
ಬೆಂಗಳೂರು: ಕೇಂದ್ರ ಸರಕಾರ ಜನಲೋಕಪಾಲ ಮಸೂದೆ ರೂಪಿಸಿರುವ ರೀತಿಯಲ್ಲೇ ರಾಜ್ಯದಲ್ಲೂ ಲೋಕಾಯುಕ್ತ ಕಾಯ್ದೆ ಜಾರಿಗೊಳಿಸಲು ಮುಂದಾಗಿದೆ.
ರಾಜ್ಯದ ಲೋಕಾಯುಕ್ತ ವ್ಯಾಪ್ತಿಗೆ ಮುಖ್ಯಮಂತ್ರಿ, ಸಚಿವರು, ಶಾಸಕರು, ಎ ಮತ್ತು ಬಿ ಗ್ರೂಪ್ ಅಧಿಕಾರಿಗಳ ಸಹಿತ ಹಿರಿಯ ಅಧಿಕಾರಿಗಳೂ ಬರಲಿದ್ದಾರೆ. ಪ್ರಸಕ್ತ ನಡೆಯುತ್ತಿರುವ ಅಧಿವೇಶನದಲ್ಲೇ ವಿಧೇಯಕಕ್ಕೆ ಅಂಗೀಕಾರ ಪಡೆಯಲು ಚಿಂತಿಸಲಾಗಿದೆ. ಈ ಹೊಸ ವಿಧೇಯಕದ ಪ್ರಕಾರ ಇನ್ನು ಮುಂದೆ ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಗಳನ್ನು ವಿಚಾರಣೆಗೊಳಪಡಿಸಲು ಸರಕಾರದಿಂದ ಅನುಮತಿ ಕೇಳಬೇಕಾದ ಅವಶ್ಯಕತೆ ಲೋಕಾಯುಕ್ತಕ್ಕೆ ಇಲ್ಲವಾಗಿದೆ
