ಮುಂಬಯಿ : ಶ್ರೀ ಪ್ರಾಪ್ತಿ ಕಲಾವಿದೆರ್ ಕುಡ್ಲ ಪೌರಾಣಿಕ ಜನಪದ ನಾಟಕ ಅಪ್ಪೆ ಮಂತ್ರದೇವತೆ ಶೀಘ್ರ ಪ್ರದರ್ಶನ ಕಾಣಲಿದ್ದು, ಟೈಟಲ್ ಲಾಂಚ್ (ಶೀರ್ಷಿಕೆ ಬಿಡುಗಡೆ) ನೆರವೇರಿದೆ.Screenshot_20220427_175108

ಡೈಯ್ಜಿವರ್ಲ್ಡ್ ಮಾಧ್ಯಮ ಸಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ ಟೈಟಲ್ ಬಿಡುಗಡೆ ಮಾಡಿದರು. ಡೈಯ್ಜಿವರ್ಲ್ಡ್ ಪ್ರೊಡಕ್ಷನ್ ಮುಖ್ಯಸ್ಥ ಸ್ಟ್ಯಾನಿ ಬೇಳ, ಪ್ರಸಿದ್ಧ ಹಾಸ್ಯ ಕಲಾವಿದ ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ಭಾಗವತ ಸುದೇಶ್ ಹೆಗ್ಡೆ ಕುತ್ತೆತ್ತೂರು, ಕಲಾ ಸವ್ಯಸಾಚಿ ಪ್ರಶಾಂತ್ ಸಿ.ಕೆ., ಕೊರಿಯೊಗ್ರಾಫರ್ ಸುಹಾನ್ ಕುಳಾಯಿ ಈ ಸಂದರ್ಭ ಉಪಸ್ಥಿತರಿದ್ದರು.IMG-20220426-WA0062

ಪ್ರಶಾಂತ್ ಸಿ.ಕೆ ರಚನೆ, ನಿರ್ದೇಶನದ ಮಂತ್ರದೇವತೆ ಪೌರಾಣಿಕ ನಾಟಕಕ್ಕೆ ಜಿತೇಂದ್ರ ಕುಂದೇಶ್ವರ ಹಾಗೂ ಸುಹಾನ್ ಕುಳಾಯಿ ಅವರ ಸಮಗ್ರ ನಿರ್ವಹಣೆ ಇರಲಿದೆ. ರಂಗದರಸೆ ಜೆ.ಕೆ ರೈ ಪಿಲಾರ್ ಮೊದಲಾದ ಅಭಿಜಾತ ಕಲಾವಿದರ ಮೂಲಕ ತುಳು ರಂಗಭೂಮಿಗೆ ಧುಮುಕಲಿದೆ.

ನಾಟಕ ಪ್ರದರ್ಶನಗಳು: ಪ್ರಶಾಂತ್ ಸಿಕೆ ರಚಿಸಿರುವ ಮಲೆತ ಮೈಮೆ, ಸತ್ಯೊದ ಬಿರುವೆರ್ , ಕಾರ್ಣಿಕದ ತಂಗಡಿ, ನವನೀತ್ ಶೆಟ್ಟಿ ಕದ್ರಿಯವರ ಅಪ್ಪೆ ಭಗವತಿ, ಮುಂತಾದ ಪೌರಾಣಿಕ ಯಾ ಜನಪದ ನಾಟಕಗಳನ್ನು ಅದ್ಧೂರಿಯಲ್ಲಿ ಪ್ರದರ್ಶನ ಮಾಡಿದೆ. ನಂಕ್ ದಾಯೆ, ನಂಕ್ಲ ಕಾಲ ಬರು, ಏರೆಗ್ ಗೊತ್ತು, ಪಚ್ಚು ಪಾತೆರೊಡು ಹಾಗೂ ಹಲವಾರು ಸಾಮಾಜಿಕ ನಾಟಕಗಳನ್ನು ಈ ತಂಡ ಯಶಸ್ವಿಯಾಗಿ ರಂಗದಲ್ಲಿ ಪ್ರದರ್ಶಿಸಿದೆ.

By suddi9

Leave a Reply

Your email address will not be published. Required fields are marked *