದು ಕಾಣುತ್ತದೆಯೋ ಹಾಗೆನೇ ಒಂದು ಸಣ್ಣ ಜಾಗದಲ್ಲಿ ದೇವಾಲಯ ರೂಪಿಸಿ ಗರ್ಭಗುಡಿ ಬಹಳ ಎತ್ತರಕ್ಕೆ ಏರಲ್ಪಟ್ಟಿದೆ. ಅಂತಹ ಒಂದು ಒಳ್ಳೆಯ ಭವ್ಯವಾಗಿರತಕ್ಕಂತಹ ಕಟ್ಟಡ ನಿರ್ಮಾಣವಾಗಿದೆ. ಅದಕ್ಕಿಂತಲೂ ಹೆಚ್ಚು ಪ್ರಶಂಸನೀಯ ಏನೆಂದರೆ ಶಾಸ್ತ್ರೀಯವಾಗಿ ಗರ್ಭಗುಡಿ ನಿರ್ಮಾಣ ಗೊಂಡಿದೆ. ಮಹಾನಗರದಲ್ಲಿ ಯಾವುದೂ ಕೊರತೆ ಬಾರದಂತೆ ಗರ್ಭಗೃಹ ನಿರ್ಮಾಣವಾಗಿದ್ದು ಎಷ್ಟು ಹೊಗಳಿದರೂ ಸಾಲದು. ದಶಾವತರದ ವರ್ಣನೆ, ವಿಶ್ವರೂಪ ದರ್ಶನ ನೋಡಿ ಪರಮಾನಂದ ಆಗುವ ಅನುಭವ ಈ ಗೋಕುಲ ಸೃಷ್ಠಿಸಿರುವುದು. ವಿಶ್ವರೂಪ ದರ್ಶನ ಭಕ್ತರಲ್ಲಿ ಆಧ್ಯಾತ್ಮ ಬೆಳೆಯುವ ಭಾವನೆ ಮೂಡಿಸಿದ ಕಲಿಯುಗದ ಭಗೀರಥ ಡಾ| ಸುರೇಶ್ ರಾವ್ ಆಗಿರುವುದೇ ಅಭಿನಂದನೀಯ ಎಂದರು.Gokula Brama Kalashitasava Samaropa 13 Gokula Brama Kalashitasava Samaropa 14 Gokula Brama Kalashitasava Samaropa 15

ಕರ್ನಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್ ಮಹಾಬಲೇಶ್ವರ ಭಟ್, ಅಜಂತಾ ಫಾರ್ಮ ಮುಂಬಯಿ ಸಂಸ್ಥೆಯ ಉಪಾಧ್ಯಕ್ಷ ಮಧುಸೂದನ ಅಗರ್ವಾಲ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಚರೀಶ್ಮಾ ಬಿಲ್ರ‍್ಸ್ನ ಕಾರ್ಯಾಧ್ಯಕ್ಷ ಮೂಲ್ಕಿ ಪಡುಮನೆ ಸುಧೀರ್ ವಿ.ಶೆಟ್ಟಿ, ಎಸ್‌ಬಿಐ ಲೈಫ್ ಇನ್ಸೂರೆನ್ಸ್ ಕಂಪೆನಿಯ ಕಾರ್ಯನಿರ್ವಹಕ ನಿರ್ದೇಶಕ ಆನಂದ ಪೇಜಾವರ, ಹಿರಿಯ ಪತ್ರಕರ್ತ ಕೆ.ಎಲ್ ಕುಂಡಂತಾಯ ಪ್ರಧಾನ ಅಭ್ಯಾಗತರಾಗಿ ವೇದಿಕೆಯಲ್ಲಿದ್ದರು.Gokula Brama Kalashitasava Samaropa 16 Gokula Brama Kalashitasava Samaropa 17 Gokula Brama Kalashitasava Samaropa 18

ನೂತನ ಗೋಕುಲ ನಮ್ಮೆಲ್ಲರ ಕನಸಾಗಿತ್ತು ಇದು ಇಂದು ನನಸಾಗಿದೆ. ದಶಕದ ಹಿಂದೆಯೇ ಈ ಬಗೆಗಿನ ಕಾಳಜಿ ಉದ್ಭವಿಸಿತ್ತು. ಗೋಕುಲ ಮತ್ತು ನನ್ನದು ಸುಮಾರು ಮೂರು ದಶಕಗಳ ಹಿಂದಿನ ಸಂಬಂಧ. ಡಾ| ಸುರೇಶ್ ರಾವ್ ಮತ್ತು ಸಹಪಾಠಿಗಳು ಶ್ರದ್ಧೆಯಿಂದ ಈ ಗೋಕುಲವನ್ನು ಪುನಃರ್ ನಿರ್ಮಿಸಿ ಎಲ್ಲರನ್ನೂ ಒಗ್ಗೂಡಿಸಿದ್ದಾರೆ. ಎಲ್ಲಾ ಕೆಲಸ ಗಳನ್ನು ಮಾಡುವ ಪುರುಷೋತ್ತಮ ಅಂದರೆ ಡಾ| ಸುರೇಶ್ ರಾವ್. ಯಾವುದೇ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಪೂರೈಸುವ ಮೇಧಾವಿ ಇವರಾಗಿದ್ದಾರೆ. ಯಾವುದೇ ಸಾಧನೆಯನ್ನು ಮಾಡುವ ತಾಕತ್ತು ತನ್ನೊಬ್ಬನ್ನಲ್ಲಿದ್ದರೂ ಕೂಡಾ ಎಲ್ಲರನ್ನೂ ಒಗ್ಗೂಡಿಸಿ ಕೆಲಸ ಮಾಡುವುದೇ ಇವರ ವಿಶೇಷತೆ. ಇಂತಹ ಹೃದಯವಂತ ಮನುಷ್ಯ, ಜನಗಳ ಸಂಖ್ಯೆ ಸಾವಿರಕ್ಕೇರಿದಾಗ ಸಮಾಜ ಬೆಳೆಯುತ್ತದೆ. ಸಾವಿರಾರು ವರ್ಷಗಳ ಇತಿಹಾಸಕ್ಕೆ ಈ ಗೋಕುಲ ಸಾಕ್ಷಿಯಾಗಲಿ ಎಂದು ಮಹಾಬಲೇಶ್ವರ ಭಟ್ ಆಶಯ ವ್ಯಕ್ತ ಪಡಿಸಿದರು.Gokula Brama Kalashitasava Samaropa 19 Gokula Brama Kalashitasava Samaropa 20 Gokula Brama Kalashitasava Samaropa 21

ಆರೋಗ್ಯದ ಶಸ್ತ್ರದ ಜೊತೆ ಆಧ್ಯಾತ್ಮಿಕ ಶಾಸ್ತ್ರದ ಸೇವೆಯನ್ನು ರೂಪಿಸಿ ಬದುಕನ್ನು ಪಾವನಗೊಳಿದ ಡಾ| ಸುರೇಶ್ ರಾವ್ ಅಂತೆಯೇ ಸಚಿವ ಡಾ| ಭಗತ್‌ಕೃಷ್ಣ ರಾವ್ ಕೂಡಾ ಸೇವಾನುವ್ಯಕ್ತಿ. ಇಂಹತ ಕ್ಷೇತ್ರದ ಉದ್ಘಾಟನೆಗೆ ಇವರಂತಹ ವ್ಯಕ್ತಿಕ್ಕಿಂತ ಪ್ರತಿಷ್ಠಿತವ್ಯಕ್ತಿ ಮತ್ತೊಬ್ಬರು ಸಿಗಲಾರರು. ನಾನೂ ಶ್ರೀಕೃಷ್ಣನ ಪರಮ ಭಕ್ತನಾಗಿದ್ದು ಭಜನೆಯನ್ನಾಡುವೆ ಎಂದು ಮಧುಸೂದನ ತಿಳಿಸಿದರು.Gokula Brama Kalashitasava Samaropa 22 Gokula Brama Kalashitasava Samaropa 23 Gokula Brama Kalashitasava Samaropa 24

ಐಕಳ ಹರೀಶ್ ಮಾತನಾಡಿ ನಾನು ಶ್ರೀಕೃಷ್ಣ ದೇವರನ್ನು ಕಂಡಿಲ್ಲ ಆದರೆ ಶ್ರೀಕೃಷ್ಣ ದೇವರ ರೂಪದಲ್ಲಿ ಡಾ| ಸುರೇಶ್ ರಾಯರನ್ನು ನೋಡುತಿದ್ದೇನೆ. ಈ ಕಲಿಯುಗದಲ್ಲಿ ಇಂತಹ ವ್ಯಕ್ತಿಗಳು ಮತ್ತೆಮತ್ತೆ ಹುಟ್ಟಿಬರಲಿ. ಮುಂಬಯಿಯಲ್ಲಿ ಗಣಪತಿ, ಸಿದ್ಧಿವಿನಾಯಕ, ಮಹಾಲಕ್ಷ್ಮಿ ಮಂದಿರಗಳು ಬಹಳ ಪ್ರಸಿದ್ಧವು. ಅಂತೆಯೇ ನಮ್ಮ ತುಳುಕನ್ನಡಿಗರ ಒಂದು ಇತಿಹಾಸದಲ್ಲಿ ಉಳಿಯುವಂತಹ ದೇವಸ್ಥಾನ ಅದು ಗೋಕುಲ ಆಗಲಿ. ಇನ್ನು ಯಾರೂ ಊರಿನಿಂದ ಬಂದರೂ ಗೋಕುಲಕ್ಕೆ ಬರುವಂತಾಗಬೇಕು. ಹೊರೆಕಾಣಿಕೆಯ ಜವಾಬ್ದಾರಿಯೊಂದಿಗೆ ನನ್ನ ಕರ್ತವ್ಯವನ್ನು ಇಲ್ಲಿ ದೇವರು ಮಾಡಿಸಿದ್ದಾರೆ ಎಂದರು.Gokula Brama Kalashitasava Samaropa 25 Gokula Brama Kalashitasava Samaropa 26 Gokula Brama Kalashitasava Samaropa 27

ಈ ಭವ್ಯದೇವಾಲಯವನ್ನು ಕಂಡು ನಾನೊಬ್ಬ ಹಿಂದೂ ಎನ್ನಲು ಹೆಮ್ಮೆಯೆಣಿಸುತ್ತಿದೆ. ನಾವು ಶೆಟ್ಟಿ, ಪೂಜಾರಿ, ಭಟ್ಟ ಹೀಗೆಲ್ಲಾ ಕರೆಸಿ ಕೊಳ್ಳುವುದೇ ನಮ್ಮ ಬಹುದೊಡ್ಡ ಸಮಸ್ಯೆಯಾಗಿದೆ. ನಮ್ಮಲ್ಲಿ ನಾನೋರ್ವ ಹಿಂದೂ ಅನ್ನಲು ಕೆಚ್ಚೆದೆತನ ಇಲ್ಲದಿರುವುದೇ ದೊಡ್ಡ ದುರಂತ. ನಾವು ಇದನ್ನೆಲ್ಲಾ ನಿಲ್ಲಿಸಬೇಕು. ನಾವು ಭಾರತೀಯರು ಗುಡ್ ಮಾರ್ನಿಂಗ್, ಗುಡ್ ಇವಿನಿಂಗ್ ಇತ್ಯಾದಿ ಹೇಳುವುದನ್ನು ಬಿಟ್ಟು ಹರಿ ಓಂ ಎಂದೇಳಲು ಅಭಿಮಾನ ಪಡಬೇಕು ಎಂದು ಸುಧೀರ್ ವಿ.ಶೆಟ್ಟಿ ಸಲಹಿದರುGokula Brama Kalashitasava Samaropa 28 Gokula Brama Kalashitasava Samaropa 29 Gokula Brama Kalashitasava Samaropa 30

ಕುಂಡಂತಾಯ ಮಾತನಾಡಿ ಹಿರಿಯ ಸಾಹಿತಿ ಹೆಚ್.ಬಿ.ಎಲ್ ರಾವ್ ಅವರು ಈ ಸ್ಮರಣಿಕೆಯ ಕಲ್ಪನೆ ಮಾಡಿದ್ದು. ಅದರೆ ಅವರು ನಮ್ಮನ್ನಗಲಿದ ಕಾರಣ ಪೂರ್ಣವಾದ ಕೆಲಸ ನನ್ನಮೇಲೆ ಬಂತು. ಆ ಕಾರಣ ಹೆಚ್.ಬಿ.ಎಲ್ ರಾಯರ ಕನಸನ್ನು ನಾನು ಪರಿಪೂರ್ಣ ಗೊಳಿಸುವ ಧೈರ್ಯದಿಂದ ನಾನು ಜವಾಬ್ದಾರಿ ವಹಿಸಿದೆ. ಒಳ್ಳೆಯ ಇಚ್ಫಾಶಕ್ತಿವುಳ್ಳ ಡಾ| ಸುರೇಶ್ ರಾವ್ ಅವರ ಹಿನ್ನಲೆ ಇರುವುದರಿಂದ ಈ ಸ್ಮರಣಿಕೆ ಸುಲಭವಾಗಿ ಪ್ರಕಾಶಿತ ಗೊಳ್ಳುವಂತಾಯಿತು ಎಂದರು.Gokula Brama Kalashitasava Samaropa 32 Gokula Brama Kalashitasava Samaropa 33 Gokula Brama Kalashitasava Samaropa 31

ಡಾ| ಸುರೇಶ್ ರಾವ್ ಸ್ವಾಗತಿಸಿ ಪ್ರಸ್ತಾವನೆಗೈದು ಈ ಗೋಕುಲದ ಪುನರ್ ನಿರ್ಮಾಣ ಬಿಎಸ್‌ಕೆಬಿ-ಜಿಕೆಪಿ ಪರಿವಾರದ ತ್ಯಾಗ, ಪರಿಶ್ರಮ ಮತ್ತು ಪ್ರತಿಯೊಂದು ಭಕ್ತರ ವರದಾನದಿಂದ ನಿರ್ಮಾಣಗೊಂಡಿದೆ. ಜೊತೆಗೆ ನನ್ನ ತಾಯಿ ಕತ್ಯಾಯಿಣಿ, ಪತ್ನಿ ವಿಜಯಲಕ್ಷ್ಮೀ ಮತ್ತು ಸುಪುತ್ರಿ ಡಾ| ಶ್ರುತಿ ಹೆಬ್ಬಾರ್ ಅವರ ಸಹಯೋಗದ ಫಲವಾಗಿದೆ. ದಾನಿಗಳ, ಪ್ರಾಯೋಜಕರ, ಹಿರಿಯ ವಾಸ್ತು ಶಿಲ್ಪಿ ಅವಿನಾಶ್ ದಹಣುಕರ್, ವಾಸ್ತುಶಿಲ್ಪಿ ಸುದರ್ಶನ ಶಬರಾಯ, ಶಿಲ್ಪಕಾರರು, ಕಟ್ಟಡದ ಎಲ್ಲಾ ಗುತ್ತಿಗೆದಾರರಿಗೆ ಗೋಕುಲದ ಯಶಸ್ಸು ಸಲ್ಲುತ್ತದೆ ಎಂದರು.Gokula Brama Kalashitasava Samaropa 34 Gokula Brama Kalashitasava Samaropa 35 Gokula Brama Kalashotasava (Book) A1

ಬಿಎಸ್‌ಕೆಬಿ ಕಾರ್ಯದರ್ಶಿ ಎ.ಪಿ.ಕೆ ಪೋತಿ, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ನ ವಿಶ್ವಸ್ಥ ಸದಸ್ಯರುಗಳಾದ ಎ. ಶ್ರೀನಿವಾಸ ರಾವ್, ಬಿ.ರಮಾನಂದ ರಾವ್, ಕೃಷ್ಣ ಆಚಾರ್ಯ, ಎಸ್.ಎನ್ ಉಡುಪ ಜೆರಿಮೆರಿ, ಜೊತೆ ಕಾರ್ಯದರ್ಶಿ ಪಿ.ಸಿ.ಎನ್ ರಾವ್, ಜೊತೆ ಕೋಶಾಧಿಕಾರಿ ಪಿ.ಬಿ ಕುಸುಮಾ ಶ್ರೀನಿವಾಸ್, ಮಹಿಳಾ ವಿಭಾಗಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ಮಾಜಿ ಅಧ್ಯಕ್ಷ ಕೆ.ಸುಬ್ಬಣ್ಣ ರಾವ್ ಮತ್ತಿತರ ಪದಾಧಿಕಾರಿಗಳು, ಸದಸ್ಯರು, ಅಪಾರ ಸಂಖ್ಯೆಯ ಭಕ್ತಾದಿಗಳು ಹಾಜರಿದ್ದು ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪ್ರಸಿದ್ಧ ನೃತ್ಯ ನರ್ತಕಿ ಮತ್ತು ಸಂಯೋಜಕಿ ಸೋನಿಯಾ ಪರಚುರೆ ಇವರಿಂದ ಸಂಕೇತ್ ಅಜ್ವೆಕರ್ ಅಭಿನಯದಲ್ಲಿ ಕೃಷ್ಣ ಬ್ಯಾಲೆ ಹಾಗೂ ಮದನ್ ಮೋಹನ್ ಬಳಗವು ಅಂತಿಮ ಮಧುರ ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.Gokula Brama Kalashotasava (Book) A2 Gokula Brama Kalashotasava (Book) A3

ಮನೋರಮ ರಾವ್ ಪ್ರಾರ್ಥನೆಯನ್ನಾಡಿದರು. ಬಿಎಸ್‌ಕೆಬಿ ಉಪಾಧ್ಯಕ್ಷರುಗಳಾದ ವಾಮನ ಹೊಳ್ಳ ಮತ್ತು ಶೈಲಿನಿ ರಾವ್, ಕೋಶಾಧಿಕಾರಿ ಸಿಎ| ಹರಿದಾಸ ಭಟ್ ಅತಿಥಿüಗಳಿಗೆ ಪುಷ್ಫಗುಪ್ಚ, ಸ್ಮರಣಿಕೆಯನ್ನಿತ್ತು ಹಾಗ್ ದಾನಿಗಳು, ಪ್ರಾಯೋಜಕರನ್ನು ಗೌರವಿಸಿದರು. ಜಗದೀಶ್ ಆಚಾರ್ಯ ಮತ್ತು ಜೊತೆ ಕಾರ್ಯದರ್ಶಿ ಚಿತ್ರಾ ಮೇಲ್ಮನೆ ಕಾರ್ಯಕ್ರಮ ನಿರೂಪಿಸಿದರು. ವಾಮನ ಹೊಳ್ಳ ವಂದಿಸಿದರು.Gokula Brama Kalashotasava (Book) A4 Gokula Brama Kalashotasava (Book) A5 Gokula Brama Kalashotasava (Book) A6 Gokula Brama Kalashotasava (Book) A7 Gokula Brama Kalashotasava (Book) AA1

By suddi9

Leave a Reply

Your email address will not be published. Required fields are marked *