ಮುಂಬಯಿ: ಓಲ್ಡ್ ಡೊಂಬಿವಲಿಯ ಕಾಂಚಿ ಅಪಾರ್ಟ್ಮೆಂಟ್ ನಿವಾಸಿ ಸ್ಕೈ ಮ್ಯಾನ್ ಟೈಲರ್ ವಿಠ್ಠಲ್ ನಾಯ್ಕ್ (63.) ಡಿ.23ರಂದು ಗುರುವಾರ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು. IMG-20211223-WA0148

ಮೂಲತಃ ಉಡುಪಿಯ ಕಕ್ಕುಂಜೆ ಕೊಂಬೆ, ಅಂಬಾಗಿಲು ನವರಾದ ಮೃತರು, ಕನ್ನಡ ಮಹಿಳಾ ಸಂಘದ ಸ್ಥಾಪಕ ಅಧ್ಯಕ್ಷರು. ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ಇವರು ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ ಆಚರಣಾ ಸಮಿತಿಯನ್ನು ಹುಟ್ಟುಹಾಕಿ ಆ ಮೂಲಕ ಹಲವಾರು ವರ್ಷಗಳಿಂದ ಆರಾಧನಾ ಮಹೋತ್ಸವವನ್ನು ಹಮ್ಮಿಕೊಂಡು ಬರುತ್ತಿದ್ದರು.  ಪತ್ನಿ, ಇಬ್ಬರು ಪುತ್ರರು ಓರ್ವ ಪುತ್ರಿಯನ್ನು ಹಾಗೂ ಬಂಧು ಬಾಂಧವರನ್ನು ಅಗಲಿದ್ದಾರೆ

By suddi9

Leave a Reply

Your email address will not be published. Required fields are marked *