Published On: Wed, Dec 8th, 2021

ಮಾಂಡ್ ಸೊಭಾಣ್ : ಚಾಫ್ರಾ ಸ್ಮರಣಾರ್ಥ ಮೂರು ನಾಟಕಗಳ ಪ್ರದರ್ಶನ

ಮುಂಬಯಿ : ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಇದರ ತಿಂಗಳ ವೇದಿಕೆ ಸರಣಿಯ ೨೦ನೇ ವರ್ಷಾಚರಣೆ ಮತ್ತು ೨೪೦ನೇ ಕಾರ್ಯಕ್ರಮ ಕಳೆದ ಭಾನುವಾರ (ಡಿ.೦೫) ಕಲಾಂಗಣದಲ್ಲಿ ನಡೆಯಿತು._SSD0977

ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ ಮತ್ತು ಅಧ್ಯಕ್ಷ ಲೂವಿಸ್ ಜೆ ಪಿಂಟೊ ದ್ದು ವೇದಿಕೆಯಲ್ಲಿದ್ದು ಹಿರಿಯ ಕೊಂಕಣಿ ರಂಗಭೂಮಿ ಕಲಾವಿದ ಚಾರ್ಲ್್ಸ ಸಿಕ್ವೇರಾ ಗಂಟೆ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಾಗೂ ಮಾಂಡ್ ಸೊಭಾಣ್‌ನ `ತೆಂಕೊ ಅಭಿಯಾನ್’ ವಿಶಿಷ್ಟ ಅಭಿಯಾನಕ್ಕೆ ಮಂಗಳೂರು ಇಲ್ಲಿನ ಪ್ರಸಿದ್ಧ ಲೆಕ್ಕ ಪರಿಶೋಧಕ ಆಲ್ವಿನ್ ರೊಡ್ರಿಗಸ್ ಚಾಲನೆ ನೀಡಿ ಕುರುಕುರು ಕಾನಾ ಮಕ್ಕಳ ಹಾಡುಗಾರಿಕೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು._SSD1019

ಮಾಡ್ ಸೊಭಾಣ್ ಕಾರ್ವಾಲ್ ಮನೆತನದ ನಾಲ್ಕನೇ ಕಲಾಕಾರ್ ಪುರಸ್ಕೃತರಾಗಿದ್ದು ಇತ್ತೀಚೆಗೆ ನಿಧನರಾದ ವಂ| ಫಾ| ಚಾರ್ಲ್್ಸ ವಾಸ್ ಇವರಿಗೆ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಕೋರಲಾಯಿತು. ಸ್ಪರ್ಧಾ ಸಂಚಾಲಕಿ ರೈನಾ ಕ್ಯಾಸ್ತೆಲಿನೊ ವಿಜೇತರ ಪಟ್ಟಿ ವಾಚಿಸಿದರು. ವಿತೊರಿ ಕಾರ್ಕಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು._SSD1108
ಮಾAಡ್ ಸೊಭಾಣ್ ಪ್ರೇರಕ ಮತ್ತು ಸಹ ಸ್ಥಾಪಕ ಕೊಂಕಣಿಯ ಮೇರು ಕವಿ ಚಾಫ್ರಾ ಡಿಕೋಸ್ತಾ ಇವರ ೨೯ ಪುಣ್ಯ ಸ್ಮರಣೆ ಸಂದರ್ಭ ಅವರು ಬರೆದ ಮೂರು ನಾಟಕಗಳ ಪ್ರದರ್ಶನ ನಡೆಯಿತು. ಮಾಂಡ್ ತಂಡದಿಂದ ವಿಕಾಸ್ ಕಲಾಕುಲ್ ನಿರ್ದೇಶನದಲ್ಲಿ `ಮ್ಹಜ್ಯಾ ಪುತಾಚೊ ಕಿಣ್ಕುಳೊ’ ಮತ್ತು `ಟೊಮೆಟೊ’ ಎಂಬ ಎರಡು ನಾಟಕಗಳು ಮತ್ತು ಡೆನಿಸ್ ಮೊಂತೇರೊ ನಿರ್ದೇಶನದಲ್ಲಿ ಅಸ್ತಿತ್ವ ತಂಡದಿಂದ `ಹಾಂಡೊ ಉಟ್ಲಾ..?’ ನಾಟಕಗಳು ಪ್ರದರ್ಶಿಸಲ್ಪಟ್ಟವು._SSD1141

ಮ್ಹಜ್ಯಾ ಪುತಾಚೊ ಕಿಣ್ಕುಳೊ ನಾಟಕದಲ್ಲಿ ಆಮ್ರಿನ್ ಡಿಸೊಜ, ಸುಜಯಾ ಡಿಸೋಜ, ಜಾಸ್ಮಿನ್ ಡಿಸೋಜ, ಸಂದೀಪ್ ಮಸ್ಕರೇನ್ಹಸ್ ಮತ್ತು ಜೀವನ್ ಸಿದ್ದಿ, ಹಾಗೂ ಟೊಮೆಟೊ ನಾಟಕದಲ್ಲಿ ಆಲ್ಬನ್ ಡಿಸಿಲ್ವಾ, ವ್ರೀಥನ್ ಪಿಂಟೊ, ರೊಮಾರಿಯೊ ಪಿಂಟೊ, ಇಮಾನಿ ಡಿಸೋಜ, ಪ್ರಿತಿಕಾ ಡಿಸೋಜ ಇವರು ಅಭಿನಯಿಸಿದರು. ರೆನಾಲ್ಡ್ ಲೋಬೊ, ಆಸ್ಟನ್ ಡಿಸೋಜ, ರೊನಿ ಕ್ರಾಸ್ತಾ ಕೆಲರಾಯ್ ಸಹಕರಿಸಿದರು.

ಹಾಂಡೊ ಉಟ್ಲಾ ನಾಟಕದಲ್ಲಿ ಡೆನಿಸ್ ಮೊಂತೇರೊ, ಡೊನ್ನಾ ಡಿಸೋಜ, ಸಂದೀಪ್ ಟೆಲ್ಲಿಸ್, ಜಾಕ್ಸನ್ ಡಿಕುನ್ಹಾ, ಆನ್ಸಿ÷್ಟನ್ ಮಚಾದೊ ನಟಿಸಿದರೆ, ಕ್ರಿಸ್ಟೋಫರ್ ಡಿಸೋಜ, ಸತೀಶ್ ಪಿಬಿ., ಕ್ಲಾನ್ ವಿನ್ ಫೆರ್ನಾಂಡಿಸ್, ಝೀನಾ ಬ್ರಾಗ್ಸ್, ಸ್ಯಾಮ್ವೆಲ್ ಮತಾಯಸ್ ಇವರು ಹಿನ್ನೆಲೆಯಲ್ಲಿ ಸಹಕರಿಸಿದರು. ಧ್ವನಿ ವ್ಯವಸ್ಥೆಯನ್ನು ಸುರಭಿ ಸೌಂಡ್ಸ್ ಮತ್ತು ಬೆಳಕಿನ ನಿರ್ವಹಣೆಯನ್ನು ಏಂಜಲ್ಸ್ ಪಡೀಲ್ ಇವರು ನಿರ್ವಹಿಸಿದರು.

೨೦೦೨ ಜನವರಿ ೦೬ ರಂದು ಆರಂಭವಾದ ಈ ಸರಣಿಯು ಎಲ್ಲಾ ಆಡೆತಡೆಗಳನ್ನು ಮೀರಿ ಯಶಸ್ವಿ ೨೦ ವರ್ಷಗಳನ್ನು ಪೂರೈಸಿದೆ. ಕೊಂಕಣಿಯ ಗಾಯನ, ಹಾಡು, ನೃತ್ಯ, ನಾಟಕ, ಯಕ್ಷಗಾನ, ಮಾಂಡೊ, ಕೋಲಾಟ, ಗುಮಟೆ ಹಾಡು ಇತ್ಯಾದಿ ಜನಪದದ ವಿವಿಧ ಪ್ರಕಾರಗಳಿಗೆ ವೇದಿಕೆ ಕಲ್ಪಿಸಿದೆ. ದೇಶ ವಿದೇಶದ ಕಲಾವಿದರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter