ಮನುಷ್ಯ ಭೂಮಿಯಾಚೆಗಿನ ಅಂತರಿಕ್ಷಕ್ಕೆ ಉಪಗ್ರಹಗಳನ್ನು ಕಳಿಸಿ ವಾಸವಾಗಲು ಯೋಗ್ಯವಾದ ಸ್ಥಳವೊಂದರ ಹುಡುಕಾಟದಲ್ಲಿ ತೊಡಗಿದ್ದಾನೆ. ಜಗತ್ತಲ್ಲಿ ತಂತ್ರಜ್ಞಾನಗಳು ವೇಗವಾಗಿ ಬದಲಾಗುತ್ತಿದೆ. ಆದರೆ ಇಷ್ಟೆಲ್ಲಾ ಬಲಾವಣೆ ತಂದರೂ ತಾವಿನ್ನೂ ಶಿಲಾಯುಗದ ಮಾನವರಂತೆ ಕಂಗೊಳಿಸುವ ಕುಟುಂಬವೊಂದಿದೆ. ಇದಿರುವುದು ಗಂಜಿಮಠ ಸಮೀಪದ ಮಳಲಿ ಎಂಬ ಊರಿನ ಮೊಗರು ಗ್ರಾಮದಲ್ಲಿ. ದಲಿತ ಪಂಗಡದ ಇವರು ಇನ್ನೂ ಸಂಕುಚಿತ ರೀತಿಯಲ್ಲೇ ಬದುಕುತ್ತಿದ್ದಾರೆ. ಇಲ್ಲಿ 11 ಕುಟುಂಬಗಳಿವೆ. ಇವರಿಗೆ ಸರಕಾರದ ವತಿಯಿಂದ ಮನೆ ಏನೋ ನಿಮರ್ಾಣವಾಗಿದೆ. ಅದೊಂದು ಬಿಟ್ಟರೆ ಬೇರೆ ಆಸ್ತಿಯೇ ಇವರ ಬಳಿ ಇಲ್ಲ. ಗಂಜಿಮಠದಿಂದ ಸುಮಾರು ಒಂದು ಕಿ.ಮೀ ದೂರದಲ್ಲಿರುವ ಮಳಲಿ ಸೈಟ್ ಎಂಬಲ್ಲಿ ಇವರ ಹಾಡಿ ಸಿಗುತ್ತದೆ. ಇಲ್ಲಿರುವ 11 ಮನೆಗಳ ಜನರೂ ಒಂದಲ್ಲಾ ಒಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವು ಮನೆಗಳಿಗೆ ಇನ್ನೂ ವಿದ್ಯುತ್ ಇಲ್ಲ, ಕೆಲವರಿಗೆ ಶೌಚಾಲಯವಿಲ್ಲ. ಯುವಕರಿಗೆ ಸರಿಯಾದ ಉದ್ಯೋಗವಿಲ್ಲ. ಇದರಲ್ಲಿ ಕೆವು ಹೆಂಗಸರು ಬೀಡಿ ಕಟ್ಟಿ ವಾಸವಾಗಿದ್ದಾರೆ. ಚಿಂತಾಜನಕ ಪರಿಸ್ಥಿತಿ: ಇಲ್ಲಿ ಸುಮಾರು ಹನ್ನೊಂದು ಕುಟುಂಬಗಳಿಗೂ ಸರಕಾರದ ವತಿಯಿಂದ ಮನೆ ನಿಮರ್ಿಸಲಾಗಿದೆ. ಆದರೆ ಈಗದರ ಪರಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಕೆಲವು ಮನೆಗಳ ಹಂಚು ಹಾರಿಹೋಗಿವೆ. ಕೆಲವರ ಶೌಚಾಲಯಗಳು ಕುಸಿದು ಹೋಗಿದೆ. ಕೆಲವು ಮನೆಗಳಿಗೆ ಟಪರ್ಾಲು ಹಾಕಲಾಗಿದ್ದು ಕುಸಿಯುವ ಹಂತದಲ್ಲಿದೆ. ಅವರಿಗೆ ಕಲ್ಪಿಸಲಾದ ಟಿವಿ ವೀಕ್ಷಣಾಲಯದಲ್ಲಿರುವ ಟಿವಿ ಬಂದ್ ಆಗಿದೆ. ಚಿಕ್ಕದಾದ ಜೋಪಡಿಯಂಥಾ ಮನೆಯಲ್ಲಿ ವಾಸವಾಗಿದ್ದಾರೆ. ಕೆಲವರು ಇಲ್ಲಿನ ದಲಿತ ಕುಟುಂಬಿಕರನ್ನು ಸಿಮಂತದಂತಹಾ ಕಾರ್ಯಕ್ರಮಕ್ಕೆ ಕರೆದು ಗಭರ್ಿಣಿಗೆ ಊಟ ಸಂಪ್ರದಾಯ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಅಜಲು ಪದ್ದತಿ ಇನ್ನೂ ಜೀವಂತವಾಗಿದೆ ಎಂದೇ ಹೇಳಬಹುದು. bajpe photo ( 7)

bajpe photo (1 )

bajpe photo (2 )

bajpe photo (3 )

bajpe Photo (5)

bajpe photo (6)

bajpe pHoto (8)

bajpe pHoto (9)

 

ಇವರ ಮಕ್ಕಳು ಸರಕಾರಿ ಶಾಲೆ ಮಳಲಿ, ಉದರ್ು ಶಾಲೆ ಗಂಜಿಮಠ ಮತ್ತು ಇವರಲ್ಲಿ ಕೆಲವು ಮಕ್ಕಳು ಸುರಲ್ಪಾಡಿ ಶಾಲೆಗೆ ಹೋಗುತ್ತಿದ್ದಾರೆ. ಉದರ್ು ಶಾಲೆಯಿಂದ ಟೆಂಪೋ ಮನೆಬಾಗಿಲಿಗೆ ಬರುತ್ತಿದೆ. ಆದರೆ ಇಲ್ಲಿನ ಹೆಚ್ಚಿನ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಹೀಗೆ ಹಲವಾರು ಮಕ್ಕಳು ಅರ್ಧದಲ್ಲೇ ಶಾಲೆ ಬಿಟ್ಟಿದ್ದು ಐದು ಅಥವಾ ಆರನೇ ಕ್ಲಾಸಿಗೆ ಹೋಗಿದ್ದೇ ಹೆಚ್ಚು. ಕೆಲವರು ಶಾಲೆಗೆ ಮನಸ್ಸು ಬಂದಾಗ ಹೋಗುತ್ತಾರೆ. ಒಂದು ತಿಂಗಳಲ್ಲಿ ಹತ್ತು ದಿನ ಹಾಜರಾಗುವುದೇ ಹೆಚ್ಚು. ಇಲ್ಲವಾದರೆ ಮನೆಯಲ್ಲೇ ಆಟವಾಡುತ್ತಾ ಕಳೆಯುತ್ತಾರೆ. ಹರಕಲು ಬಟ್ಟೆ, ಕೆದರಿದ ಕೂದಲು ಹೀಗೆ ತೀರಾ ಬಡತನದ ಜೀವನವನ್ನು ಕಳೆಯುತ್ತದ್ದಾರೆ. ಸ್ಥಳೀಯರ ಅಭಿಪ್ರಾಯದಂತೆ ಯಾವಾಗಲೂ ಕುಡಿದು ಚಿತ್ತಾಗಿರುವ ಇವರು ಒಮ್ಮೊಮ್ಮೆ ಎಲ್ಲೆಂದರಲ್ಲಿ ಬಿದ್ದುಕೊಳ್ಳುತ್ತಾರೆ. ಕಳೆದ ಬಾರಿ ಪಂಚಾಯತ್ ಶೌಚಾಲಯಕ್ಕೆಂದು ಕಲ್ಪಿಸಿದ ತಗಡು ಶೀಟನ್ನೂ ಸಹ ಕುಡಿಯಲೆಂದು ಮಾರಿದ್ದಾರೆ, ಒಮ್ಮೊಮ್ಮೆ ಕುಡಿದು ಟೈಟಾಗಿ ಗಲಾಟೆ ಮಾಡುತ್ತಾರೆ ಎಂದು ಕೆಲವು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ. ಇಲ್ಲಿಗೆ ಕೆಲವು ದಲಿತ ಮುಖಂಡರೂ ಸಹ ಆಗಮಿಸಿದ್ದಾರಾದರೂ ಅವರಿಗೆ ನಾಗರಕ ಬದುಕು ಕೊಡಲು ಮನಸ್ಸು ಮಾಡಿಲ್ಲ.ಅಲ್ಲದೆ ಸಮಾಜ ಕಲ್ಯಾಣ ಇಲಾಖೆಯ ಸದಸ್ಯರಾಗಲೀ, ರಾಜಕೀಯ ಮುಖಂಡರಾಗಲೀ, ಸ್ವಾಮೀಜಿಗಳಾಗಲೀ ಇಲ್ಲಿಗೆ ಕುದ್ದಾಗಿ ಆಗಮಿಸಿಯೇ ಇಲ್ಲ. ಬುಟ್ಟಿ ಹೆಣೆಯುವುದು ಇವರ ಕುಲ ಕಸುಬು: ಜೀವನೋಪಾಯಕ್ಕಾಗಿ ಇನ್ನೂ ಬುಟ್ಟಿ ಹೆಣೆಯುವ ಕಾಯಕವನ್ನು ಮಾಡುವ ಇವರು ಇದರಿಂದ ಸಿಗುವ ಅಲ್ಪ ಸ್ವಲ್ಪ ಆದಾಯದಿಂದ ಜೀವನ ಸಾಗಿಸುತ್ತಿದ್ದಾರೆ. ಗೊಬ್ಬರ ತೆಗೆಯುವ ಬುಟ್ಟಿ, ಮೊರ, ಅನ್ನ ಬಸಿಯುವ ಕೈಸಟ್ಟಿ ಮುಂತಾದ ವಸ್ತುಗಳನ್ನು ತಯಾರಿಸುತ್ತಾರೆ. ಕಾಡು ಅಥವಾ ಗುಡ್ಡೆಯ ನೆರಳಿರುವ ಜಾಗದಲ್ಲಿ ಕುಟುಂಬ ಸಮೇತರಾಗಿ ಬೀಡು ಬೀಳುತ್ತಾರೆ. ಕಾಡಿನಲ್ಲಿ ಸಿಗುವ ಬಿಳಲುಗಳನ್ನು ಹುಡುಕುತ್ತಾರೆ. ಅದನ್ನು ರಾಶಿ ಆಯ್ಕೆ ಮಾಡಿ ಸುಂದರವಾದ ಬುಟ್ಟಿ ತಯಾರಿಸುತ್ತಾರೆ. ಬಿಳಲುಗಳನ್ನು ತರುವ ಕಾಯಕ ಗಂಡಸರದ್ದು. ಹೆಂಗಸರು ತನ್ನ ಮಕ್ಕಳನ್ನು ಅಲ್ಲೇ ಆಟವಾಡಲು ಬಿಟ್ಟು, ಗಂಜಿ ಮಾಡುವ ಕೆಲಸ ಮಾಡುತ್ತಾರೆ. ಬೀಲುಗಳನ್ನು ನೀಟಾಗಿ ಕತ್ತರಿಸಿ ಅಲ್ಲಿಯೇ ಬುಟ್ಟಿ ಹೆಣೆಯುತ್ತಾರೆ. ಅವರ ಜೊತೆಗೆ ಹೆಂಗಸರೂ ಸಾಥ್ ನೀಡುತ್ತಾರೆ. ಸಂಜೆಯಾದಂತೆ ಬುಟ್ಟಿಯನ್ನು ಹಿಡಿದು ಮಾರುಕಟ್ಟೆ ಅಥವಾ ಅಂಗಡಿಗೆ ಕೊಟ್ಟು ಬರುತ್ತಾರೆ. ಒಂದು ಬುಟ್ಟಿಗೆ ಕೇವಲ 60ರಿಂದ 70 ರೂ ಸಿಗುತ್ತದೆ. ಸಾಧಾರಣವಾಗಿ ಒಂದು ದಿನದಲ್ಲಿ ಒಬ್ಬರು ಒಂದೋ ಎರಡೋ ಬುಟ್ಟಿ ಹೆಣೆಯಲು ಸಾಧ್ಯವಿದೆ. ಪ್ರಾಣಿ ಬೇಟೆ: ಗುಡ್ಡದಲ್ಲಿ ಬೀಡು ಬೀಳುವ ಇವರಲ್ಲಿನ ಗಂಡಸರ ಪೈಕಿ ಕೆಲವರು ಪ್ರಾಣಿ ಬೇಟೆಗೆಂದು ಹೋಗುತ್ತಾರೆ. ಇವರು ಬೇಟೆಯಾಡುವುದೇ ಒಂದು ವಿಚಿತ್ರ. ಪ್ರಾಣಿಗಳಿವೆ ಎಂಬ ಕುರುಹೂ ಸಹ ಇಲ್ಲದ ಜಾಗದಲ್ಲಿ ಮೊಲ, ಆಮೆ, ಹಂದಿಯಂಥಾ ಪ್ರಾಣಿಗಳನ್ನು ಬೇಟೆಯಾಡಿ ವಿಚಿತ್ರ ಎನಿಸುತ್ತಾರೆ. ನೀರಿರುವ ಹಳ್ಳಗಳ ಬದಿಯಲ್ಲಿ ಆಮೆ ಬೇಟೆಯಾಡುವುದು ಇವರ ನೆಚ್ಚಿನ ಹವ್ಯಾಸಗಳಲ್ಲಿ ಒಂದು. ತನಗೆ ದೊರಕಿದ ಆಮೆಯನ್ನು ಬಿಸಿಯಾದ ಕೆಂಡಕ್ಕೆ ಹಾಕುತ್ತಾರೆ. ಕೆಂಡದ ಬಿಸಿಗೆ ಆಮೆ ಸತ್ತ ನಂತರ ಅದರ ಚಿಪ್ಪನ್ನು ಬಿಡಿಸಿ ಅದರ ಉಳಿದ ಮಾಂಸವನ್ನು ಅಡಿಗೆಗೆ ಬಳಸುತ್ತಾರೆ. ಉಳಿದ ಜೀವಂತ ಆಮೆಯನ್ನು ಹಗ್ಗದಲ್ಲಿ ಕಟ್ಟಿ ಮರದಲ್ಲಿ ನೇತು ಹಾಕುತ್ತಾರೆ. ತನಗೆ ಬೇಕಾದಾಗ ಅದನ್ನು ಮಾಂಸ ಮಾಡಿ ತಿನ್ನುತ್ತಾರೆ. ಶಿಕ್ಷಣವೊಂದೇ ಪರಿಹಾರ ಇವರ ಸಮಸ್ಯೆಯನ್ನು ಮನಗಂಡು ದಲಿತ ನಾಯಕರು, ಸಮಾಜ ಕಲ್ಯಾಣ ಇಲಾಖೆ, ಸಮಾಜ ಸೇವಕರು ಎಚ್ಚರಗೊಳ್ಳುವ ಅವಶ್ಯಕತೆ ಇದೆ. ತನ್ನ ದಲಿತ ವರ್ಗ ಇಂದಿಗೂ ಅಸ್ಪೃಶ್ಯತೆಯಲ್ಲಿ ನರಳುತ್ತಿದೆ ಎಂದರೆ ಆಧುನಿಕ ಸಮಾಜ ತಲೆತಗ್ಗಿಸುವಂಥಾ ಹೇಯ ಘಟನೆಯಾಗಿದೆ. ಎಲ್ಲರೂ ಒಂದೇ ರೀತಿಯಲ್ಲಿ ಸಮಾಜದಲ್ಲಿ ಬಾಳಬೇಕು. ಈ ಗಿರಿಜನರಿಗೆ ತಾವಿನ್ನೂ ತುಳಿತಕೊಳಗಾಗುತ್ತಿದ್ದೇವೆ ಎಂಬ ವಿಷಯವನ್ನು ಅರಿಯದ ಮುಗ್ಧರು ಇವರು.

ಗಿರಿ

By suddi9

Leave a Reply

Your email address will not be published. Required fields are marked *