ಕೈಕಂಬ: ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ದಕ್ಷಿಣ ಕನ್ನಡ ಜಿಲ್ಲೆ ಫೆರಾರ ಊರಿನ ಜೋಯ್ಲಿನ್ ಮೆಂಡೋನ್ಸಾ ರವರಿಗೆ ಮಾ.20ರಂದು ಭಾನುವಾರ ಪೇಜಾವರ ವಲಯದ 6 ಚರ್ಚುಗಳ (ಪೇಜಾವರ, ಬಜ್ಪೆ, ಗುರುಪುರ ಕೈಕಂಬ, ಫೆರಾರ, ಪೆರ್ಮುದೆ, ಅದ್ಯಾಪಾಡಿ) ವತಿಯಿಂದ ಬಜ್ಪೆ ಯಲ್ಲಿ ಸನ್ಮಾನ ಕಾರ್ಯಕ್ರಮ ಜರುಗಿತು.WhatsApp Image 2022-03-22 at 12.20.19 PM (1)

ಪೇಜಾವರ ವಲಯ ಧರ್ಮಕೇಂದ್ರದ ಮುಖ್ಯಸ್ಥರಾದ ಅತಿ ವಂದನೀಯ ಮಾರ್ಸೆಲ್ ಸಲ್ಡಾನಾ ಅವರು ಅಧ್ಯಕ್ಷತೆ ವಹಿಸಿ ಸನ್ಮಾನಿಸಿದರು. ಈ ವೇಳೆ ವಲಯದ ಎಲ್ಲಾ ಧರ್ಮಗುರುಗಳು, ಭಗಿನಿಯರು ಹಾಗೂ ಪಾಲನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದು ಸನ್ಮಾನಿಸಿದರು.WhatsApp Image 2022-03-22 at 12.20.19 PM

ಶ್ರೀಮತಿ ಪ್ರಮೀಳಾ ಪೇರಿಸ್ ಸನ್ಮಾನಿತರನ್ನು ಪರಿಚಯಿಸಿದರು ಇದೇ ಸಂದರ್ಭದಲ್ಲಿ ಸನ್ಮಾನಿತರ ತಾಯಿ ಶ್ರೀಮತಿ ಪೌಲಿನ್ ಮೆಂಡೊನ್ಸ ರವರನ್ನು ಅಭಿನಂದಿಸಲಾಯಿತು. ಶ್ರೀ ರೋಮನ್ಸ್ ಲೋಬೊ ಕೈಕಂಬ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *