ಮುಂಬಯಿ: ಮೈಸೂರು ಅಸೋಸಿಯೇಷನ್ ಮುಂಬಯಿ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಡಿ.19 ರಂದು ಶನಿವಾರ ಮೈಸೂರು ಅಸೋಸಿಯೇಷನ್ ಸಭಾಗೃಹದಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ‘ಮುಂಬಯಿ ಕನ್ನಡ ಗದ್ಯ ಸಾಹಿತ್ಯ’ ಈ ವಿಷಯಕ್ಕೆ ಪಿಹೆಚ್.ಡಿ ಪದವಿ ಪಡೆದ ಡಾ| ದುರ್ಗಪ್ಪ ವೈ.ಕೋಟಿಯವರ್ ಹಾಗೂ ‘ಮುಂಬಯಿ ಕನ್ನಡ ಮುಖವಾಣಿಗಳು’ ಎಂಬ ಸಂಪ್ರಬಂಧಕ್ಕೆ ಎಂ.ಫಿಲ್ ಪದವಿ ಪಡೆದ ಕುಮುದಾ ಆಳ್ವ ಅವರಿಗೆ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಪರವಾಗಿ ಶಾಲು ಹೊದೆಸಿ ಪದಕ ನೀಡಿ ಗೌರವಿಸಿದರು
ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಮಾತನಾಡಿ ದುರ್ಗಪ್ಪ ಅವರ ಸಾಧನೆ ಪ್ರಮುಖವಾದುದು. ಕಳೆದ ೧೫೦ ವರ್ಷಗಳಲ್ಲಿ ಪ್ರಕಟವಾದ ಮುಂಬಯಿ ಕನ್ನಡ ಗದ್ಯ ಕೃತಿಗಳ ವೈಶಿಷ್ಟ್ಯತೆ ಕಟ್ಟಿಕೊಡುವ ಅವರ ‘ಮುಂಬಯಿ ಕನ್ನಡ ಗದ್ಯ ಸಾಹಿತ್ಯ’ ಪಿಹೆಚ್.ಡಿ ಮಹಾಪ್ರಬಂಧ ಕೃತಿ ರೂಪದಲ್ಲಿ ಬೆಳಕು ಕಾಣುವಂತಾಗಲಿ ಎಂಬುದಾಗಿ ಶುಭ ಹಾರೈಸಿದರು. ಹಾಗೂ ಕುಮುದಾ ಆಳ್ವ ಅವರ `ಮುಂಬಯಿ ಕನ್ನಡ ಮುಖವಾಣಿಗಳು’ ಈ ಸಂಪ್ರಬಂಧವು ಸಹ ಅನೇಕ ದೃಷ್ಟಿಯಿಂದ ಗಮನ ಸೆಳೆಯುತ್ತದೆ. ಮುಂಬಯಿ ಕನ್ನಡ ಪತ್ರಿಕೋದ್ಯಮಕ್ಕೆ ಇಲ್ಲಿನ ಕನ್ನಡ ಪತ್ರಿಕೆಗಳ ಕೊಡುಗೆ ಗಮನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದಿನಪೂರ್ತಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಕೋಲ್ಯಾರು ರಾಜು ಶೆಟ್ಟಿ, ನಾರಾಯಣ ನವಿಲೇಕರ್, ನಿತ್ಯಾನಂದ ಡಿ.ಕೋಟ್ಯಾನ್, ವಿವೇಕ ಶ್ಯಾನಭಾಗ್, ಸಾ.ದಯಾ, ಡಾ| ದಾಕ್ಷಾಯಣಿ ಯಡಹಳ್ಳಿ, ಡಾ| ಉಮಾ ರಾವ್, ಚಿದಾನಂದ ಭಾಗ್ವತ್, ಕೆ.ಎಂ ಕೋಟ್ಯಾನ್, ಎಸ್.ಕೆ ಸುಂದರ್, ಡಾ| ಈಶ್ವರ್ ಅಲೆವೂರ್, ಡಾ| ಭರತ್ ಕುಮಾರ್ ಪೊಲಿಪು, ಜಯಾ ಸಿ.ಸಾಲಿಯಾನ್, ಪ್ರಭಾಕರ್ ದೇವಾಡಿಗ, ಡಾ| ರಮಾ ಉಡುಪ, ಡಾ| ಗಣಪತಿ ಶಂಕರಲಿಂಗ, ನಳಿನಾ ಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಪುರಸ್ಕೃತರಿಗೆ ಅಭಿನಂದಿಸಿದರು.
ಕಲಾ ಭಾಗ್ವತ್ ಕಾರ್ಯಕ್ರಮ ನಿರೂಪಿಸಿದರು. ಡಾ| ಗಣಪತಿ ಶಂಕರಲಿಂಗ ವಂದನಾರ್ಪಣೆಗೈದರು.
