ಮುಂಬಯಿ : ತುಳು ಸಂಘ ಬರೋಡಾ ಸಂಸ್ಥೆಯು ಸಂಘದ ಅಧ್ಯಕ್ಷ ಶಶಿಧರ್ ಬಿ.ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಗುಜರಾತ್ ರಾಜ್ಯವಾಸಿ ತುಳುವರಿಗಾಗಿ ರಾಜ್ ಸೌಂಡ್ ಎಂಡ್ ಲೈಟ್ಸ್ ತುಳು ಚಲನಚಿತ್ರದ ವಿಶ್ವ ತುಳು ಚಲನಚಿತ್ರದ ಮೊದಲ ಪ್ರದರ್ಶನ (ಪ್ರೀಮಿಯರ್ ಶೋ) ಗುಜರಾತ್ ರಾಜ್ಯದ ಬರೋಡಾ ಇಲ್ಲಿನ ಪಿವಿಆರ್ ಸಿನೆಮಾ ಟಾಕೀಸ್‌ನಲ್ಲಿ  ಮೇ.16ರಂದು ಭಾನುನುವಾರ ಆಯೋಜಿಸಿತ್ತು.Raj Sounds & Lights Cinema @ Baroda 1

ಈ ಸಿನೇಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಹೊರನಾಡ ತುಳುವರಲ್ಲಿ ಮತ್ತು ಕನ್ನಡಿಗರಲ್ಲೂ ಮಾತೃಭಾಷೆಯ ಸಂಬoಧ ಇನ್ನಷ್ಟು ಬೆಳೆಸಿಕೊಳ್ಳಲು ಇಂತಹ ಪ್ರಾದೇಶಿಕ ಭಾಷಿಕ ಸಿನೆಮಾಗಳು ಮಹತ್ತರ ಪಾತ್ರ ವಹಿಸುತ್ತವೆ. ಬಹಳಷ್ಟು ವರ್ಷಗಳ ನಂತರ ನಮ್ಮ ಮಾತೃಭಾಷಾ ಸಿನೇಮಾವನ್ನು ಇಲ್ಲಿ ಪ್ರದರ್ಶಿಸಲು ಅಭಿಮಾನ ಆಗುತ್ತಿದೆ. ಎಲ್ಲಾ ಕಲಾವಿದರ ಅಭಿನಯ ತುಂಬಾ ಚೆನ್ನಾಗಿ ಮೂಡಿಬಂದಿದೆ. ವಿಶೇಷವಾಗಿ ಪ್ರಸನ್ನ ಬೈಲೂರು ಅವರ ಸಂಭಾಷಣೆಯೂ ತುಂಬಾ ಚೆನ್ನಾಗಿದೆ. ಈ ಸಿನೇಮಾವನ್ನು ಎಲ್ಲರೂ ಆನಂದಿಸಬೇಕು ಎಂದು ಶಶಿಧರ್ ಬಿ.ಶೆಟ್ಟಿ ಚಲನಚಿತ್ರದ ತಂಡದ ಸಾಧನೆಗೆ ಅಭಿನಂದಿಸಿ ಶುಭಾರೈಸಿದರು.Raj Sounds & Lights Cinema @ Baroda 3

ಮಾಧವ ಶೆಟ್ಟಿ, ಸತೀಶ್ ಶೆಟ್ಟಿ, ಡಾ| ಶರ್ಮಿಳಾ ಜೈನ್, ಬಾಲಕೃಷ್ಣ ಶೆಟ್ಟಿ, ಪ್ರಮಿಳಾ ಶಶಿಧರ್ ಶೆಟ್ಟಿ ಮತ್ತಿತರ ಗಣ್ಯರು ವೇದಿಕೆಯಲ್ಲಿದ್ದು ತುಳು ಸಂಘ ಬರೋಡ ಇದರ ಪದಾಧಿಕಾರಿಗಳು, ಸದಸ್ಯರನೇಕರು ಕುಟುಂಬ ಸಮೇತವಾಗಿ ಈ ಸಿನೆಮಾವನ್ನು ವೀಕ್ಷಿಸಿ ಭಾರೀ ಮೆಚ್ಚುಗೆ ಪಡಿಸಿದರು.

ಪ್ರಶಸ್ತಿ ಪುರಸ್ಕöÈತ ಸಿನೇಮಾ ಒಂದು ಮೊಟ್ಟೆಯ ಕಥೆ ತಯಾರಿಸಿದ ತಂಡವು ವೈಭವ್ ಪ್ಲಿಕ್ಸ್ ಅಡಿಯಲ್ಲಿ ಮ್ಯಾಂಗೋ ಪಿಕಲ್ ಎಂಟರ್‌ಟೈನ್‌ಮೆAಟ್ ತಯಾರಿಕೆಯಲ್ಲಿ ಬ್ಯಾನರ್ ಸಹಭಾಗಿತ್ವದೊಂದಿಗೆ ವಿನೀತ್ ವಿಜೆ ರಚಿತ, ಆನಂದ್ ಎನ್ ಕುಂಪಲ ಪ್ರಧಾನ ನಿರ್ಮಾಪಕತ್ವದಲ್ಲಿ ರಾಹುಲ್ ಅಮೀನ್ ನಿರ್ದೇಶನದಲ್ಲಿ ಈ ಸಿನೆಮಾ ಸಿದ್ಧಗೊಂಡಿದೆ. ಅರವಿಂದ್ ಬೋಳಾರ್, ನವೀನ್ ಡಿ.ಪಡೀಲ್, ಭೋಜರಾಜ್ ವಾಮಂಜೂರು, ವಿನೀತ್ ಕುಮಾರ್, ಯಶ ಶಿವಕುಮಾರ್, ಕರೀಶ್ಮಾ ಅವಿÆನ್ ಅಭಿನಯಿಸಿರುವರು.

By suddi9

Leave a Reply

Your email address will not be published. Required fields are marked *