ಕೈಕಂಬ : ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಅಡ್ಡೂರು ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ(ಮಂಗಳೂರು) ಮತ್ತು ಲೈಫ್‌ಲೈನ್ ಹೆಲ್ತ್ ಕೇರ್ ಪ್ಲಸ್ ಕ್ಲಿನಿಕ್ ಬಿ. ಸಿ ರೋಡ್ ಇದರ ಸಹಯೋಗದಲ್ಲಿ ಮಾ. ೨೦ರಂದು ಭಾನುವಾರ ಅಡ್ಡೂರಿನ ಅಲ್ ಮದ್ರಸತುಲ್ ಬದ್ರಿಯಾ ಮಸೀದಿ ಸಭಾಂಗಣದಲ್ಲಿ ಉಚಿತ ಹೃದ್ರೋಗ ಮತ್ತು ನೇತ್ರ ತಪಾಸಣಾ ಶಿಬಿರ ನಡೆಯಿತು.gur-mar-21-sanmana(dr. narasinha pai)

ಪಿಎಫ್ ಬ್ಲಡ್ ಡೋನರ್ಸ್ ಫಾರಂ(ಅಡ್ಡೂರು) ಅಧ್ಯಕ್ಷ ಖಾಸೀಂ ಪ್ಯಾರ ಅಧ್ಯಕ್ಷತೆ ವಹಿಸಿದ್ದರು. ಕೆಎಂಸಿಯ ಖ್ಯಾತ ಹೃದ್ರೋಗ ತಜ್ಞ ಡಾ. ನರಸಿಂಹ ಪೈ, ಬಿ ಸಿ ರೋಡ್‌ನ ನೇತ್ರ ತಜ್ಞರಾದ ಡಾ. ಶಾಹಿಕ್ ಹಾಗೂ ಅಡ್ಡೂರಿನ ಡಾ. ಇಕೆಎ ಸಿದ್ದಿಕ್ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಡಾ. ಸಿದ್ದಿಕ್, ಡಾ. ಸ್ವಾಲಿಹತ್ ಎಸ್, ಡಾ. ಪುಷ್ಪಲತಾ ಅವರನ್ನು ಸನ್ಮಾನಿಸಲಾಯಿತು.

ಅಡ್ಡೂರು ಬದ್ರಿಯಾ ಜುಮಾ ಮಸೀದಿ ಖತೀಬ್ ಸಾದಕತ್ತುಲ್ಲ ಫೈಝಿ ಶಿಬಿರ ಉದ್ಘಾಟಿಸಿದರು. ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಜಲೀಲ್ ಕೆ, ಅಹಮ್ಮದ್ ಬಾವ ಅಂಗಡಿಮನೆ, ಇಲ್ಯಾಸ್ ಬಜ್ಪೆ, ಗುರುಪುರ ಪಂಚಾಯತ್ ಸದಸ್ಯ ಅಧ್ಯಕ್ಷ ಯಶವಂತ ಶೆಟ್ಟಿ, ಅಹ್ಮದ್ ಬಾವ, ಎಂ ಎಚ್ ಮೈಯ್ಯದ್ದಿ, ಹಾಜಿ ಇಸ್ಮಾಯಿಲ್ ಗೇಟ್, ಪಂಚಾಯತ್ ಸದಸ್ಯರಾದ ಎ ಕೆ ರಿಯಾಝ್, ಅಶ್ರಫ್, ಮನ್ಸೂರ್, ಶಾಹಿಕ್ ಹಾಗೂ ಎ ಕೆ ಮುಸ್ತಾಕ್ ಇದ್ದರು. ಶರೀಫ್ ಗೋಳಿಪಡ್ಪು ಪ್ರಸ್ತಾವಿಕ ಮಾತನಾಡಿದರು. ರಹೀಂ ಬೊಟ್ಟಿಕ್ಕೆರೆ ಸ್ವಾಗತಿಸಿದರೆ, ಅಸ್ತಾರ್ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *