Published On: Fri, Apr 2nd, 2021

ಸೂರತ್‌ನಲ್ಲಿ ಕೆಎಫ್‌ಸಿ’ಎಸ್ ದ್ವಿತೀಯ ವಾರ್ಷಿಕ ಪಂದ್ಯಾಟ ಟ್ರೋಫಿ ಮುಡಿಗೇರಿಸಿದ ಹೋಟೆಲ್ ಹನಿ ಗಾರ್ಡನ್ ದಮನ್ ತಂಡ

ಸೂರತ್  ಕರ್ನಾಟಕ ಫ್ರೆಂಡ್ಸ್ ಕ್ರಿಕಟರ್ಸ್ ಸೂರತ್  ಸಂಸ್ಥೆಯು ಎ  ೦೨ ರಂದು ಗುಜರಾತ್‌ನಾದ್ಯಂತ ನೆಲೆಯಾದ ಕನ್ನಡಿಗರಿಗಾಗಿ ದ್ವಿತೀಯ ವಾರ್ಷಿಕ ಕೆಎಫ್‌ಸಿ’ಎಸ್ ಟ್ರೋಫಿ-೨೦೨೧ ಪಂದ್ಯಾಟವನ್ನು ಕಳೆದ ಭಾನುವಾರ ಮಾ.೨೮  ಗುಜರಾತ್ ರಾಜಧಾನಿ ಸೂರತ್ ಇಲ್ಲಿನ ಎಲ್.ಪಿ ಸವಾನಿ ಕ್ರೀಡಾಂಗಣದಲ್ಲಿ ಆಯೋಜಿಸಿತ್ತು

Surat KFCs Trophy 1

ಗುಜರಾತ್‌ನಲ್ಲಿ ನೆಲೆಸಿರುವ ಕರ್ನಾಟಕದ ಜನತೆಗೆ ಮಾತ್ರ ಸೀಮಿತವಾಗಿದ್ದ ಪಂದ್ಯಾಟದಲ್ಲಿ ಅಂತಿಮವಾಗಿ ೭ ತಂಡಗಳು ಕಣದಲ್ಲಿದ್ದು ನಿಯಮಿತ ಓವರ್‌ಗಳ ಪಂದ್ಯದಲ್ಲಿ ಹೋಟೆಲ್ ಹನಿ ಗಾರ್ಡನ್ ದಮನ್ ತಂಡ ಮತ್ತು ಕೆಎಫ್‌ಸಿ-ಬಿ ತಂಡವು ಅಂತಿಮ ಪಂದ್ಯಾಟದಲ್ಲಿ ಸೆಣದಾಡಿದ್ದು ಹೋಟೆಲ್ ಹನಿ ಗಾರ್ಡನ್ ದಮನ್ ತಂಡ ಪ್ರಥಮ ಸ್ಥಾನದೊಂದಿಗೆ ವಿಜೇತ ಗೊಂಡಿತು.

 Surat KFCs Trophy 2

ಹನಿ ಗಾರ್ಡನ್ ದಮನ್ ತಂಡವು ಪ್ರಥಮ ಸ್ಥಾನದ ಕೆಎಫ್‌ಸಿ’ಎಸ್ ಟ್ರೋಫಿ-೨೦೨೧ ಫಲಕ ಮತ್ತು ರೂಪಾಯಿ ೨೫,೦೦೦/- ನಗದು ಬಹುಮಾನ ತನ್ನದಾಗಿಸಿದರೆ ಕೆಎಫ್‌ಸಿ-ಬಿ ತಂಡವು ದ್ವಿತೀಯ ಸ್ಥಾನದ ಟ್ರೋಪಿ ಫಲಕ ಮತ್ತು ನಗದು ಬಹುಮಾನ ತನ್ನದಾಗಿಸಿತು. ತುಳುನಾಡ ಐಸಿರಿ ವಾಪಿ ಇದರ ಅಧ್ಯಕ್ಷ ಬಾಲಕೃಷ್ಣ ಎಸ್.ಶೆಟ್ಟಿ, ಗೌರವ ಕಾರ್ಯದರ್ಶಿ ಉದಯ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಹೋಟೆಲ್ ಹನಿ ಗಾರ್ಡನ್ ತಂಡದ ರೂವಾರಿ ಸುಕೇಶ್ ಎ.ಶೆಟ್ಟಿ ಮತ್ತು ತಂಡದ ಕ್ರೀಡಾಪಟುಗಳು ಟ್ರೋಪಿ ಫಲಕ ಸ್ವೀಕರಿಸಿದರು.

Winner Hanygarden Daman A1

ಚೇತನ್ ಕುಮಾರ್, ರಂಜಿತ್ ಶೆಟ್ಟಿ, ಅವಿನಾಶ್ ಶೆಟ್ಟಿ, ಶ್ರವಣ ಕುಮಾರ್, ಸುನಿಲ್ ಡಿಸೋಜಾ ಇವರುಗಳು ಪಂದ್ಯದ ಗೆಲವುವಿಗೆ ಉತ್ತಮ ಪ್ರದರ್ಶನ ನೀಡಿದರು. ಗುಜರಾತ್ ಬಿಲ್ಲರ ಸಂಘದ ಅಧ್ಯಕ್ಷ ಮನೋಜ್ ಸಿ.ಪೂಜಾರಿ, ಉದ್ಯಮಿಗಳೂ, ಕೊಡುಗೈದಾನಿಗಳಾದ ಶಶಿಧರ್ ಶೆಟ್ಟಿ ಬರೋಡ, ಅಜಿತ್ ಶೆಟ್ಟಿ, ರಾಮಚಂದ್ರ ಶೆಟ್ಟಿ, ರಾಧಾಕೃಷ್ಣ ಶೆಟ್ಟಿ, ಜಯಂತ್ ಶೆಟ್ಟಿ, ದಿನೇಶ್ ಬಿ. ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಸೂರತ್, ರಾಧಾಕೃಷ್ಣ ಮೂಲ್ಯ, ಸುನಿಲ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಜಗದೀಶ್ ರೈ ಮತ್ತಿತರ ಪ್ರಾಯೋಜಕರ ಸಹಯೋಗದಲ್ಲಿ ನೆರವೇರಿತು

 Winner Hanygarden Daman A2

ಗುಜರಾತ್‌ವಾಸಿ ಆಹ್ಮದಾಬಾದ್, ಬರೋಡ, ವಾಪಿ, ದಮನ್, ಸಿಲ್ವಾಸ, ವಲ್ಸಡ್, ಸೂರತ್, ಅಂಕ್ಲೇಶ್ವರ್ ಮತ್ತಿತರ ನಗರಗಳಲ್ಲಿನ ಕನ್ನಡಿಗರ ಪಾಲ್ಗೊಳ್ಳುವಿಕೆಯಲ್ಲಿನ ಈ ಪಂದ್ಯಾಟದಲ್ಲಿ ಕೆಎಫ್‌ಸಿ’ಎಸ್ ಇದರ ಸದಸ್ಯರು ಹಾಜರಿದ್ದು ಕೆಎಫ್‌ಸಿ’ಎಸ್ ಟ್ರೋಫಿ-೨೦೨೧ ಯಶಸ್ವಿಗೊಳಿಸಿದರು.

Surat KFCs Trophy 4

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter