ಬಜಪೆ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿಜಿ ಅವರ ಹುಟ್ಟು ಹಬ್ಬ ಜೀವದಾನ ಆಶ್ರಮದಲ್ಲಿ ಆಚರಣೆ
ಬಜಪೆ :ಬೆಳ್ತಂಗಡಿ ತಾಲೂಕಿನಲ್ಲಿ ಜನಮನ್ನಣೆ ಪಡೆದ ಸರ್ಕಲ್ ಇನ್ಸ್ಪೆಕ್ಟರ್ ಇದೀಗ ಬಜಪೆ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಸಂದೇಶ್ ಪಿಜಿ ಅವರ ಹುಟ್ಟುಹಬ್ಬವನ್ನು ಕೈಕಂಬದ ನೂರಾರು ನಿರಾಶಿತರ ಆಶ್ರಮವಾದ ಜೀವದಾನ ಆಶ್ರಮದಲ್ಲಿ ಸರಳವಾಗಿ ಆಚರಿಸಲಾಯಿತು.
ಹುಟ್ಟು ಹಬ್ಬವನ್ನು ಜನಪರ ಸಾಮಾಜಿಕ ಬಡವರ ಬಂಧು ರಾಜ ಕೇಸರಿ ಸಂಘಟನೆಯೊಂದಿಗೆ ಆಚರಿಸಿದ ಬಜಪೆ ದಕ್ಷ ಪೊಲೀಸ್ ಅಧಿಕಾರಿಯಾದ ಸಂದೇಶ ಪಿಜಿ ಯುವಕರಿಗೆ ಮಾದರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ರಾಜಕೇಸರಿ ಸಂಘಟನೆ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ, ಸುರೇಶ್ ಕಟೀಲು, ಕಿಶೋರ್ ಪೂಜಾರಿ ,ಗೌತಮ್ ಪೂಜಾರಿ, ರಾಜಕೇಸರಿ ಸಂಘಟನೆಯ ಸದಸ್ಯರಾದ ದಿನೇಶ್, ಸಂದೇಶ್, ವಿಶ್ವನಾಥ್, ವಿವೇಕ್ , ಅಮ್ರತ್ ರಾಜೇಶ್, ಶಿವಪ್ರಸಾದ್ ಉಪಸ್ಥಿತರಿದ್ದರು.