ಮುಂಬಯಿ : ರಾಷ್ಟ್ರವಾದಿ ಕಾಂಗ್ರೇಸ್ ಪಾರ್ಟಿಯ ಸರ್ವೋಚ್ಛ ನಾಯಕ, ಮಾಜಿ ಕೇಂದ್ರ ಸಚಿವ, ಮಹಾರಾಷ್ಟçದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಅಭಯಸ್ತದಿಂದ ಶಿವಸೇನಾ ಪಕ್ಷದ ವರಿಷ್ಠ ನೇತಾರ, ಮುಖ್ಯಮಂತ್ರಿ ಉದ್ಧಾವ್ ಠಾಕ್ರೆ ಅವರ ಮಹಾ ವಿಕಾಸ್ ಅಘಡಿ ಸರಕಾರ ಪೂರ್ಣಾವಧಿ ಪೂರೈಸಲಿದೆ. ೨೦೨೪ರಲ್ಲೂ ಮಹಾರಾಷ್ಟ್ರದಲ್ಲಿ ಮತ್ತೆ ಮಹಾ ವಿಕಾಸ್ ಅಘಡಿಯೇ ಸರ್ಕಾರ ರಚಿಸುತ್ತದೆ ಎಂದು ರಾಷ್ಟçವಾದಿ ಕಾಂಗ್ರೇಸ್ ಪಾರ್ಟಿ (ಎನ್‌ಸಿಪಿ) ಮುಂಬಯಿ ಪ್ರದೇಶ ಸಮಿತಿ ಹಿರಿಯ ಉಪಾಧ್ಯಕ್ಷ, ಉತ್ತರ ಮಧ್ಯ ಜಿಲ್ಲಾ ನಿರೀಕ್ಷಕ, ಬೃಹನ್ಮುಂಬಯಿ ಅಲ್ಲಿನ ತುಳು-ಕನ್ನಡಿಗರಲ್ಲಿನ ಹಿರಿಯ ರಾಜಕೀಯ ಧುರೀಣ ಲಕ್ಷ್ಮಣ ಸಿ.ಪೂಜಾರಿ ಚಿತ್ರಾಪು ತಿಳಿಸಿದರು.Laxman C.Poojary NCP (C)

ಎನ್‌ಸಿಪಿ ಸಂಸ್ಥಾಪಕ, ಸರ್ವೋಚ್ಛ ನಾಯಕ, ಮಾಜಿ ಕೇಂದ್ರ ಸಚಿವ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಅವರ ನಿಕಟವರ್ತಿಯಾಗಿದ್ದು ಎನ್‌ಸಿಪಿ ಪಕ್ಷದಿಂದ ‘ಸಮಾಜ ರತ್ನ’ ಬಿರುದು ಗೌರವಕ್ಕೆ ಪಾತ್ರರಾಗಿರುವ ಲಕ್ಷ್ಮಣ್ ಪೂಜಾರಿ ಅವರು ಶರದ್ ಪವಾರ್ ಅವರ ೮೧ನೇ ಹುಟುಹಬ್ಬದ ಶುಭಾವಸರದಿ ತಿಳಿಸಿದರು.Laxman C.Poojary NCP A1

ರಾಜಕೀಯ ಪಕ್ಷಗಳಲ್ಲಿ ಎಲ್ಲರೂ ಭ್ರಷ್ಟರಲ್ಲ. ಕಾಂಗ್ರೇಸ್ ಪಕ್ಷದಲ್ಲಿದ್ದ ಎಸ್.ಬಿ ಚವ್ಹಾಣ್, ವೈ.ಬಿ ಚವ್ಹಾಣ್, ವಸಂತ್‌ದಾದಾ ಪಾಟೀಲ್, ಬಿ.ಜನಾರ್ಧನ ಪೂಜಾರಿ, ಕಾಮರಾಜ್ ನಾಡರ್ ಧಾರವಿ ಇವರಂತಹ ಇನ್ನೂ ನೂರಾರು ಘಟಾನುಘಟಿ ಧುರೀಣರಿದ್ದು ಅವರೇ ಉದಾಹರಣೆ ಆಗಿದ್ದಾರೆ. ಪ್ರಸ್ತುತ ರಾಜಕಾರಣದಲ್ಲಿ ರಾಜಕೀಯ ಸ್ಥಾನಮಾನ ಪ್ರತಿಷ್ಠೆಗಾಗಿ ಒಬ್ಬರನ್ನೊಬ್ಬರು ದೂರುತ್ತಾ ತನ್ನತನವನ್ನು ಬೇಯಿಸಲು ಹೂಡುವ ಷಡ್ಯಾಂತ್ರ‍್ಯಗಳಿಂದ ರಾಜಕಾರಣಿಗಳೆಲ್ಲರೂ ಭ್ರಷ್ಟರೆಂಬ ಹಣೆಪಟ್ಟಿ ಕಟ್ಟಿಕೊಳ್ಳಬೇಕಾಗಿರುವುದು ಧುರೀಣರ ದುರದೃಷ್ಟ. ಸದ್ಯ ಇದೆಲ್ಲವೂ ಅನಿವಾರ್ಯವಾಗಿ ಪರಿಣಮಿಸಿದೆ. ಆರೇಳು ದಶಕಗಳಿಂದ ರಾಷ್ಟçವನ್ನಾಳಿದ ಪಕ್ಷಗಳ ಪಟ್ಟಭದ್ರ ಹಿತಾಸಕ್ತಿ, ಆಂತರಿಕ ಒಳಜಗಳದಿಂದ ಸ್ಥಾನಮಾನಗಳನ್ನು ಕಳೆದು ಕೊಳ್ಳುತ್ತಿದೆಯೇ ಹೊರತು ಸ್ವಂತಿಕೆಯ ಬುದ್ಧಿವಂತಿಕೆಯಿಂದಲ್ಲ. ಸದ್ಯ ಇವೆಲ್ಲವೂ ಸಾಕ್ಷರಸ್ಥ ಜನರಿಗೆ ಅರ್ಥವಾಗುತ್ತಿದೆ ಎಂದೂ ಪೂಜಾರಿ ಮನವರಿಸಿದರು.Laxman C.Poojary NCP A2

ಕಾಂಗ್ರೇಸ್‌ನಲ್ಲೂ ತೋರಿಕೆಗೆ ಅಲ್ಲ ಮನಪೂರ್ವಕವಾಗಿ ಒಟ್ಟಾದರೆ ಮತ್ತೆ ಕೇಂದ್ರದಲ್ಲಿ ಮೂಲ ಕಾಂಗ್ರೇಸ್ ಅಥವಾ ಮಿತ್ರಪಕ್ಷಗಳು ಆಳ್ವಿಕೆಗೆ ಬರುವುದರಲ್ಲಿ ಸಂಶಯವಿಲ್ಲ. ಮನಪೂರ್ವಕದ ಐಕ್ಯತೆಯೇ ರಾಷ್ಟ್ರದಲ್ಲಿ ಬಿಜೆಪಿ ನಿರ್ಮೂಲನದ ಮಂತ್ರವಾಗಿದೆ. ಮುಂದಿನ ಲೋಕಸಭೆಯಲ್ಲಿ ಎನ್‌ಸಿಪಿ ಸರ್ವೋಚ್ಛ ನಾಯಕ ಶರದ್ ಪವಾರ್ ಅವರು ಪ್ರಧಾನಮಂತ್ರಿ ಆದರೂ ಅಚ್ಚರಿಪಡಬೇಕಾಗಿಲ್ಲ ಇದೇ ನಮ್ಮ ಆಶಯವಾಗಿದೆ. ಭಾರತವು ಪ್ರಜಾಪ್ರಭುತ್ವದ ರಾಷ್ಟ್ರವಾಗಿದ್ದು ಇಲ್ಲಿ ಜಾತಿ ಧರ್ಮ ಪ್ರೇಮದ ರಾಜಕಾರಣ ಸಲ್ಲದು. ಮಾಡಿದರೂ ಇದು ಶಾಸ್ವತವಾಗಿರದು. ಧರ್ಮದ ರಾಜಕಾರಣದಿಂದ ವಿಶ್ವದ ಅದೆಷ್ಟೋ ರಾಷ್ಟಗಳೇ ಅವನತಿಯಾಗಿವೆ ಎಂದೂ ಪೂಜಾರಿ ತಿಳುವಳಿಕೆ ವ್ಯಕ್ತಪಡಿಸಿದರು.

ಮಹಾರಾಷ್ಟçದಲ್ಲಿ ನಾವು ಎಷ್ಟಾದರೂ ಹೊರನಾಡ ಜನರು. ಇಲ್ಲಿಯ ಮೂಲ ಮತ್ತು ಪ್ರಬಲ ಜನಾಂಗಗಳ ಜನನಾಯಕರು ಸರ್ಕಾರದಲ್ಲಿ ಜನಪ್ರತಿನಿಧಿಗಳಾಗುವುದು ಸರ್ವೇ ಸಾಮಾನ್ಯ. ಆದರೂ ತುಳು-ಕನ್ನಡಿಗರಾದ ನಮಗೆ ಅವಕಾಶ ಸಿಕ್ಕಲ್ಲಿ ಅದರ ಸದುಪಯೋಗ ಪಡೆದು ಜನನಾಯಕರಾಗುವ ಪ್ರಯತ್ನ ಖಂಡಿತಾ ಮಾಡಬೇಕು. ಬದಲಾಗಿ ಅವಕಾಶ ವಂಚಿತರಾದೆವು ಎಂದು ಆಕ್ರೋಶಿತರಾಗಿ ಪಕ್ಷ, ಸರಕಾರಗಳ ವಿರುದ್ಧ ಸಿಡಿದೇಳುವುದು ಸಲ್ಲದು. ಪ್ರಸ್ತುತ ರಾಜಕಾರಣ, ಭಾರತೀಯ ಆಡಳಿತಾತ್ಮಕ ಸೇವೆ ಇವೆಲ್ಲವುಗಳಲ್ಲೂ ಲಾಬಿ ಪ್ರಭಾವ, ಪರಮಾಪ್ತತ್ವ ಅಲ್ಲದೆ ಆರ್ಥಿಕವಾಗಿ ಸದೃಡವಾಗಿರಬೇಕಾಗುತ್ತದೆ. ಆದುದರಿಂದ ತುಳುಕನ್ನಡಿಗರು ಈ ನಿಟ್ಟಿನಲ್ಲಿ ಸದೃಢರಾಗಬೇಕು ಎಂದರು.

ರಾಮ ವನವಾಸಕ್ಕೆ ಹೊರಟಾಗ ಲಕ್ಷ್ಮಣನೂ ಆತನನ್ನು ಹಿಂಬಾಲಿಸಿದ್ದಂತೆ ಪವಾರ್ ಕಾಂಗ್ರೇಸ್ ಪಕ್ಷ ತ್ಯಜಿಸಿ ಸ್ವಪಕ್ಷ ಕಟ್ಟಿ ಮುನ್ನಡೆಸಿದಾಗ ಲಕ್ಷ ್ಮಣ್ ಪೂಜಾರಿ ಅವರೂ ಹಿಂಬಾಲಿಸಿ ಪವಾರ್ ನಿಷ್ಠರಾಗಿ ಇಂದಿಗೂ ಅವಿನಾಭಾವ ಸಂಬಂಧವನ್ನಿರಿಸಿದ್ದಾರೆ. ಪಕ್ಷದಲ್ಲಿನ ಲಕ್ಷ್ಮಣ ನಿಷ್ಠೆ, ಪ್ರಾಮಾಣಿಕತೆ ಮತ್ತು ಇವರ ಕಾರ್ಯಕರ್ತರಲ್ಲಿನ ಬಾಂಧವ್ಯ ಚಿರಾಯು. ಓರ್ವ ತುಳು ಕನ್ನಡಿಗನಾಗಿದ್ದು ಎನ್‌ಸಿಪಿಯಲ್ಲಿನ ಲಕ್ಷ್ಮಣ್ ಪೂಜಾರಿ ಬಾಂಧವ್ಯ ಮಹತ್ತರವಾದುದು. ಪಕ್ಷದ ವರಿಷ್ಠರು ಕೊಟ್ಟ ಜವಾಬ್ದಾರಿ ನಿರ್ವಾಹಿಸಿ ಪಕ್ಷನಿಷ್ಠೆಗೆ ಬದ್ಧರಾಗಿ ಸೇವೆಸಲ್ಲಿಸುತ್ತಿದ್ದಾರೆ. ಪಕ್ಷದ ಆರಂಭದಿಂದ ಸುಮಾರು ಇಪ್ಪತ್ತೆರಡು ವರ್ಷಗಳಿಂದ ಪಕ್ಷನಿಷ್ಠರಾಗಿದ್ದು ಕಳೆದ ನೋವೆಲ್ ಕೊರೋನಾ ಸಮಯದಲ್ಲಿ ಕೋವಿಡ್-೧೯ ಸಾಂಕ್ರಮಿಕ ರೋಗದ ವಿರುದ್ಧ ಹೋರಾಡಿ ಲಾಕ್‌ಡೌನ್ ಅವಧಿಯಲ್ಲೂ ಪಕ್ಷಕ್ಕೆ ನಿಷ್ಠಾವಂತನಾಗಿ ಶ್ರಮಿಸಿದ ಕಾರಣ ಎನ್‌ಸಿಪಿ ಪಕ್ಷದಿಂದ `ಸಮಾಜ ರತ್ನ’ ಬಿರುದು ಪ್ರದಾನಿಸಿ ಗೌರವಿಸಿದ್ದು ಸಂತಸ ತಂದಿದೆ ಎಂದು ಎನ್‌ಸಿಪಿ ಮುಂಬಯಿ ಇದರ ಆರು ತಾಲೂಕುಗಳ ಅಧೀನದ ದಕ್ಷಿಣ ಮುಂಬಯಿ ಜಿಲ್ಲಾ ನಿರೀಕ್ಷಕನಾಗಿರುವ ಲಕ್ಷ್ಮಣ ಪೂಜಾರಿ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮೂಲ್ಕಿ ಚಿತ್ರಾಪುರ ಮೂಲತಃ ಚೆನ್ನಪ್ಪ ಪೂಜಾರಿ ಮತ್ತು ಜಾನಕಿ ಪೂಜಾರಿ ದಂಪತಿ ಸುಪುತ್ರರಾದ ಲಕ್ಷ್ಮಣ್ ಪೂಜಾರಿ ಓರ್ವ ಸರಳ ಸಜ್ಜನಿಕೆಯ ಅನುಭವೀ ರಾಜರಣಿ. ಸದ್ದಿಲ್ಲದೆ ಜನಸೇವೆಯಲ್ಲಿ ತೊಡಗಿಸಿ ಕೊಂಡಿರುವ ಮುಂಬಯಿಯಲ್ಲಿನ ಹಿರಿಯ ಮುತ್ಸದ್ಧಿ. ಮೂಲತಃ ಕಾಂಗ್ರೇಸ್ ಪಕ್ಷದಲ್ಲಿದ್ದು ೧೯೯೭ರ ಬಿಎಂಸಿ ಚುನಾವಣೆಯಲ್ಲಿ ನಗರ ಸೇವಕ ಸ್ಥಾನಕ್ಕೆ ಅಭ್ಯರ್ಥಿ ಆಗಿದ್ದರು. ಮಾಡಾ ಸದಸ್ಯರಾಗಿ, ಪಶ್ಚಿಮ ಪ್ರಾದೇಶಿಕ ರೈಲ್ವೇ ಮಂಡಳಿ ಸದಸ್ಯರಾಗಿ, ಚಿತ್ರಾಪು ಬಿಲ್ಲವ ಸಂಘದ ಮಾಜಿ ಅಧ್ಯಕ್ಷರಾಗಿ, ಮೂಲ್ಕಿ ಬಿಲ್ಲವ ಸಂಘ ಮುಂಬಯಿ ಸಮಿತಿ ಉಪಾಧ್ಯಕ್ಷರಾಗಿ ಶ್ರಮಿಸಿರುವರು. ಸದ್ಯ ತನ್ನ ಏಕೈಕ ಸುಪುತ್ರ ನಿರಂಜನ್ ಲಕ್ಷ್ಮಣ್ ಪೂಜಾರಿ ಇವರನ್ನೂ ರಾಷ್ಟçವಾದಿ ಕಾಂಗ್ರೇಸ್ ಪಾರ್ಟಿಯಲ್ಲಿ ಸಕ್ರೀಯರನ್ನಾಗಿಸಿದ್ದು ಬೃಹನ್ಮುಂಬಯಿ ಮಹಾನಗರ ಪಾಲಿಕಾ ಪರಿಮಂಡಳದ ೩ಕೆ ಪೂರ್ವ ಸಮಿತಿಯ ಸದದ್ಯರಾಗಿರುವರು.

ಲಕ್ಷ್ಮಣ ಪೂಜಾರಿ ಮತ್ತು ಪ್ರಭಾವತಿ ಲಕ್ಷ್ಮಣ್ ದಂಪತಿಯು ಸುಪುತ್ರ ನಿರಂಜನ್, ಸೊಸೆ ರಶ್ಮೀ, ಮೊಮ್ಮಗ ಸಶ್ಮಿತ್, ಅನಿತಾ (ಸುಪುತ್ರಿ), ಪರಾಗ್ (ಅಳಿಯ), ಸೌಮಿಲ್ ಮತ್ತು ದೃತಿ (ಮೊಮ್ಮಕ್ಕಳು) ಅವರನ್ನೊಳಗೊಂಡು ಅಂಧೇರಿ ಪೂರ್ವದಲ್ಲಿ ನೆಲೆಯಾಗಿದ್ದಾರೆೆ.

By suddi9

Leave a Reply

Your email address will not be published. Required fields are marked *