ಶ್ರೀ ಸುಬ್ರಹ್ಮಣ್ಯ ಮಠ ಮುಂಬಯಿ ಶಾಖೆಯಲ್ಲಿ ವಾರ್ಷಿಕ ಶ್ರೀ ಸ್ಕಂದ ಷಷ್ಠಿ ಮಹೋತ್ಸವ
ಮುಂಬಯಿ : ಬೃಹನ್ಮುಂಬಯಿ ಚೆಂಬೂರು ಛೆಡ್ಡಾ ನಗರದ ಶ್ರೀನಾಗಸುಬ್ರಹ್ಮಣ್ಯ ಸನ್ನಿಧಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ೨೦೨೧ನೇ ವಾರ್ಷಿಕ ಶ್ರೀ ಸ್ಕಂದ ಷಷ್ಠಿ (ಚಂಪಾ ಷಷ್ಠಿ) ಮಹೋತ್ಸವವು ಇದೇ ಡಿ.೦೮ನೇ ಬುಧವಾರ ಮೊದಲ್ಗೊಂಡು ಡಿ.೧೦ರಂದು ಶುಕ್ರವಾರ ಈ ಮೂರು ದಿನಗಳಲ್ಲಿ ಸಂಪ್ರದಾಯಿಕವಾಗಿ ನೆರವೇರಿಸಲಾಗುವುದು ಎಂದು ಶ್ರೀ ಸುಬ್ರಹ್ಮಣ್ಯ ಮಠ ಮುಂಬಯಿ ಶಾಖೆಯ ವ್ಯವಸ್ಥಾಪಕರು ತಿಳಿಸಿದ್ದಾರೆ.
ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನವಾದ ಶ್ರೀ ಸಂಪುಟ ನರಸಿಂಹಸ್ವಾಮೀ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ಪೀಠಾಧಿಪತಿಗಳಾದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಅವರ ಆಶೀರ್ವಾದ ಹಾಗೂ ಮಾರ್ಗದರ್ಶನಗಳೊಂದಿಗೆ ನೇರವೇರಿಸಲಾಗುವ ವಾರ್ಷಿಕ ಶ್ರೀ ಸ್ಕಂದ ಷಷ್ಠಿ ಉತ್ಸವ ನಿಮಿತ್ತ ಡಿ.೦೮ರಂದು ಬುಧವಾರ ಪ್ರಾಯಶ್ಚಿತ ಹೋಮದಿಗಳು, ಡಿ.೦೯ರಂದು ಗುರುವಾರ ಸಾಮೂಹಿಕ ಅಶ್ಲೇಷ ಬಲಿ, ಅಶ್ಲೇಷ ಬಲಿ, ನವಕ ಕಲಶಾದಿ ಪೂಜೆ, ಪಲ್ಲಕಿ ಉತ್ಸವ, ಡಿ.೧೦ನೇ ಶುಕ್ರವಾರ ಪಂಚವಿಶತಿ ಕಲಶಪೂರ್ವಕ ಸಂಪ್ರೂಷಣೆ ಇತ್ಯಾದಿ ಪೂಜಾಧಿಗಳನ್ನು ನಡೆಸಲಾಗುವುದು.
ಕೋವಿಡ್-೧೯, ಒಮಿಕ್ರೋನ್ ಮುನ್ನಚ್ಚರಿಕೆಯ ಕಾರಣ ಭಕ್ತರು ಸರ್ಕಾರದ ನಿಯಮಗಳನ್ನು ಅನುಸರಿಸಿ ಸಾಮಾಜಿಕ ಅಂತರದೊಂದಿಗೆ ಮಾಸ್ಕ್ ಧರಿಸಿ ಮಹಾನಗರದ ಸದ್ಭಕ್ತರು ಬಂಧು-ಬಾಂಧವರೊಡಗೂಡಿ ಆಗಮಿಸಿ, ತನು, ಮನ, ಧನಗಳ ಸಹಕರಿಸಿ ಶ್ರೀದೇವರ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ಶ್ರೀ ಸುಬ್ರಹ್ಮಣ್ಯ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಮಠದ ವ್ಯವಸ್ಥಾಪಕರುಗಳಾದ ವಿಷ್ಣು ಕಾರಂತ್ ಈ ಮೂಲಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.