ಸುದ್ದಿ9 ಮಂಗಳೂರು;
ಮಂಗಳೂರು: ಫೆ. 18 ಮಂಗಳೂರಿನ ಕೇಂದ್ರ ಮೈದಾನದಲ್ಲಿ ನೆರೆದಿದ್ದ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಗುಜರಾತ್ ಮುಖ್ಯಮಂತ್ರಿ ಮತ್ತು ಬಿಜೆಪಿ ಪ್ರಧಾನಿ ಅಭ್ಯಥರ್ಿ ನರೇಂದ್ರ ಮೋದಿಯವರು ‘ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು, ಹಾಗಾಗಿ ದೇಶಕ್ಕಾಗಿ ಮತ ಹಾಕಿ’ ಎಂದು ನೆರೆದಿದ್ದ ಲಕ್ಷಕ್ಕೂ ಮಿಕ್ಕ ಜನರ ಮುಂದೆ ಹೇಳಿದರು. ಸಂಜೆ ಸುಮಾರು ನಾಲ್ಕು ಗಂಟೆಯ ಸುಮಾರಿಗೆ ಕೇಂದ್ರ ಮೈದಾನಕ್ಕೆ ಆಗಮಿಸಿದ ಮೋದಿ ಮಾತುಗಳು ನೆರೆದಿದ್ದ ಜನರನ್ನು ಕಟ್ಟಿ ಹಾಕಿತು. ಮೋದಿ ಭಾಷಣದ ಕೆಲವು ತುಣುಕುಗಳು:
ದಕ್ಷಿಣ ಕನ್ನಡದ ಮೊಗವೀರ ಸಮುದಾಯದ ಜನರು ಈಗಲೂ ತಮ್ಮ ಬೋಟ್ಗಳಿಗೆ ಸೀಮೆ ಎಣ್ಣೆ ಅಥವಾ ಡೀಸೆಲ್ ಹಾಕಿ ಸಮುದ್ರದಲ್ಲಿ ಮೀನು ಹುಡುಕಿಕೊಂಡು ಹೋಗುತ್ತಾರೆ. ಇದರಿಂದ ತಮ್ಮ ಸಮಯ ಮತ್ತು ಹಣವನ್ನು ವ್ಯರ್ಥ ಮಾಡುತ್ತಾರೆ. ಆದರೆ ತಂತ್ರಜ್ಞಾನ ಎಷ್ಟು ಮುಂದುವರಿದಿದೆಯೆಂದರೆ ಉಪಗ್ರಹದ ನೆರವಿನಿಂದ ಮೀನು ಎಲ್ಲಿದೆ ಎಂದು ಗುರುತಿಸಿ ಮೀನುಗಾರರು ಅಲ್ಲಿಗೇ ತೆರಳಿ ಸುಲಭವಾಗಿ ಮೀನು ಹಿಡಿಯಬಹುದು. ಈ ಪ್ರಯೋಗವನ್ನು ಗುಜರಾತ್ನಲ್ಲಿ ಮಾಡಲಾಗಿದ್ದು ಯಶಸ್ವಿಯಾಗಿದೆ.
ವಾಜಪೇಯಿ ಸರಕಾರವಿದ್ದಾಗ ‘ಸಾಗರ್ ಮಾಲಾ’ ಎಂಬ ಯೋಜನೆಯನ್ನು ಜಾರಿಗೆ ತರಲು ಯೋಜಿಸಿದ್ದರು, ಆದರೆ ಅವರ ಸರಕಾರ ಪತನವಾದ ನಂತರ ಯಾವ ಸರಕಾರವೂ ಈ ಬಗ್ಗೆ ಗಮನ ಹರಿಸಲಿಲ್ಲ. ಈ ಯೋಜನೆಯಲ್ಲಿ ಭಾರತದ ಕರಾವಳಿ ಪ್ರದೇಶಗಳನ್ನು ಒಂದಕ್ಕೊಂದು ಜೋಡಿಸಿ ಎಲ್ಲಾ ದಿಶೆಯಲ್ಲೂ ಅಭಿವೃದ್ಧಿಗೊಳಿಸಲು ಯೋಚಿಸಲಾಗಿತ್ತು.
ಮಂಗಳೂರಿಗರು ಕರಿ ಮೆಣಸನ್ನು ಬೆಳೆಸುತ್ತಾರೆ. ಇದರ ವಿನೂತನ ಪ್ರಯೋಗವನ್ನು ಕಾಂಗ್ರೆಸ್ ಸದನದಲ್ಲಿ ಮಾಡಿದೆ. ಇತ್ತೀಚೆಗೆ ಸದನದಲ್ಲಿ ಪೆಪ್ಪರ್ ಸ್ಪ್ರೇ ಮಾಡುವ ಮೂಲಕ ಕಾಂಗ್ರೆಸಿಗರು ಕರಿಮೆಣಸಿನ ಹೊಸ ಉಪಯೋಗವನ್ನು ಕಂಡುಕೊಂಡಿದ್ದಾರೆ.
ಇದೇ ರೀತಿ ಜನರ ಕಣ್ಣಿಗೂ ಕರಿಮೆಣಸಿನ ಪುಡಿಯನ್ನು ಸಿಂಪಡಿಸಿ ತಮ್ಮ ಭ್ರಷ್ಟಾಚಾರವನ್ನು ಮರೆಮಾಚುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ.
ದೇಶದಲ್ಲಿ ಸಾವಿರಾರು ಪ್ರವಾಸಿ ತಾಣಗಳು ಇದ್ದು ಅದನ್ನು ಸರಿಯಾಗಿ ಅಭಿವೃದ್ಧಿಪಡಿಸಲಾಗಿಲ್ಲ. ಇಲ್ಲಿಗೆ ಬರುವ ಪ್ರವಾಸಿಗರು ಹಣ ಖಚರ್ು ಮಾಡಲು ಹಿಂಜರಿಯುತ್ತಾರೆ. ಪ್ರವಾಸೋದ್ಯಮವನ್ನು ಉನ್ನತ ಸ್ಥರಕ್ಕೆ ಕೊಂಡೊಯ್ಯವ ಮೂಲಕ ಶ್ರೀಮಂತ ಪ್ರವಾಸಿಗರನ್ನು ಸೆಳೆಯುವ ಕಾರ್ಯ ನಡೆಯಬೇಕಿದೆ.
ನಾವು ಐಟಿ,ಬಿಟಿ ಕ್ಷೇತ್ರದಲ್ಲಿ ಕೇವಲ ಕೆಲಸಗಾರರಾಗಿದ್ದೇವೆ. ನಮ್ಮ ಯುವ ಜನರ ಕೌಶಲ್ಯವನ್ನು ಗೂಗಲ್, ಮೈಕ್ರೋಸಾಫ್ಟ್ನಂಥ ಆಧುನಿಕ ತಂತ್ರಜ್ಞಾನಗಳನ್ನು ಕಂಡುಹಿಡಿಯಲು ಬಳಸಬೇಕಿದೆ.
ನಾನಿಲ್ಲಿ ಆಶ್ವಾಸನೆ ನೀಡಲು ಬಂದಿಲ್ಲ ಬದಲಿಗೆ ನನ್ನ ನಿಧರ್ಾರಗಳನ್ನು ತಿಳಿಸಲು ಬಂದಿದ್ದೇನೆ. ದೇಶವನ್ನು ಜಗತ್ತಿನಲ್ಲೇ ಅತ್ಯುತ್ಕೃಷ್ಟ ಸ್ಥಾನಕ್ಕೆ ಕೊಂಡೊಯ್ಯುವುದೇ ನನ್ನ ಧ್ಯೇಯ.
ಮಂಗಳೂರಿಗರು ನನಗೆ ತುಂಬಾ ಪ್ರೀತಿ ನೀಡಿದ್ದಾರೆ. ಅವರು ನನ್ನ ಹೃದಯವನ್ನು ಗೆದ್ದಿದ್ದಾರೆ. ಈ ಪ್ರೀತಿಯನ್ನು ನಾನೆಂದೂ ಮರೆಯುವುದಿಲ್ಲ.
ಕಾಂಗ್ರೆಸ್ನ ವಂಶ ರಾಜಕಾರಣವನ್ನು ಕೊನೆಗೊಳಿಸಬೇಕಿದೆ. ಅದಕ್ಕಾಗಿ ನಾವೆಲ್ಲರೂ ಒಂದಾಗಿ ಮುಂದಿನ ಚುನಾವಣೆಯಲ್ಲಿ ಹೋರಾಟ ನಡೆಸಬೇಕಿದೆ.
ಕಾಂಗ್ರೆಸ್ ಮುಕ್ತ ಭಾರತವೇ, ಅಭಿವೃದ್ಧಿಶೀಲ ಭಾರತ. ಭಾರತಕ್ಕಾಗಿ ಮತ ನೀಡಿ.
ಸುಮಾರು ಒಂದು ಗಂಟೆ ಭಾಷಣ ಮಾಢಿದಮೋದಿ.ಭಾಷಣದುದ್ದಕ್ಕೂ ಕಾಂಗ್ರೆಸ್ ಸರಕಾರದ ವೈಪಲ್ಯವನ್ನು ಎತ್ತಿ ತೋರಿಸಿದರು.ಭಾವಿ ಪ್ರಧಾನಿ ಮೋದಿಯವರ ಬಾಷಣ ಕೇಳಲು ಲಕ್ಷ ಲಕ್ಷ ಜನರು ನೆಹರು ಮೈಧಾನದಲ್ಲಿ ಸೇರಿದ್ದರು.
ಕರಾವಳಿಯ ಅಭಿವೃದ್ಧಿಗೆ ಮೋದಿ ಸೂತ್ರ
ತುಳುವಿನಲ್ಲೆ ನಮಸ್ಕಾರ ಮಾಡಿದ ಮೋದಿ.
ಕರಾವಳಿ ಇತಿಹಾಸದಲ್ಲೇ ಬೃಹತ್ ಸಮಾವೇಶ.
ವಂದೇ ಮಾತರಂ ಮೂಲಕ ನಿಗದಿಯಂತೆ 3ಗಂಟೆಗೆ ಕಾರ್ಯಕ್ರಮ ಆರಂಭ
ತಿಳಿ ಕೇಸರಿ ಜುಬ್ಬ, ಅದರ ಮೇಲೆ ಕೆನೆ ಬಣ್ಣದ ವಾಸ್ಕೋಟ್ ಧರಿಸಿದ ಮೋದಿ.
ನಮೋ ತೇರು ಮೂಲಕ ಮೆರವಣಿಗೆಯಲ್ಲಿ ಆಗಮಿಸಿದ ಕಾರ್ಯಕರ್ತರು.
ವೇದಿಕೆ ಮೇಲೆ ಏಕ್ ಭಾರತ್ ಶ್ರೇಷ್ಠ ಭಾರತ್ ಘೋಷಣೆ
ನಮೋ ಟೀಶಟರ್್, ನಮೋ ಕ್ಯಾಪ್, ನಮೋ ಮುಖವಾಡ
ಪ್ರತಿಯೊಬ್ಬರೂ ಮೆಟಲ್ ಡಿಟೆಕ್ಟರ್ ಮೂಲಕ ಮೈದಾನಕ್ಕೆ ಪ್ರವೇಶ
ಶಂಕರ್ ಶ್ಯಾನ್ಭೋಗ್ ಬಳಗದಿಂದ ದೇಶಭಕ್ತಿಗೀತೆ ಗಾಯನ
ಸದರ್ಾರ್ ವಲ್ಲಭಾಯಿ ಪಟೇಲ್ ಪ್ರತಿಮೆ ನಿಮರ್ಾಣಕ್ಕೆ ಸಾಂಕೇತಿಕ ಲೋಹ ಅರ್ಪಣೆ
ಸಮಾವೇಶಕ್ಕೆ ಆಗಮಿಸಿದ ಕಾರ್ಯಕರ್ತರಿಗೆ ನಗರದ ಹೊರವಲಯದಲ್ಲಿ ಭೋಜನ ವ್ಯವಸ್ಥೆ
ಮೈದಾನದಲ್ಲಿ ಕಾರ್ಯಕರ್ತರಿಗೆ ನೀರು ಮತ್ತು ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.
ವಾಹನಗಳಿಗೆ ಪ್ರವೇಶ ನಿರ್ಬಂಧಿಸಿದ್ದರಿಂದ 4-5ಕಿ.ಮೀ. ನಡೆದೇ ಬಂದ ಕಾರ್ಯಕರ್ತರು.
ಮೋದಿ ಭಾಷಣ ಮುಗಿದ ಬಳಿಕ ಮೈದಾನದಿಂದ ತೆರಳುವಾಗ ನೂಕು ನೂಗ್ಗಲು.
ಮಧ್ಯಾಹ್ನ 12 ಗಂಟೆಯಿಂದಲೇ ವಾಹನಗಳಿಗೆ ನಿರ್ಬಂಧ, ನಗರ ಪ್ರವೇಶಕ್ಕೆ ಪರದಾಡಿದ ಸಾರ್ವಜನಿಕರು.
ಅಡಕೆ ನೀತಿಯಲ್ಲಿ ಬದಲಾವಣೆ ಅಗತ್ಯ
ಪ್ರತಿ ಬಾರಿ ಅಡಕೆ ಬೆಳೆಗಾರರಿಗೆ ಸಂಕಷ್ಟ ಎದುರಾದಾಗ ಕನರ್ಾಟಕದ ನಿಯೋಗ ಗುಜರಾತ್ಗೆ ಬರುತ್ತದೆ. ನಾವು ಸದಾ ಸಹಕಾರ ಕೋಡುತ್ತೇವೆ ನಮ್ಮ ಸಹಕಾರದಿಂದ ಹೆಚ್ಚಿನ ಸಾಧನೆ ಆಗದು. ಬೆಳೆಗಾರರು ಉತ್ತಮ ಧಾರಣೆ ಪಡೆದು ಸದಾ ಖುಷಿಯಲ್ಲಿ ಇರಬೇಕಾದರೆ, ಅಡಕೆ ನೀತಿಯಲ್ಲಿ ಬದಲಾವಣೆ ಆಗಬೇಕಿದೆ ಎಂದು ಮೋದಿ ಹೇಳಿದರು.
ಗುಜರಾತಿನಲ್ಲಿ ಹೆಚ್ಚುವರಿ ವಿದ್ಯುತ್ ಇದೆ. ಆದರೆ ಸಮರ್ಪಕ ವಿದ್ಯುತ್ ಕೊಟ್ಟು ಮನೆ ಬೆಳಗಿಸದ ಕನರ್ಾಟಕ ಸರಕಾರ, ನಿಮ್ಮ ಜೀವನ ಬೆಳಗಿಸಲು ಸಾಧ್ಯವೇ? ಗುಜರಾತ್ನಲ್ಲಿ ಸಾವಿರಾರು ಮೆಗಾ ವ್ಯಾಟ್ ಹೆಚ್ಚುವರಿ ವಿದ್ಯುತ್ ಇದ್ದರೂ ಕನರ್ಾಟಕದ ಬಳಿ ಖರೀದಿ ಸಾಮಾಥ್ರ್ಯವಿಲ್ಲ ಕೇಂದ್ರ ಸರಕಾರ ಸೂಕ್ತ ಸರಬರಾಜು ಗ್ರಿಡ್ಗಳನ್ನು ನಿಮರ್ಿಸಿ ವಿದ್ಯುತ್ ಸರಬರಾಜು ವ್ಯವಸ್ಥೆ ಮಾಡಿಕೊಟ್ಟಿಲ್ಲ ಎಂದು ಮೋದಿ ತಿಳಿಸಿದರು.
2014ರ ಚುನಾವಣೆ ಯಾರನ್ನೂ ಅಧಿಕಾರದಲ್ಲಿ ಕುಳ್ಳಿರಿಸಲು ಅಲ್ಲ. ಹೊಸ ರಾಷ್ಟ್ರ ನಿಮರ್ಾಣಕ್ಕಾಗಿ. ನಿಮ್ಮ ಮತ ಯಾವುದೇ ವ್ಯಕ್ತಿ, ಪಕ್ಷಕ್ಕಲ್ಲ, ದೇಶಕ್ಕಾಗಿ ಎಂಬುದು ತಿಳಿದಿರಲಿ ಎಂದು ಹೇಳಿದ ಮೋದಿ ವೋಟ್ ಫಾರ್ ಇಂಡಿಯಾ ಎಂದು ಜನಸ್ತೋಮದಿಂದ ಹೇಳಿಸಿದರು.








