ಮುಂಬಯಿ : ಕರ್ನಾಟಕ ಸರಕಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇವರು ಎ.27ರಂದು ಬುಧವಾರ ಸಂಜೆ ಮೂಡುಬಿದಿರೆ ಇಲ್ಲಿನ ಶ್ರೀ ಜೈನ ಮಠ ಹಾಗೂ ಜಗತ್ ಪ್ರಸಿದ್ದ ಸಾವಿರ ಕಂಬ ಬಸದಿಗೆ ಭೇಟಿ ನೀಡಿ ಶ್ರೀ ದಿಗಂಬರ ಜೈನ ಮಠ, ಜೈನಕಾಶಿ ಮೂಡಬಿದಿರೆ ಮಹಾಕ್ಷೇತ್ರದ ಜೈನ ಮಹಾಸಂಸ್ಥಾನದ ಪೀಠಾಧ್ಯಕ್ಷ ಭಾರತ ಭೂಷಣ ಜಗದ್ಗುರು ಸ್ವಸ್ತಿಶ್ರೀ ಜಗದ್ಗುರು ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು.
ಶ್ರೀ ಚಾರುಕೀರ್ತಿ ಭಟ್ಟಾರಕರು ಮುಖ್ಯಮಂತ್ರಿ ಅವರಿಗೆ ಜೈನ ಮಠದ ವತಿಯಿಂದ ಅಭಿನಂದನಾ ಪತ್ರ ನೀಡಿ ಧವಲ ಗ್ರಂಥ, ರತ್ನಾಕರ ಶತಕತ್ರಯ ಹಾಗೂ ಶ್ರೀಮಠ ದ ಧವಳತ್ರಯ ಪ್ರಕಾಶನದ ಪುಸ್ತಕ ಸ್ಮರಣಿಕೆಯಾಗಿ ನೀಡಿ ಗೌರವಿಸಿ ಆಶೀರ್ವದಿಸಿದರು.
ಆತ್ಮನಿರ್ಭರ ಭಾರತದಂತೆ ಕರ್ನಾಟಕವನ್ನು ಪ್ರಗತಿ ಯತ್ತ ಮುನ್ನಡೆಸಲಿ ರಾಜ್ಯ ದಲ್ಲಿ ಧರ್ಮ ಸಾಮರಸ್ಯ ಹೆಚ್ಚಾಗಲಿ ಸುಭಿಕ್ಷೆ ನೆಲೆಯಾಗಲಿ.ಜೈನ ಕಾಶಿ ಮೂಡುಬಿದಿರೆಯ ಬಸದಿ ಹಾಗೂ ಶ್ರೀ ಮಠ ಜೀರ್ಣೋದ್ದಾರಕ್ಕೆ ಈಗಾಗಲೆ ರೂಪಾಯಿ ಐದು ಕೋಟಿ ಅನುದಾನಕ್ಕೆ ಬೇಡಿಕೆ ಇಟ್ಟಿದ್ದು ಶೀಘ್ರ ಹಣ ಬಿಡುಗಡೆ ಆಗಲಿ. ಅಂತಾರಾಷ್ಟ್ರೀಯ ಜೈನ ಪುರಾತತತ್ವ ವಸ್ತು ಸಂಗ್ರಹಾಲಯಕ್ಕೆ ರಮಾರಾಣಿ ಶೋಧ ಸಂಸ್ಥಾನಕ್ಕೆ ಸೂಕ್ತ ಅನುದಾನ ಸಿಗಲಿ ಎಂದು ವಿವಿಧ ಬೇಡಿಕೆಗಳ ಯೋಜನಾ ಪತ್ರಗಳನ್ನು ಶ್ರೀಗಳು ಮುಖ್ಯಮಂತ್ರಿಗೆ ಹಸ್ತಾಂತರಿಸಿದರು. ಸ್ವಾಮೀಜಿ ಉಪಸ್ಥಿತಿ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿ ಬೊಮ್ಮಯಿ ಅವರ ಯೋಗ ಕ್ಷೇಮ ಹಾಗೂ ಲೋಕ ಕಲ್ಯಾಣರ್ಥ ನವಗ್ರಹ ಮಂತ್ರ ದಾನ್ಯ ತರ್ಪಣ ಮಾಡಲಾಯಿತು.
ಬೊಮ್ಮಾಯಿ ಅವರು ಭಗವಾನ್ ಪಾರ್ಶ್ವನಾಥ ಸ್ವಾಮಿ ದರ್ಶನ ಮಾಡಿ ಕ್ಷೇತ್ರದ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನ ಮಾಡುದಾಗಿ ಭರವಸೆ ಇತ್ತರು. ಬಳಿಕ ಸಾವಿರ ಕಂಬ ಬಸದಿಗೆ ಸ್ವಾಮೀಜಿ ಹಾಗೂ ಗಣ್ಯ ರೊಂದಿಗೆ ಬೇಟಿ ನೀಡಿ ದರ್ಶನ ಪಡೆದರು. ಡಾ| ಪ್ರಭಾತ್ ಬಲ್ನಾಡು ಕಾರ್ಯಕ್ರಮ ನಿರೂಪಿಸಿ ದರು ಸೌಮ್ಯ ಶ್ರೀ ವಂದಿಸಿದರು.
ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಇಂಧನ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ.ಸುನೀಲ್ ಕುಮಾರ್, ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್, ಉಡುಪಿ ಶಾಸಕ ಕೆ.ರಘುಪತಿ ಭಟ್, ಮಟ್ಟಾರು ರತ್ನಾಕರ್ ಹೆಗ್ಡೆ, ಕೃಷ್ಣರಾಜ್ ಹೆಗ್ಡೆ, ಮಾಜಿ ಸಚಿವ ಅಭಯ ಚಂದ್ರ ಜೈನ್ ಬಸದಿ ಮುಕ್ತೇಸರ ಪಟ್ಣ ಶೆಟ್ಟಿ ಸುದೇಶ್, ಬಾಹುಬಲಿ ಪ್ರಸಾದ್, ಕೆ.ಪಿ ಜಗದೀಶ್ ಅಧಿಕಾರಿ, ಪುರಸಭೆ ಅಧ್ಯಕ್ಷ ಪ್ರಸಾದ್, ಮುಖ್ಯಧಿಕಾರಿ ಇಂದೂ, ಜಯರಾಜ್ ಕಾಂಬ್ಳಿ, ವಕೀಲೆ ಶಾಂತಿ ಪ್ರಸಾದ್, ಪದ್ಮ ಪ್ರಸಾದ್, ತುಳುಕೂಟ ಬರೋಡಾ ಅಧ್ಯಕ್ಷ ಶಶಿಧರ್ ಬಿ.ಶೆಟ್ಟಿ ಗುರುವಯನಕೆರೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು

