Published On: Mon, Dec 6th, 2021

ಕೈಕಂಬ ಶ್ರೀ ಸುಬ್ರಹ್ಮಣೇಶ್ವರ ಯಕ್ಷ ನಾಟ್ಯ ಕಲಾ ಕೇಂದ್ರ ತಕದಿಮಿ(ರಿ) ತೃತೀಯ ವಾರ್ಷಿಕೋತ್ಸವ

ಕೈಕಂಬ: ಅನ್ಯ ಕಲಾ ಪ್ರಕಾರಗಳ ಭರಾಟೆಯಲ್ಲಿ ಯಕ್ಷಗಾನ ಯಾವತ್ತೂ ತನ್ನತನ ಬಿಟುಕೊಟ್ಟಿಲ್ಲ. ಸ್ಪರ್ಧಾತ್ಮಕ ವರ್ತಮಾನದಲ್ಲಿ ಯಕ್ಷಗಾನ ಉಳಿಸಿ ಬೆಳೆಸುವುದು ಸವಾಲಿನ ಕೆಲಸ. ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷ ನಾಟ್ಯ ಕಲಾ ಕೇಂದ್ರ ತಕದಿಮಿ ಇದರ ಸಾಧನೆ ಸ್ತುಸ್ಯಾರ್ಹ ಎಂದು ಬಜ್ಪೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಹೇಳಿದರು.gur-dec-4-guru vandane

ಗುರುಪುರ ಕೈಕಂಬಕ್ಕೆ ಹತ್ತಿರದ ಖಾಸಗಿ ಸಭಾಗೃಹದಲ್ಲಿ ಶನಿವಾರ ಆಯೋಜಿಸಲಾದ ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷ ನಾಟ್ಯ ಕಲಾ ಕೇಂದ್ರ ತಕದಿಮಿ(ರಿ) ಇದರ ತೃತೀಯ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.gur-dec-4-sandesh

ತಂಡದ ಅಧ್ಯಕ್ಷ ರಮೇಶ್ ಕುಲಶೇಖರ ಮಾತನಾಡಿ, ಕೈಕಂಬ ಪರಿಸರದ ಕಲಾ ಪೋಷಕರ ಸಹಕಾರದಿಂದ ಯಕ್ಷ ತಂಡ ಇಂದು ಇಷ್ಟೆತ್ತರಕ್ಕೇರಿದೆ. ಇದರಲ್ಲಿ ಮಕ್ಕಳು ಮತ್ತು ಮಕ್ಕಳ ಪಾಲಕರ ಪಾತ್ರ ಮರೆಯುವಂತಿಲ್ಲ ಎಂದರು. ತಂಡದ ಗೌರವಾಧ್ಯಕ್ಷ ಕೈಕಂಬದ ಹೋಟೆಲ್ ಉದ್ಯಮಿ ಎಂ. ಹರಿ ರಾವ್ ಅಧ್ಯಕ್ಷತೆ ವಹಿಸಿದ್ದರು.gur-dec-4-sanmana(narayana)

ಸಮಾರಂಭದಲ್ಲಿ ಯಕ್ಷರಂಗದ ಹಿರಿಯ ಹವ್ಯಾಸಿ ಕಲಾವಿದ ನಾರಾಯಣ ಮಳಲಿ ಯಾನೆ ಏಜೆಂಟ್ ನಾರಾಯಣ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಜೊತೆಗೆ ತಂಡದ ಮಕ್ಕಳ ಭಾಗವತಿಕೆ ಗುರು ಭಾಗವತ ಶ್ರೀನಿವಾಸ್ ಬಳ್ಳಮಂಜ, ಭಜನೆ ಗುರು ಸತೀಶ್ ಪೂಂಜ ಹಾಗೂ ಯಕ್ಷಗಾನ ನಾಟ್ಯ ಗುರು ರಕ್ಷಿತ್ ಶೆಟ್ಟಿ ಪಡ್ರೆ ಅವರಿಗೆ ಗುರುವಂದನೆ ಗೌರವ ನೀಡಲಾಯಿತು.gur-dec-4-udgatane(hari rao)

ಸಭೆಯಲ್ಲಿ ಮಾತೃಭೂಮಿ ಸೌಹಾರ್ದ ಕೋ ಅಪರೇಟಿವ್ ಬ್ಯಾಂಕ್‌ನ ಎಂಡಿ ಕೃಷ್ಣ ಕೊಂಪದವು, ಕೈಕಂಬ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿನೋದ್ ಮಾಡ, ಉದ್ಯಮಿಗಳಾದ ರಾಜೀವ ಕೆ, ಶ್ರೀಧರ ರಾವ್ ಚಂದ್ರಹಾಸ ಶೆಟ್ಟಿ ನಾರಳ, ಉಮೇಶ್ ಆರ್ ಭಂಡಾರಿ, ಜಯರಾಮ ಶೆಟ್ಟಿ, ಪ್ರಾಂಶಪಾಲ ಮಹೇಶ್ ಶೆಟ್ಟಿ, ತಂಡದ ಪ್ರಧಾನ ಸಂಚಾಲಕ ಪುಷ್ಪರಾಜ ಕೆ, ಮಹೇಶ್ ಶೆಟ್ಟಿ ಕೊಳಂಬೆ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.gur-dec-4-udgatane(sandesh)

ಪ್ರಾಣೇಶ್ ಶೆಟ್ಟಿ ವರದಿ ವಾಚಿಸಿದರು. ಸತೀಶ್ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೆ ಮುಂಚೆ ತಂಡದ ಕಲಾವಿದರಿಂದ ಭಜನೆ, ಭಾಗವತಿಕೆ ಕಾರ್ಯಕ್ರಮ ನಡೆಯಿತು. ಬಳಿಕ ತಕದಿಮಿ ತಂಡದ ೬೭ ಮಕ್ಕಳ ಪಾಲ್ಗೊಳ್ಳುವಿಕೆಯಲ್ಲಿ `ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನಗೊಂಡಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter