Published On: Wed, Dec 8th, 2021

ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ನೇತೃತ್ವದಲ್ಲಿ ಆಚರಿಸಲ್ಪಟ್ಟ ಕನ್ನಡ ರಾಜ್ಯೋತ್ಸವ ಸಂಸ್ಕೃತಿ ಸಂವರ್ಧನೆಗೆ ಹೊಸ ತಲೆಮಾರು ಸಿದ್ಧವಾಗಲಿ : ಎಡನೀರು ಸಚ್ಚಿದಾನಂದ ಭಾರತೀಶ್ರೀ

ಮುಂಬಯಿ: ಕಾಸರಗೋಡು ಇಲ್ಲಿನ ಕನ್ನಡ ಭಾಷೆ, ಸಂಸ್ಕೃತಿ ಸಂವರ್ಧನೆಗೆ ಹೊಸ ತಲೆಮಾರನ್ನು ಸಿದ್ಧ್ದಪಡಿಸುವ ಕ್ರಿಯಾತ್ಮಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವೂ ಸಮಗ್ರ ಯೋಜನೆಗಳೊಂದಿಗೆ ವ್ಯಾಪಕ ಸಹಕಾರ, ಬೆಂಬಲ ನೀಡಬೇಕು ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ತಿಳಿಸಿದರು.bdk_06 dcmr_04(1)

ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಇದರ ನೇತೃತ್ವದಲ್ಲಿ ಭಾನುವಾರ ಕಾಸರಗೋಡು ಕ್ಯಾಪಿಟಲ್ ಇನ್ ಸಭಾಂಗಣದಲ್ಲಿ ಆಯೋಜಿಸಲಾದ ಗಡಿನಾಡ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.bdk_06 dcmr_04(2)

ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಪ್ರಾಚೀನ ಕನ್ನಡ ಸಾಂಸ್ಕೃತಿಕ ನೆಲೆಗಟ್ಟು ಬಹುವಿಶಾಲವಾಗಿ ಹರಡಿರುವುದಕ್ಕೆ ಸಾಕ್ಷಿಯಾಗಿ ಗಡಿನಾಡು ಕಾಸರಗೋಡಲ್ಲಿ ಇಂದಿಗೂ ಕನ್ನಡದ ಸೊಗಡು ಉಳಿದು ಬೆಳೆದಿರುವುದು ಹೆಮ್ಮೆ ಎನಿಸಿದೆ. ಸವಾಲುಗಳ ನಡುವೆಯೂ ಅಸ್ಮಿತೆಯನ್ನು ಕಾಪಿಡುವಲ್ಲಿ ತಲೆಮಾರಿಂದ ತಲೆಮಾರಿಗೆ ನಡೆದುಬರುತ್ತಿರುವ ಹೋರಾಟದ ಹಾದಿಯ ಬದುಕುಗಳು ಇನ್ನಷ್ಟು ನಲುಗದಿರಲು ಪ್ರತಿಯೊಬ್ಬ ಕನ್ನಡ ಮನಸ್ಸೂ ಕೈಜೋಡಿಸುವ ಸನ್ಮನಸ್ಸು ಮೂಡಿಬರಬೇಕು. ಸಾಧಕರು, ಸಾಹಿತಿಗಳು, ಹೋರಾಟಗಾರ ರು, ಕಲಾವಿದರುಗಳನ್ನು ಗುರುತಿಸಿ ಗೌರವಿಸುವುದು ಇಂತಹ ಪ್ರೇರಣದಾಯಿ ಚಟುವಟಿಕೆಗಳ ಭಾಗ ಎಂದರು.bdk_06 dcmr_04(3)

ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಸಂಸ್ಥಾಪಕ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಹುಭಾಷಾ ನೆಲೆಗಟ್ಟಿನ ಕಾಸರಗೋಡು ಸಮಗ್ರ ಕರ್ನಾಟಕಕ್ಕೇ ಮಾದರಿಯಾದ ಕನ್ನಡ ಪ್ರೇಮವನ್ನು ಉಳಿಸಿ ಬೆಳೆಸಿಕೊಂಡಿರುವುದು ಸ್ತುತ್ಯರ್ಹವಾದುದು. ಈ ನಿಟ್ಟಿನಲ್ಲಿ ಸಹೃದಯರ ಪ್ರೋತ್ಸಾಹ ಉತ್ಸಾಹ ನೀಡುತ್ತದೆ ಎಂದರು.

ಕರ್ನಾಟಕ ಉಪ್ಪಾರ ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ.ಕೆ ಗಿರೀಶ್ ಉಪ್ಪಾರ, ಶಾಸಕ ಎನ್.ಎ ನೆಲ್ಲಿಕುನ್ನು, ಎ.ಕೆ.ಎಂ ಅಶ್ರಫ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗ ಆಯೋಗದ ಸದಸ್ಯ ಕೆ.ಟಿ ಸುವರ್ಣ, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎ.ಆರ್ ಸುಬ್ಬಯ್ಯಕಟ್ಟೆ, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಶುಭಾಶಂಸನೆಗೈದರು.

ಈ ಸಂದರ್ಭ ದೈವನರ್ತಕ ಕಲಾವಿದ ಡಾ| ರವೀಶ ಪರವ, ಕನ್ನಡಪರ ಸಂಘಟಕ ಎಸ್.ಎಲ್ ಭಾರಧ್ವಾಜ್ ಬೇಕಲ್ ಅವರನ್ನು ಗೌರವಿಸಲಾಯಿತು. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ ಎನ್., ಝಡ್.ಎ ಕಯ್ಯಾರು, ರವಿ ನಾಯ್ಕಾಪು, ಪ್ರೊ| ಎ.ಶ್ರೀನಾಥ್, ಶ್ರೀಕಾಂತ್ ನೆಟ್ಟಣಿಗೆ, ಅಶ್ವಥ್ ಪೂಜಾರಿ ಲಾಲ್ ಬಾಗ್, ಅಕ್ಷತಾ ರಾಜ್ ಪೆರ್ಲ, ವನಿತಾ ವಾಣಿ ಕ್ರಾಸ್ತ, ಅಶ್ರಫ್ ಬೆದ್ರಂಪಳ್ಳ, ಹರೀಶ್ ಗೋಸಾಡ, ರೇಷ್ಮಾ, ತೇಜಕುಮಾರಿ, ವಸಂತ, ಆಶಾ, ಜಯಲಕ್ಷ್ಮಿ, ಸಂಧ್ಯಾಗೀತ ಬಾಯಾರು ಉಪಸ್ಥಿತರಿದ್ದರು.

ರವಿ ನಾಯ್ಕಾಪು ಹಾಗೂ ವಿದ್ಯಾ ಗಣೇಶ್ ಅಣಂಗೂರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮೊದಲು ಡಾ| ರತ್ನಾಕರ ಮಲ್ಲಮೂಲೆ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter