ಮುಂಬಯಿ: ಕಲಬುರಗಿ ವಿಮಾನ ನಿಲ್ದಾಣ ಪ್ರಾಧಿಕಾರದ ನೂತನ ಸದಸ್ಯರಾಗಿ ನೇಮಕಗೊಂಡ ನರಸಿಂಹ ಮೆಂಡನ್ ಅವರನ್ನು ಬಿ ಜೆ ಪಿಯ ರಾಜ್ಯ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಶಾಲು ಹಾಗೂ ಪುಷ್ಪಗುಚ್ಚ ನೀಡಿ ಕಲಬುರಗಿಯಲ್ಲಿ ಇಂದು ಅಭಿನಂದಿಸಿದರು.

ಪ್ರಾಧಿಕಾರಕ್ಕೆ ಮೆಂಡನ್ ಅವರ ನೇಮಕ ತುಂಬಾ ಖುಷಿ ತಂದಿದೆ ಮತ್ತು ನೇಮಕ ಮಾಡಿದ ಲೋಕಸಭಾ ಸದಸ್ಯರಾದ ಡಾ.ಉಮೇಶ್ ಜಾಧವ್ ಅವರಿಗೂ ಅಭಿನಂದಿಸುವೆ. ಉತ್ತಮ ಕೆಲಸ ಮಾಡಿ ಈ ಭಾಗಕ್ಕೆ ನೆರವಾಗಲು ರೂಪುರೇಷೆ ಸಿದ್ದಮಾಡಿ ಹಾಗೂ ಸರಕಾರಕ್ಕೆ ಹೆಸರು ತನ್ನಿ ಎಂದು ಕಟೀಲ್ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಡಾ ಉಮೇಶ್ ಜಾಧವ್, ದಕ್ಷಿಣ ಕನ್ನಡ ಸಂಘದ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ, ಮುಖಂಡರಾದ ಡಾ ಅಂಬಾರಾಯ ಅಷ್ಟಗಿ ಜೊತೆಗಿದ್ದರು.
