ಮುಂಬಯಿ: ಲಿಪಿಡ್ ಅಸೋಸಿಯೇಷನ್ ಆಫ್ ಇಂಡಿಯಾ (ಲೈ) ಸಂಸ್ಥಾಪಕ ಮತ್ತು ಅಧ್ಯಕ್ಷ ಪ್ರೊ| ಡಾ| ರಾಮನ್ ಪುರಿ ತಮ್ಮ ಸಮರ್ಥ ಸಂಘಟನಾ ಸಮಿತಿಯೊಂದಿಗೆ ಭಾರತ ಮತ್ತು ಅಂತರಾಷ್ಟ್ರೀಯ ಅತ್ಯಂತ ಪ್ರಸಿದ್ಧ ವೈದ್ಯಕೀಯ ವೃತ್ತಿಪರ ಸಹಯೋಗದೊಂದಿಗೆ ಲೈಕಾನ್ ನ್ಯಾಷನಲ್-೨೦೨೨ ರಾಷ್ಟ್ರೀಯ ಸಮ್ಮೇಳನವು ಪೊವಾಯಿ ಲೇಕ್ ಇಲ್ಲಿನ ವೆಸ್ಟಿನ್ ಮುಂಬಯಿ ಹೊಟೇಲು ಸಭಾಗೃಹದಲ್ಲಿ ಇತ್ತೀಚೆಗೆ ನಡೆಸಲಾಯಿತು. ಲಿಪಿಡ್ ಅಸೋಸಿಯೇಶನ್ ಆಫ್ ಇಂಡಿಯಾ ಸಂಘಟನಾ ಕಾರ್ಯದರ್ಶಿ ಮುಲ್ಕಿ ಅತಿಕಾರಿಬೆಟ್ಟು ದೆಪ್ಪುಣಿ ಗುತ್ತು ಡಾ| ಸದಾನಂದ ಆರ್.ಶೆಟ್ಟಿ ಸಯಾನ್ ದೀಪ ಪ್ರಜ್ವಲಿಸಿ ಸಮ್ಮೇಳನವನ್ನು ಉದ್ಘಾಟಿಸಿದರು.IMG_20220516_212421_365 IMG_20220516_212419_221

ಈ ಸಂದರ್ಭದಲ್ಲಿ ಲಿಪಿಡ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಸ್ಥಾಪಕ ಮತ್ತು ಅಧ್ಯಕ್ಷ ಪ್ರೊ| ಡಾ| ರಾಮನ್ ಪುರಿ, ಆಡಳಿತ ಸಮಿತಿ ಸದಸ್ಯ ಡಾ| ನರಸಿಂಘಾನ್ ಚೆನ್ನೈ, ಡಾ| ಎಸ್.ಎಸ್ ಅಯ್ಯಂಗಾರ್, ಅಂತರಾಷ್ಟ್ರೀಯ ಸಲಹೆಗಾರ (ಯುಎಸ್‌ಎ) ಡಾ.ಭಾರ್ಟ್ಸ್ ಮೊದಲಾದವರು ಉಪಸ್ಥಿತರಿದ್ದರು.IMG_20220516_212423_666 IMG_20220516_212426_094

ಕೊಬ್ಬಿನಾಮ್ಲಗಳು ಮತ್ತು ಸಾವಯವ ಸಂಯುಕ್ತಗಳು (ಲಿಪಿಡಾಲಜಿ) ಕ್ಷೇತ್ರದಲ್ಲಿ ನಿಮ್ಮ ವೃತ್ತಿಪರ ಪರಿಧಿಯನ್ನು ವಿಸ್ತರಿಸಲು ಅತ್ಯುತ್ತಮ ಅವಕಾಶ ನೀಡಲಾಯಿತು. ಇತ್ತೀಚಿನ ಸಂಶೋಧನೆ ಮತ್ತು ಅಭ್ಯಾಸದ ಆಧಾರದ ಮೇಲೆ ಆಸಕ್ತಿಯ ವಿವಿಧ ವಿಷಯಗಳು ಮತ್ತು ಭಾರತೀಯ ದೃಷ್ಟಿಕೋನದಲ್ಲಿ ಅವುಗಳ ನೈಜ-ಪ್ರಪಂಚದ ಅನ್ವಯವನ್ನು ಉಪಸ್ಥಿತ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ವೈದ್ಯ ಅಧ್ಯಾಪಕರೊಂದಿಗೆ ಸಮ್ಮೇಳನದಲ್ಲಿ ಚರ್ಚಿಸಲಾಗಿದ್ದು, ಮನುಕುಲದ ಆರೋಗ್ಯದ ಬಹಳಷ್ಟು ವಿಷಯಗಳ ಬಗ್ಗೆಯೂ ನಿಗಾ ವಹಿಸುವ ಬಗ್ಗೆ ಕ್ರಮಕೈಗೊಳ್ಳಲಾಯಿತು ಎಂದು ಡಾ| ಸದಾನಂದ ಆರ್.ಶೆಟ್ಟಿ ತಿಳಿಸಿದರು.IMG_20220516_212434_217 IMG_20220516_212436_143

ದ್ವಿದಿನಗಳಲ್ಲಿ ನಡೆದ ಕಾರಗಾರದಲ್ಲಿ ಮೇದಸ್ಸು (ಲಿಪಿಡ್)ನ ಪ್ರಾಮುಖ್ಯತೆಯ ಕುರಿತು ಪ್ರಗತಿಪರ ವೈದ್ಯಕೀಯ ತಜ್ಞರಲ್ಲಿ ವಿವಿಧ ಚರ್ಚೆಗಳಿಗೆ ಈ ಸಮ್ಮೇಳನ ಸಾಕ್ಷಿಯಾದ ಸಮ್ಮೇಳನವು ಕಿರಿವಯಸ್ಸಿನಲ್ಲಿ ಪ್ರಾಥಮಿಕ ತಡೆಗಟ್ಟುವಿಕೆ ವ್ಯಕ್ತಿಯ ಜೀವನದ ನಂತರದ ಭಾಗದಲ್ಲಿ ವೈದ್ಯಕೀಯ ತೊಡಕುಗಳನ್ನು ಹೇಗೆ ತಡೆಯ ¨ಹುದು ಅನ್ನುವುದರ ಬಗ್ಗೆ ಮತ್ತು ಒಟ್ಟಾರೆಯಾಗಿ, ವ್ಯಕ್ತಿಗಳಲ್ಲಿ ಧನಾತ್ಮಕ ಮತ್ತು ಆರೋಗ್ಯಕರ ಜೀವನಶೈಲಿ ಪ್ರೋತ್ಸಾಹಿಸುವ ಕುರಿತು ಸಂವಾದ ನಡೆಸಲಾಯಿತು. ಇಂತಹ ಸಮ್ಮೇಳನ, ವಿಚಾರಗೋಷ್ಠಿಗಳು ಒಂದು ದೊಡ್ಡ ಸಾಮಾಜಿಕ ಉಪಕ್ರಮದ ಭಾಗವಾಗಿದೆ ಎಂದು ಸಂಘಟಕರಲ್ಲಿ ಓರ್ವರೂ, ಅವಿಭಜಿತ ದಕ್ಷಿಣ ಕನ್ನಡ ಮಂಗಳೂರು ಮೂಲ್ಕಿ ಅತಿಕಾರಿಬೆಟ್ಟು ದೆಪ್ಪಣಿಗುತ್ತು ಮೂಲತಃ ಮುಂಬಯಿಯ ಪ್ರತಿಷ್ಟಿತ ವೈದ್ಯಾಧಿಕಾರಿ ಡಾ| ಸದಾನಂದ ಆರ್.ಶೆಟ್ಟಿ ಸಯಾನ್ ತಿಳಿಸಿದರು.IMG_20220516_212438_785 IMG_20220516_212441_800

By suddi9

Leave a Reply

Your email address will not be published. Required fields are marked *