ಮುಂಬಯಿ : ಪವಾರ್ ಪಬ್ಲಿಕ್ ಸ್ಕೂಲ್ ಪೊವಾಯಿ ಮುಂಬಯಿ ಇದರ ೯ನೇ ತರಗತಿ ವಿದ್ಯಾರ್ಥಿ ಮಾ| ಆದಿ ರವಿ ಪೂಜಾರಿ ಇವರು ಇತ್ತೀಚೆಗೆ ಮರೀನ್‌ಲೈನ್ಸ್ ಇಲ್ಲಿನ ಯೂನಿವರ್ಸಿಟಿ ಕ್ರೀಡಾಂಗಣದಲ್ಲಿ ಜರುಗಿದ ಕ್ರೀಡಾಕೂಟದಲ್ಲಿ ಪವಾರ್ ಪಬ್ಲಿಕ್ ಸ್ಕೂಲ್‌ನ್ನು ಪ್ರತಿನಿಧಿಸಿ ೨೦೦ ಮೀಟರ್ ಓಟ ಮತ್ತು ೪x೧೦೦ ಮೀಟರ್ ರಿಲೇಯಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.
ಇವರು ಉಡುಪಿ ಕಲ್ಯಾಣ್ಪುರ ಇಲ್ಲಿನ ತೋನ್ಸೆ ಇಲ್ಲಿನ ಇವರು ಗ್ರಾಮದಲ್ಲಿ ಕಾಂತು ಪೂಜಾರಿ ಮನೆ ನಿವಾಸಿ ಹಾಗೂ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತೀ ಗರೋಡಿ ಸೇವಾ ಟ್ರಸ್ಟ್ ಮುಂಬಯಿ (ರಿ.) ಇದರ ಸಕ್ರೀಯ ಸದಸ್ಯ ರವಿ ಪೂಜಾರಿ ಮತ್ತು ಸಂಧ್ಯಾ ಆರ್.ಪೂಜಾರಿ ಇನ್ನಂಜೆ ಇವರ ಸುಪುತ್ರ ಹಾಗೂ ಸೇವಾ ಟ್ರಸ್ಟ್ ಮುಂಬಯಿ (ರಿ.) ಇದರ ಗೌ| ಪ್ರ| ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ ಇವರ ಸೋದರಪುತ್ರ ಆಗಿದ್ದಾರೆ.
ಪ್ರತಿಭಾನ್ವಿತ ಆದಿ ಪೂಜಾರಿಗೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತೀ ಗರೋಡಿ ಸೇವಾ ಟ್ರಸ್ಟ್ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಮತ್ತು ಬಿಲ್ಲವರ ಸೇವಾ ಸಂಘ ಸಂತೆಕಟ್ಟೆ ಅಧ್ಯಕ್ಷ ಜೇಸಿ ಶೇಖರ್ ಗುಜ್ಜರಬೆಟ್ಟು ಹಾಗೂ ಉಭಯ ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.
