Published On: Fri, Nov 26th, 2021

ಪುರುಷೋತ್ತಮನ ಪ್ರಸಂಗ ಕನ್ನಡ ಸಿನಿಮಾಕ್ಕೆ ಕಟೀಲ್ ನಲ್ಲಿ ಚಾಲನೆ

ಕಟೀಲು : ರಾಷ್ಟ್ರಕೂಟ ಪಿಚರ್ಸ್ ಲಾಂಛನದಲ್ಲಿ ವಿ ರವಿ ಕುಮಾರ್ ನಿರ್ಮಾಣದಲ್ಲಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಪುರುಷೋತ್ತಮನ‌ ಪ್ರಸಂಗ ಸಿನಿಮಾದ ಮುಹೂರ್ತ ಸಮಾರಂಭ ನವಂಬರ್ 26 ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನೆರವೇರಿತು.2c662a59-d588-47c4-8b27-06c3d295f825

ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣ ಸಿನಿಮಾಕ್ಕೆ ಮುಹೂರ್ತ ನೆರವೇರಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಬಿ.ಆರ್. ಶೆಟ್ಟಿ, ನಿರ್ಮಾಪಕರಾದ ವಿ. ರವಿ ಕುಮಾರ್, ಶ್ಯಾಂಸುದ್ದೀನ್, ಎಚ್.ಕೆ.ಪ್ರಕಾಶ್ ಗೌಡ, ಅಜಯ್ ಪೃಥ್ವಿ, ರಿಷಿಕಾ ನಾಯ್ಕ್, ವಿಜಯಕುಮಾರ್ ಕೊಡಿಯಾಲ್ ಬೈಲ್, ಗಿರೀಶ್ ಎಂ.ಶೆಟ್ಟಿ ಕಟೀಲು, ವಾಲ್ಟರ್ ನಂದಳಿಕೆ, ಜಗನ್ನಾಥ ಶೆಟ್ಟಿ ಬಾಳ, ಸಾಯಿಕೃಷ್ಣ, ಭೋಜರಾಜ ವಾಮಂಜೂರು, ಮೊದಲಾದವರು ಉಪಸ್ಥಿತರಿದ್ದರು.4178a820-2e56-4353-8029-2f8b68e2eecb

ನಿರ್ದೇಶಕ ದೇವದಾಸ ಕಾಪಿಕಾಡ್ ಸ್ವಾಗತಿಸಿದರು. ಆದಿತ್ಯರಾಜ್ ಕಾರ್ಯಕ್ರಮ ನಿರ್ವಹಿಸಿದರು.ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರು ಪುರುಷೋತ್ತಮನ ಪ್ರಸಂಗ ಕನ್ನಡ ಸಿನಿಮಾಕ್ಕೆ ಮಂಗಳೂರು ಸುತ್ತ ಮುತ್ತ ಚಿತ್ರೀಕರಣ ನಡೆಯಲಿದೆ. ಸುಮಾರು 26 ದಿನಗಳ ಕಾಲ ಮಂಗಳೂರಿನಲ್ಲಿ ಚಿತ್ರೀಕರಣ ನಡೆದ ಬಳಿಕ 10 ದಿನಗಳ ಕಾಲ ದುಬಾಯಿಯಲ್ಲಿ ಚಿತ್ರೀಕರಣ ನಡೆಯಲಿದೆ ಎಂದರು.

68f4336b-23a8-4122-9811-806c2d78c226
ಉತ್ತಮ ಹಾಸ್ಯ ಕಥಾಹಂದರವನ್ನು ಒಳಗೊಂಡಿರುವ ಸಿನಿಮಾದಲ್ಲಿ ಪ್ರತಿಯೊಂದು ಪಾತ್ರವೂ ಇಲ್ಲಿ ಕತೆಗೆ ಪೂರಕವಾಗಿ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ.
ಈ ಸಿನಿಮಾದ ಮೂಲಕ ಅಜಯ್ ಪೃಥ್ವಿ ಎಂಬ ನವ ನಟನನ್ನು ಹಾಗೂ ರಿಷಿಕಾ ನಾಯ್ಕ್ ಮತ್ತು ದೀಪಿಕಾ ಎಂಬವರು ಕನ್ನಡಕ್ಕೆ ಪರಿಚಯವಾಗುತ್ತಿದ್ದಾರೆ . ಹಾಸ್ಯ ದಿಗ್ಗಜರನ್ನೊಳಗೊಂಡ ತಾರಾಗಣದಲ್ಲಿ ಬಹಳಷ್ಟು ಮಂದಿ ಹೊಸಬರಿಗೂ ಇಲ್ಲಿ ಅವಕಾಶ ಇದೆ ಎಂದು ಕಾಪಿಕಾಡ್ ತಿಳಿಸಿದರು.

ಕನ್ನಡದಲ್ಲಿ ನಟನಾಗಿ ಗುರುತಿಸಿ ಹೆಸರು ಗಳಿಸಿರುವ ದೇವದಾಸ್ ಕಾಪಿಕಾಡ್ ಮೊದಲನೇ ಬಾರಿಗೆ ಕನ್ನಡದಲ್ಲಿ ಕತೆ ಚಿತ್ರಕತೆ ಸಾಹಿತ್ಯ ಸಂಭಾಷಣೆ ಬರೆದು ಸಿನಿಮಾ ನಿರ್ದೇಶುತ್ತಿದ್ದಾರೆ. ಅಲ್ಲದೆ ಒಂದು ಪ್ರಮುಖ ಪಾತ್ರದಲ್ಲೂ ಅವರು ಕಾಣಿಸಿ ಕೊಳ್ಳುತ್ತಿದ್ದಾರೆ. ಇವರಿಗೆ ನಿರ್ದೇಶನದಲ್ಲಿ ಅರ್ಜುನ್ ಕಾಪಿಕಾಡ್ ಸಹ ನಿರ್ದೇಶಕರಾಗಿ ಸಾಥ್ ನೀಡಲಿದ್ದಾರೆ. ಮೊದಲ ಹಂತದ ಚಿತ್ರೀಕರಣ ಒಂದೇ ಹಂತದಲ್ಲಿ ನಡೆದು ಬಳಿಕ ದುಬಾಯಿಯಲ್ಲಿ ಸಿನಿಮಾಕ್ಕೆ ಚಿತ್ರೀಕರಣ ನಡೆಯಲಿದೆ.

ನಿರ್ಮಾಪಕ  ವಿ. ರವಿ ಕುಮಾರ್ ತಾರಾಂಗಣದಲ್ಲಿ ಅಜಯ್ ನಾಯಕ ನಟ, ರಿಷಿಕಾ ನಾಯ್ಕ್ (ನಾಯಕಿ) ದೀಪಿಕಾ ( ನಾಯಕಿ) ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಸಾಯಿಕೃಷ್ಣ ಕುಡ್ಲ, ಶೋಭರಾಜ್ ಪಾವೂರು, ದೀಪಕ್ ರೈ ಪಾಣಾಜೆ
ಚೇತನ್ ರೈ ಮಾಣಿ ಜ್ಯೋತಿಷ್ ಶೆಟ್ಟಿ ಹಾಗೂ ಇತರರು ಇದ್ದಾರೆ
ತಾಂತ್ರಿಕ ವರ್ಗ: ಸಹ ನಿರ್ದೇಶನ: ಅರ್ಜುನ್ ಕಾಪಿಕಾಡ್ ಸಹಾಯಕ ನಿರ್ದೇಶನ: ಅರ್ಜುನ್ ಕಜೆ, ಪ್ರಶಾಂತ್ ಕಲ್ಲಡ್ಕ, ವಿಕ್ರಮ್ ದೇವಾಡಿಗ, ಅನೂಪ್ ಸಾಗರ್, ಕ್ಯಾಮರಾ -ವಿಷ್ಣು, ಸಹಾಯ: ಪುಟ್ಟ, ರಮ್ಸನ್, ಸಂಗೀತ – ನಕುಲ್ ಅಭಯ, ವಸ್ತ್ರವಿನ್ಯಾಸ – ಶರತ್ ಪೂಜಾರಿ, ಬಾವಾ ಸಹ ನಿರ್ಮಾಪಕರು- ಸಂದೀಪ್ ಶೆಟ್ಟಿ,
ಪ್ರೊಡಕ್ಷನ್ ಟೀಮ್ – ರಿಜ್ವಾನ್ ಸಂತೋಷ್, ರಮಾನಂದ,ಮುನ್ನ, ರಾಜೇಶ್, ಅಬೂಬಕರ್ ಪುತ್ತಾಕ ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter