ಮುಂಬಯಿ : ಪಾರೆಕಟ್ಟೆಯ ರಂಗ ಕುಟೀರ ಕಾಸರಗೋಡು ನೇತೃತ್ವದಲ್ಲಿ ರಂಗೋತ್ಸವ ಕಾರ್ಯಕ್ರಮ ಇದೇ ಡಿ.೧೨ರ ಭಾನುವಾರ ಅಪರಾಹ್ನ ೨.೦೦ ಗಂಟೆಯಿಂದ ಕಾಸರಗೋಡು ಮುನ್ಸಿಪಲ್ ಕಾನ್ಪರೆನ್ಸ್ ಸಭಾಂಗಣದಲ್ಲಿ ನಡೆಯಲಿದೆ.
ರಂಗ ಕುಟೀರದ ನಿರ್ದೇಶಕ, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಸುಕನ್ಯ ಮಾರುತಿ ಉದ್ಘಾಟಿಸುವರು. ಹಿರಿಯ ರಂಗನಟ ದೇವರಾಜ್ ಡಿ.ಮುಖ್ಯ ಅತಿಥಿಯಾಗಿ ಆಗಮಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಬಿ., ಸಾಣೇಹಳ್ಳಿಯ ರಂಗಸಹಾಸ ಟ್ರಸ್ಟ್ ಕಾರ್ಯದರ್ಶಿ ಕೆ.ಮಲ್ಲಯ್ಯ ಶ್ರೀಮಠ ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ದಿ| ಡಾ| ಸಿದ್ದಲಿಂಗಯ್ಯ ಸ್ಮಾರಕ ಪ್ರಶಸ್ತಿಯನ್ನು ಚಲನಚಿತ್ರ ಹಿನ್ನೆಲೆ ಗಾಯಕ ರಮೇಶ್ ಚಂದ್ರ ಅವರಿಗೆ ಪ್ರದಾನಿಸಲಾಗುವುದು. ಉದುಮ ಶಾಸಕ ನ್ಯಾಯವಾದಿ ಸಿ.ಹೆಚ್.ಕುಂಞಬು ಪ್ರಶಸ್ತಿ ಪ್ರದಾನಿಸುವರು.
ಈ ಸಂದರ್ಭ ನೃತ್ಯ ವೈವಿಧ್ಯ, ಕೂಚುಪುಡಿ ನೃತ್ಯ, ಸುಗಮ ಸಂಗೀತ, ನಾ ಸತ್ತಾಗ ಕನ್ನಡ ರಂಗ ನಾಟಕದ ಪ್ರದರ್ಶನ ನಡೆಯಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.
