ಬುದ್ಧಿ ಚುರುಕಾಗುತ್ತೆಂದು 70ರ ವೃದ್ಧನ ಮೆದುಳು, ಅಂಗಾಂಗಗಳನ್ನೇ ಕಿತ್ತು ತಿಂದ!
ವಾಷಿಂಗ್ಟನ್: ಬುದ್ಧಿ ಚುರುಕಾಗುತ್ತದೆ ಎಂದು ಭಾವಿಸಿ 70 ವರ್ಷದ ವೃದ್ಧನ ಹತ್ಯೆಗೈದು ಆತನ ಮೆದುಳು ಮತ್ತು ಅಂಗಾಂಗಗಳನ್ನು ವ್ಯಕ್ತಿಯೋರ್ವ ಸೇವಿಸುವ ಮೂಲಕ ನರಭಕ್ಷಕನಂತೆ ವಿಕೃತ ಮೆರೆದಿರುವ ಘಟನೆ ಯುರೋಪ್‍ನಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಡೇವಿಡ್ ಫ್ಲಾಗೆಟ್ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಜೇಮ್ಸ್ ಡೇವಿಡ್ ರಸ್ಸೆಲ್ ನನ್ನು ಪೊಲೀಸರು ಬಂಧಿಸಿದ್ದಾರೆ. ಜೇಮ್ಸ್ ಡೇವಿಡ್ ರಸ್ಸೆಲ್ ಮನೆಯ ಆವರಣದಲ್ಲಿರುವ ವಾಹನದಲ್ಲಿ ಡೇವಿಡ್ ಫ್ಲಾಗೆಟ್ ಶವ ಪತ್ತೆಯಾಗಿದೆ. ಆತನ ಕೈ, ಕಾಲುಗಳನ್ನು ಟೇಪಿನಿಂದ ಕಟ್ಟಲಾಗಿದೆ. ಅಲ್ಲದೆ ಆತನ ದೇಹದ ಹಲವಾರು ಭಾಗಗಳು ನಾಪತ್ತೆಯಾಗಿದೆ.