ರಾಷ್ಟ್ರೀಯ ಯುವನೀತಿ 2014 ಬಿಡುಗಡೆ ಹಾಗೂ ರಾಜೀವ್ ಗಾಂ ಖೇಲ್ ಅಭಿಯಾನಕ್ಕೆ ಚಾಲನೆನಗರದ ಸ್ಕೌಟ್ಸ್ ಭವನದಲ್ಲಿ ಶುಕ್ರವಾರ ರಾಷ್ಟ್ರೀಯ ಯುವನೀತಿ 2014 ಬಿಡುಗಡೆ ಹಾಗೂ ರಾಜೀವ್ ಗಾಂ ಖೇಲ್ ಅಭಿಯಾನಕ್ಕೆ ಅಪರ ಜಿಲ್ಲಾಕಾರಿ ದಯಾನಂದ ಕೆ., ಚಾಲನೆ ನೀಡಿದರು.
ಈ ಸಂದರ್ಭ ಅವರು ವಿದ್ಯಾಥರ್ಿಗಳನ್ನು ಉದ್ದೇಶಿಸಿ ಮಾತನಾಡಿ ಯುವಕರು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು.ಜೀವನದ ಉನ್ನತ ಸ್ಥಿತಿಗೇರಲು ಯೌವನದ ಪ್ರಾಯ ಮೆಟ್ಟಿಲು ಇದ್ದಂತೆ. ಯುವಶಕ್ತಿ ಸಾಮಾಜಿಕ, ರಾಜಕೀಯವಾಗಿ ಚಿಂತನಶೀಲರಾಗಬೇಕಾಗಿದೆ. ಕಾಯರ್ಾಂಗ, ನ್ಯಾಯಾಂಗ, ಶಾಸಕಾಂಗದಲ್ಲಿ ಬದಲಾವಣೆ ತಂದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಯುವ ಸಬಲೀಕರಣಮತ್ತು ಕ್ರೀಡಾ ಇಲಾಖೆ ಸಹಾಯಕ ನಿದರ್ೇಶಕ ಪಾಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು.
ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಎನ್.ಜಿ.ಮೋಹನ್, ನೆಹರು ಯುವ ಕೇಂದ್ರ ಸಮನ್ವಯ ಅಕಾರಿ ಸಿ.ಜೆ.ಎಂ., ಡಿ ಸೋಜ,ಗೈಡ್ಸ್ ಜಿಲ್ಲಾ ಆಯುಕ್ತ ಐವನ್ ಡಿ ಕುನ್ಹಾ, ದಕ್ಷಿಣ ಕನ್ನಡ ಯುವಜನ ಜಿಲ್ಲಾ ಒಕ್ಕೂಟ ಅಧ್ಯಕ್ಷ ರಾಜೀವ ಸಾಲ್ಯಾನ್, ಗೌರವಾಧ್ಯಕ್ಷ ಹರೀಶ್ ಬೈಕಂಪಾಡಿ, ಸ್ಕೌಡ್ಸ್ ಗೈಡ್ಸ್ ಮುಖ್ಯ ಅಕಾರಿ ರಾಮಶೇಷ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲೆಯ 55 ಯುವಕ ಸಂಘಗಳಿಗೆ ಕ್ರೀಡಾ ಉಪಕರಣ ವಿತರಿಸಲಾಯಿತು. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾಥರ್ಿಗಳಿಂದ ರ್ಯಾಲಿ ನಡೆಯಿತು.
ಜಿಲ್ಲಾ ನೆಹರು ಯುವಕೇಂದ್ರ ಲೆಕ್ಕಾಕಾರಿ ವಿಷ್ಣುಮೂತರ್ಿ ಕಾರ್ಯಕ್ರಮ ನಿರೂಪಿಸಿದರು.
ಬಾಕ್ಸ್:
ದೇಶದ 623 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ರಾಷ್ಟ್ರೀಯ ಯುವನೀತಿ 2014ಕ್ಕೆ ಚಾಲನೆ ನೀಡಲಾಯಿತು.

